Site icon TUNGATARANGA

ವಿಐಎಸ್ಎಲ್ ಶತಮಾನೋತ್ಸವ |ನ.3ರಿಂದ ನ.5ರವರೆಗೆ ಮೂರು ದಿನಗಳ ಉತ್ಸವ


ಭದ್ರಾವತಿ: ನಗರದಲ್ಲಿ ನ.3ರಿಂದ ನ.5ರವರೆಗೆ ವಿಐಎಸ್ಎಲ್ ಕ್ರೀಡಾಂಗಣದಲ್ಲಿ ಆಯೋಜಿಸಿರುವ ವಿಐಎಸ್ಎಲ್ ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಿದ್ಧತೆಗಳು ಆರಂಭಗೊಂಡಿವೆ.


ನ.3ರಂದು ಶುಕ್ರವಾರ ಸಂಜೆ‌ 4.30ಕ್ಕೆ ಹಳೆನಗರದ ಶ್ರೀಲಕ್ಷ್ಮೀನರಸಿಂಹ ದೇವಾಲಯದಲ್ಲಿ ವಿಐಎಸ್ಎಲ್ ಮಾಜಿ ಉದ್ಯೋಗಿ ಹಾಗು ಚಲನಚಿತ್ರನಟ ಭದ್ರಾರತಿಗೆ ಚಾಲನೆ ನೀಡಲಿದ್ದಾರೆ. ನಂತರ ಜ್ಯೋತಿಯನ್ನು ಶ್ರೀಲಕ್ಷ್ಮೀನರಸಿಂಹ ದೇವಾಲಯದಿಂದ ಹಳದಮ್ಮ ಕೇರಿ, ರಂಗಪ್ಪ ವೃತ್ತ, ಬಿ.ಹೆಚ್.ರಸ್ತೆ, ಮಾಧವಚಾರ್ ವೃತ್ತದ ಮಾರ್ಗದ ಮೂಲಕ ಭದ್ರಾ ಹಳೇ ಸೇತುವೆ ಬಳಿಯ ಶ್ರೀಸಂಗಮೇಶ್ವರ ದೇವಾಲಯಕ್ಕೆ ಮೆರವಣಿಗೆ ಮೂಲಕ ತಂದು ಭದ್ರಾರತಿ ಪೂಜೆ ನೆರವೇರಿಸಲಾಗುವುದು.


ನ.4ಮತ್ತು 5ರಂದು ವಿಐಎಸ್ಎಲ್ ಹಾಕಿ ಕ್ರೀಡಾಂಗಣದ ಆವರಣದಲ್ಲಿ ಸಂಜೆ 7.00 ಗಂಟೆಗೆ ಸಾಂಸ್ಕೃತಿಕ ಸಂಭ್ರಮ ನೆರವೇರಲಿದೆ.
ನ.4ರ ಶನಿವಾರದಂದು “ಭ್ರಮರಿ’ ತಂಡದ ಸ್ನೇಹಾ ಕಪ್ಪಣ್ಣ ಮತ್ತು ತಂಡದಿಂದ “ನೃತ್ಯ ಸಂಭ್ರಮ’ ಏರ್ಪಡಿಸಲಾಗಿದ್ದು, ಮೈಸೂರು ಯದುವಂಶದ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ.


ನ.5ರ ಭಾನುವಾರ “ಸಂಗೀತ ರಂಜೆ” ಗೀತ-ಸಂಗೀತ-ಹಾಸ್ಯಗಳ ಸಂಭ್ರಮ ನಡೆಯಲಿದೆ. ಪ್ರಖ್ಯಾತ ಚಲನಚಿತ್ರ ಹಿನ್ನಲೆ ಗಾಯಕಿ ಅರ್ಚನಾ ಉಡುಪ ಮತ್ತು ತಂಡದವರಿಂದ ರಸಮಂಜರಿ ಹಾಗು ಪ್ರಖ್ಯಾತ ಹಾಸ್ಯಕಲಾವಿದ ಮಿಮಿಕ್ರಿ ಗೋಪಿ ರವರಿಂದ “ನಗೆ ಸಂಭ್ರಮ” ಪ್ರದರ್ಶನಗೊಳ್ಳಲಿದೆ.


ಭದ್ರಾವತಿಯ ಸಮಸ್ತ ಜನತೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸ್ವಾಗತ ಸಮಿತಿ ಕೋರಿದೆ.

Exit mobile version