Site icon TUNGATARANGA

ವಿನೂತನ ಚಟುವಟಿಕೆಗಳಿಂದ ರಾಜ್ಯ ಮಟ್ಟದ ಅತ್ಯುತ್ತಮ ದೊಡ್ಡ ಶಾಖೆ “ಗರಿ” ಮುಡಿಗೇರಿಸಿದೆ ಶಿವಮೊಗ್ಗ ಐಎಂಎ

ಬೀದರಿನಲ್ಲಿ  ಅಕ್ಟೋಬರ್ 28,29 ರಂದು ನಡೆದ ರಾಜ್ಯ ಮಟ್ಟದ ಭಾರತೀಯ ವೈದ್ಯ ಸಮ್ಮೇಳನದಲ್ಲಿ ಐಎಂಎ ಶಿವಮೊಗ್ಗ ಶಾಖೆಗೆ ಅತ್ಯುತ್ತಮ ದೊಡ್ಡ ಶಾಖೆಯ ಪ್ರಶಸ್ತಿ ದೊರೆತಿದೆ .

ಕಳೆದ ಸೆಪ್ಟೆಂಬರ್ 2022 ರಿಂದ ಅಧ್ಯಕ್ಷರಾಗಿ ಡಾ . ಅರುಣ್ ಎಂ ಎಸ್ ಹಾಗು ಕಾರ್ಯದರ್ಶಿ ಡಾ . ರಕ್ಷಾ ರಾವ್ ಅವರ ನೇತೃತ್ವದಲ್ಲಿ ಅಕ್ಟೋಬರ್ 1 , 2023 ವರೆಗೂ ಒಂದು ವರ್ಷ  ಕಾಲಾವಧಿಯಲ್ಲಿ ವೈದ್ಯರಿಗೆ ವೈಜ್ಞಾನಿಕ ಕಲಿಕಾ ಕಾರ್ಯಾಗಾರಗಳು , ವಿಶ್ವ ಅರೋಗ್ಯ ದಿವಸಗಳ ಆಚರಣೆ , ಶಾಲಾ ಕಾಲೇಜುಗಳಲ್ಲಿ ಅರೋಗ್ಯ ಜಾಗೃತಿ , ಮಹಿಳಾ ಆರೋಗ್ಯ , ಸಾರ್ವಜನಿಕರಿಗೆ ಹಾಗು ನರ್ಸಿಂಗ್ ವಿದ್ಯಾರ್ಥಿಗಳಿಗೆ ಜೀವರಕ್ಷಕ ಸಿ ಪಿ ಆರ್ ಕಾರ್ಯಾಗಾರ , ಅಧಿಕಸ್ಯ ಅಧಿಕಫಲಂ ಒಂದು ತಿಂಗಳ ಉಚಿತ ಆರೋಗ್ಯ ಮಾಹಿತಿ ಶಿಭಿರ , ಕೆ – ಲೈವ್ ಜೊತೆಗೆ ನಮಸ್ತೆ ಐಎಂಎ ಯೌಟ್ಯೂಬ್ ಆರೋಗ್ಯ ಮಾಲಿಕೆ ಸರಣಿಗಳು , ವೈದ್ಯರುಗಳಿಗೆ ಹಾಗು ಕುಟುಂಬದವರಿಗೆ ಸಾಂಸ್ಕೃತಿಕ ಸಂಜೆ ಹಾಗು ಚಾರಣ , ಹಿರಿಯ ವೈದ್ಯ ಸದಸ್ಯರಿಗೆ ಮನೆಯಲ್ಲಿ ಭೇಟಿ ಹಾಗು ಕುಶಲೋಪಚಾರ ವಿನಿಮಯ – ಹೀಗೆ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಾರ್ವಜನಿಕ ವಲಯದಲ್ಲಿ ಮನೆಮಾತಾಗಿದ್ದ ಐಎಂಎ ಶಿವಮೊಗ್ಗ, ರಾಜ್ಯಮಟ್ಟದಲ್ಲೂ ಗುರುತಿಸಿಕೊಂಡು ಅತ್ಯುತ್ತಮ ಶಾಖೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ .  

ಐಎಂಎ ರಾಷ್ಟ್ರಾಧ್ಯಕ್ಷರಾದ  ಡಾ .ಅಶೋಕನ್ ಅವರಿಂದ , ರಾಜ್ಯಾಧ್ಯಕ್ಷರಾದ ಡಾ . ಶಿವಕುಮಾರ್ ಲಕ್ಕೋಲ್ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿಯನ್ನು  ಸಮಾರಂಭದಲ್ಲಿ ಅಧ್ಯಕ್ಷರಾದ ಡಾ . ಅರುಣ್ ಎಂ ಎಸ್ ಹಾಗು ಸದಸ್ಯರಾದ ಡಾ . ಎಸ್ . ಬಿ . ಹೆಗ್ಡೆ , ಡಾ . ವಿನಯ ಶ್ರೀನಿವಾಸ್ , ಡಾ . ಶುಭ್ರತ ಸ್ವೀಕರಿಸಿದರು . ಪ್ರಶಸ್ತಿ ಸಮಾರಂಭದಲ್ಲಿ ಅರೋಗ್ಯ ಮಂತ್ರಿ ದಿನೇಶ್ ಗುಂಡೂರಾವ್ ಮತ್ತು ಅರಣ್ಯ ಇಲಾಖೆ ಸಚಿವ ಈಶ್ವರ್ ಕಂಡ್ರೆ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು . ಮಂತ್ರಿ ಗುಂಡೂ ರಾವ್ ಅವರು ವೈದ್ಯರ ಜೀವಾವಧಿ ಇತರರಿಗೆ ಹೋಲಿಸಿದಲ್ಲಿ ಶೇಖಡ 10 ರಷ್ಟು ಕಡಿಮೆ ಎನ್ನುವ ಅಂಕಿಅಂಶ ಕಳವಳಕಾರಿ . ವೈದ್ಯರು ತಮ್ಮ ಹಾಗು ಕುಟುಂಬದ ಕಡೆಗೂ ಹೆಚ್ಚು ಕಾಳಜಿ ವಹಿಸಬೇಕು . ವೈದ್ಯರ ಏಳಿಗೆಗೆ ತಮ್ಮ ಸರಕಾರ ಬದ್ಧವಾಗಿದೆ ಎಂಬ ಭರವಸೆಯ ನುಡಿ ನುಡಿದರು .

ಸಚಿವ ಈಶ್ವರ್ ಕಂಡ್ರೆ ಅವರು ವೈದ್ಯಕೀಯ ಸೇವೆ ಅತ್ಯಂತ ಪವಿತ್ರವಾದ ವೃತ್ತಿ . ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿರುವ ವೈದ್ಯರ ಮೇಲಿನ ಹಲ್ಲೆ ಪ್ರಕರಣಗಳು ಖಂಡನೀಯ . ಹಲ್ಲೆ ಎಸಗುವರ ಮೇಲೆ ಕಾನೂನು ಪ್ರಕಾರ ನಿಯಮಾವಳಿವೆ , ಸೂಕ್ತ ಶಿಕ್ಷೆ ದೊರೆಕಿಸುವಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲು ನಮ್ಮ ಸರಕಾರ ಯಾವಾಗಲೂ ಸಿದ್ಧ ಎಂದು ಹೇಳಿದರು . ರಾಷ್ಟ್ರಮಟ್ಟದ ಎಂಸಿಐ ನಿಂದ ಪ್ರಸ್ತುತ ಏನ್ಎಂಸಿ ನಿಯಂತ್ರಕ ಸಂಸ್ಥೆಯ ಬಗ್ಗೆ ವಿಶ್ಲೇಷಿಸಿದರು .
ರಾಜ್ಯಮಟ್ಟದ ಜೀವಮಾನ ಸಾಧನೆ ಪ್ರಶಸ್ತಿಗೆ ಹಿರಿಯ ಸದಸ್ಯರಾದ ಡಾ. ಎಸ್ . ಬಿ . ಹೆಗ್ಡೆ ಪಾತ್ರರಾಗಿದ್ದು ಶಿವಮೊಗ್ಗ ಐಎಂಎ ಗೆ ಮತ್ತೊಂದು ವೈಶಿಷ್ಟ್ಯ .
ಸಾರ್ವಜನಿಕ ಆರೋಗ್ಯ ಜಾಗೃತಿ ಚಟುವಟಿಕೆಗಳಿಗೂ ಐಎಂಎ ಶಿವಮೊಗ್ಗೆ ಶಾಖೆಯ ಮಹಿಳಾ ವೈದ್ಯರ ಘಟಕ ಡಾ . ವಿನಯ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಗಂಗಾವತಿಯಲ್ಲಿ ನಡೆದ ರಾಜ್ಯ ಮಟ್ಟದ ಮಹಿಳಾ ವೈದ್ಯರ ಸಮ್ಮೇಳನದಲ್ಲಿ ಪ್ರಶಸ್ತಿ ಪಡೆದ ಹೆಗ್ಗಳಿಕೆಗೆ ಪಾತ್ರವಾಯಿತು .
ಯಶಸ್ವಿಯಾದ ಅಧಿಕಾರಾವಧಿಗೆ ಕಾರಣೀಭೂತರಾದ ಎಲ್ಲಾ ಆಡಳಿತ

ವರ್ಗ , ಕಾರ್ಯಕಾರಿ ಸಮಿತಿ ಸದಸ್ಯರಿಗೆ ಹಾಗು ಸದಸ್ಯರಿಗೆ , ಅಂತೆಯೇ ಎಲ್ಲಾ ಚಟುವಟಿಕೆಗಳನ್ನು ಜನರಿಗೆ ತಲುಪುವಲ್ಲಿ ಸಹಕರಿಸಿದ ಮಾಧ್ಯಮ ಮಿತ್ರರಿಗು ಡಾ . ಅರುಣ್ ಹಾಗು ಡಾ . ರಕ್ಷಾ ರಾವ್ ಧನ್ಯವಾಧ ತಿಳಿಸಿರುತ್ತಾರೆ .  ಪ್ರಸ್ತುತ ಅಧ್ಯಕ್ಷರಾದ ಡಾ . ರಮೇಶ್ ಹಾಗು ಕಾರ್ಯದರ್ಶಿಗಳಾದ ಡಾ. ಅರವಿಂದನ್ ಅವರಿಗೆ ಶುಭಹಾರೈಸಿದ್ದಾರೆ 

Exit mobile version