ಶಿವಮೊಗ್ಗ :
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರ ಬಗ್ಗೆ ಹಗುರವಾಗಿ ಮಾತನಾಡಲು ಕಲಿತಿದ್ದಾರೆ. ಹಿಂದೆ ಬರ ಹಾಗೂ ಅತಿವೃಷ್ಠಿ ಸಮಯದಲ್ಲಿ ಕೇಂದ್ರ ಸರ್ಕಾರ ನೀಡಿದ ಪರಿಹಾರದ ಲೆಕ್ಕ ಮೊದಲು ತಿಳಿದುಕೊಂಡು ಮಾತನಾಡಿ ಎಂದು ಸಂಸದ ಬಿ.ವೈ.ರಾಘವೇಂದ್ರ ಒತ್ತಾಯಿಸಿದರು.
ಬರ ಹಾಗೂ ಅತಿವೃಷ್ಠಿ ಪರಿಹಾರದ ವಿಚಾರವಾಗಿ ೨೦೦೬ರಿಂದ ೨೦೧೪ರವರೆಗೆ ಇದ್ದ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ೨೨೫೦ ಕೋಟಿ ರೂ. ಪರಿಹಾರ ಸಿಕ್ಕಿತ್ತು. ಇದೇ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವಾಗ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ೧೩೫೦೦ ಕೋಟಿ ರೂ. ಪರಿಹಾರ ನೀಡಿದೆ ಎಂದರು.
ಬಿಜೆಪಿ ಸರ್ಕಾರ ಹಾಗೂ ಬಿಜೆಪಿಯ ನಾಯಕರುಗಳು ರಾಜ್ಯ ಸರ್ಕಾರಕ್ಕೆ ತಂದ ಮೂಲದ ಬಗ್ಗೆ ಜನರ ಮನದಲ್ಲಿ ಅನಗತ್ಯ ಗೊಂದಲ ಎಬ್ಬಿಸುವ ಕೆಲಸ ಮಾಡಬೇಡಿ. ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ ಮಾಡಬೇಡಿ. ಕೂಡಲೇ ರಾಜ್ಯದ ರೈತರಿಗೆ ಬರ ಪರಿಹಾರದ ಹಣವನ್ನು ಹೆಚ್ಚು ಮಾಡದಿದ್ದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತಿದೆ ಎಂದಿದ್ದಾರೆ.
ಹಿಂದೆ ಮಳೆಯಾಶ್ರಿತ ಹಾಗೂ ನೀರಾವರಿ ಭೂಮಿಗೆ ಕೇಂದ್ರದಿಂದ ನೀಡುವ ಪರಿಹಾರ ಹಣ ಹೆಚ್ಚಾಗಿದೆ. ಅದೇ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಇದ್ದಾಗಲೂ ಸಹ ಸಾಕಷ್ಟು ಅಂದರೆ ಅತಿ ಹೆಚ್ಚು ಪರಿಹಾರ ನೀಡಿದ್ದೇವು. ಆದರೂ ತಾವು ಈಗ ರಾಜ್ಯ ಸರ್ಕಾರದಿಂದ ಪರಿಹಾರದ ಹಣವನ್ನು ಕಡಿತಗೊಳಿಸಿರುವುದು ಏಕೆ ಎಂದು ಕಳವಳ ವ್ಯಕ್ತಪಡಿಸಿದರು