Site icon TUNGATARANGA

ಶಿವಮೊಗ್ಗ/ ವಿಮಾನ ತಾಂತ್ರಿಕ ದೋಷವಂತೆ, ಇಂದೂ ಕಿರಿಕಿರಿ!? ಬೆಂಗಳೂರಿಗೆ ಹೋಯ್ತಾ? ಮಾಹಿತಿ ಕೊಡೋರಿಗೆ ಕೆಲವರಿಗಷ್ಟೆ ಸೀಮಿತವಂತೆ.., ಜೈ ಇಮಾನ!

ಶಿವಮೊಗ್ಗ, ನ.01:
ಬೆಂಗಳೂರು ಮತ್ತು ಶಿವಮೊಗ್ಗ ನಡುವಿನ ಇಂಡಿಗೋ ವಿಮಾನ ಈಗ್ಗೆ ಎರಡು ತಿಂಗಳಲ್ಲಿ ಹಲವು ಬಾರಿ ವಿಳಂಬ ಇಲ್ಲವೇ ತಡೆಯಾಗುತ್ತಿದೆ. ಇಂದೂ ಬೆಂಗಳೂರಿಗೆ ಹೋಗಬೇಕಿದ್ದ ಹಾರಾಟ ತಡವಾಗಿದೆ.


ಬೆಂಗಳೂರಿನಿಂದ 9-50 ಕ್ಕೆ ಕೆಂಪೇಗೌಡ ವಿಮಾನ‌ ನಿಲ್ದಾಣದಿಂದ ಹಾರಾಟ ಆರಂಭಿಸಿದ್ದರೂ ಸಹ ಶಿವಮೊಗ್ಗಕ್ಕೆ 11-05 ಕ್ಕೆ ಲ್ಯಾಂಡ್ ಆಗಬೇಕಿದ್ದ ವಿಮಾನ 11-20 ಕ್ಕೆ ಲ್ಯಾಂಡ್ ಆಗಿದೆ. 11-30 ಕ್ಕೆ ಶಿವಮೊಗ್ಗದಿಂದ ಪುನಃ ಬೆಂಗಳೂರಿಗೆ ಹೊರಡಬೇಕಾಗಿದ್ದ 7731 ಕ್ರಮ ಸಂಖ್ಯೆಯ ಇಂಡಿಗೋ ಫ್ಲೈಟ್ 1-15 ಆದರೂ ಹಾರಾಡದೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉಳಿದಿದೆ.
ಅಧಿಕಾರಿಗಳ ಪ್ರಕಾರ ವಿಮಾನದ ತಾಂತ್ರಿಕ ದೋಷದಿಂದ ವಿಮಾನ ಹಾರಾಟ ತಡವಾಗಿದೆ ಎನ್ನಲಾಗಿತ್ತು. ಈ ರೀತಿಯ ಹಲವಾರು ಬಾರಿ ತಡ ವಿಮಾನ ಪ್ರಯಾಣದ ಬಿಸಿ ಈಗಾಗಲೇ ಪ್ರಯಾಣಿಕರಿಗೆ ಮುಟ್ಟಿದೆ. ಜೈ ಇಮಾನ?!

Exit mobile version