Site icon TUNGATARANGA

ಶಿವಮೊಗ್ಗ ನಗರದಲ್ಲಿ ಇವತ್ತೇನಾಗಿದೆ, ಫುಲ್ ಡಿಟೈಲ್..!

ಶಿವಮೊಗ್ಗ ನ.04:
ಶಿವಮೊಗ್ಗ ನಗರದ ಮೂರು ವಾರ್ಡ್ ಗಳನ್ನು ಹೊರತುಪಡಿಸಿ ಉಳಿದೆಡೆ 144 ಸೆಕ್ಷನ್ ಪ್ರಕಾರ ಪ್ರತಿಬಂಧಕಾಜ್ಞೆ ಆದೇಶವಿದ್ದರೂ ಇಂದು ಬೆಳಿಗ್ಗೆಯಿಂದಲೇ ಹಾಲನ್ನು ಹೊರತುಪಡಿಸಿ ಉಳಿದ ಯಾವುದೇ ಮಾರಾಟ ವ್ಯವಸ್ಥೆಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ.
ಶಿವಮೊಗ್ಗ ನಗರದ ಲಕ್ಷ್ಮಿ ಟಾಕೀಸ್, ಎಪಿಎಂಸಿ ಆವರಣ, ವಿನೋಬನಗರ, ಕಾಶಿಪುರ, ಗೋಪಾಳ ಸೇರಿದಂತೆ ಬಹಳಷ್ಟು ಕಡೆ ಮುಂಜಾನೆಯಿಂದಲೇ ವ್ಯವಹಾರಿಕ ಹಾಗೂ ಇತರೆ ಚಟುವಟಿಕೆ ನಿಂತಿದೆ.


ಇತ್ತೀಚೆಗಷ್ಟೇ ಕೊರೋನಾ ಕಿರಿಕಿರಿಗೆ ಲಾಕ್ಡೌನ್, ಸೀಲ್ಡೌನ್ ಅನುಭವಿಸಿ ನಿತ್ರಾಣರಾಗಿದ್ದ ಜನತೆ ಇಂದು ಮತ್ತೆ ಹಳೆಯ ಸ್ಥಿತಿ ನೆನೆದು ಬೇಸರ ವ್ಯಕ್ತಪಡಿಸುತ್ತಿದ್ದರು.
ನಗರದ ಲಷ್ಕರ್ ಮೊಹಲ್ಲ ಬ್ಯಾಂಕ್ ಮೊಹಲ್ಲಾ ಗಾಂಧಿ ಬಜಾರ್ ಮೊದಲಾದ ಭಾಗಗಳಲ್ಲಿ ಶಿವಮೊಗ್ಗ ನಗರದ ಮೂರು ವಾರ್ಡ್ಗಳಲ್ಲಿ ಕರ್ಪ್ಯೂ ಜಾರಿಯಲ್ಲಿದ್ದು ಅಲ್ಲಿಯ ಪರಿಸ್ಥಿತಿ ಇದಕ್ಕಿಂತಲೂ ಬಿಗಿಯಾಗಿದೆ.
ಒಟ್ಟಾರೆ ಇಂದು ಬೆಳಗಿನ ವಾಕಿಂಗ್, ಇತರೆ ನಿತ್ಯದ ವ್ಯವಸ್ಥೆ , ಹೋಲೆಲ್ ಗಳ ತಿನಿಸುಗಳು ಕಾಣಿಸಲಿಲ್ಲ. ನಗರದ ಬಹಳಷ್ಟು ಕಡೆ ಪೊಲೀಸರು ತರಕಾರಿ ಮತ್ತಿತರ ವಸ್ತುಗಳ ಮಾರಾಟ ಮಾಡುವವರನ್ನು ಕೆಲವೆಡೆ ಪೊಲೀಸರು ಬಾಗಿಲು ಹಾಕಿಸುತ್ತಿದ್ದ ಸನ್ನಿವೇಶ ಕಂಡುಬಂದಿತ್ತು. ಇದು ಅವರ ಕರ್ತವ್ಯವಾಗಿತ್ತು. ನಗರದ ಶಾಂತಿ ಪಾಪಾಡುವ ದೊಡ್ಡ ಜವಾಬ್ಧಾರಿ ಅವರ ಮೇಲಿದೆ.
ಶಿವಮೊಗ್ಗ ನಗರಕ್ಕೆ ಸುಮಾರು ಪೊಲೀಸರು ಭದ್ರತೆ ಗೋಸ್ಕರ ಬಂದಿದ್ದಾರೆ. ನಗರದೆಲ್ಲೆಡೆ ಪೊಲೀಸರೇ ಕಾಣಿಸುತ್ತಿದ್ದಾರೆ.
ನಗರ ಸಂಚಾರದ ಬಸ್ ಗಳನ್ನು ಬಿಡಬೇಕೇ ಬೇಡವೆ ಎಂದು ಬಸ್ ಮಾಲೀಕರು ಚಿಂತಿಸುತ್ತಿದ್ದಾರೆ
ಏಕೆಂದರೆ ನಗರದ ಎಲ್ಲೆಡೆ ಬ್ಯಾರಿಕೇಡ್ ಕಾಣುತ್ತಿವೆ.
ಆಟೋಗಳ ಸಂಚಾರ ವಿರಳವಾಗಿದೆ. ಹಿಂದಿನ ಸೀಲ್ಡೌನ್ ನ ಅನುಭವ ಎದ್ದು ಕಾಣುತ್ತಿದೆ. ಇನ್ನಷ್ಟು ಮಾಹಿತಿಗಳನ್ನು ಹುಡುಕುವ ಸಂಗ್ರಹಿಸುವ ಕಾರ್ಯ ನಮ್ಮ ಮುಂದಿದೆ.

Exit mobile version