Site icon TUNGATARANGA

ಕೊಲೆ ಪ್ರಕರಣ: ನಾಲ್ವರ ಸೆರೆ

ಭದ್ರಾವತಿ, ಅ.೩೦:
ತಾಲ್ಲೂಕಿನ ಗೌಡರಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂ ತರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.


ಅ.೨೦ರಂದು ಗೌಡರಹಳ್ಳಿ ಗ್ರಾಮದಲ್ಲಿ ರೌಡಿಶೀಟರ್ ಸೈಯದ್ ರಾಝಿಕ್ ಕೊಲೆಯಾಗಿತ್ತು. ಎಂಟು ಜನರ ವಿರುದ್ಧ ದೂರು ನೀಡಲಾಗಿತ್ತು.


ಪೊಲೀಸ್ ನಿರೀಕ್ಷಕ ಜಗದೀಶ್ ಸಿ. ಹಂಚಿನಾಳ್ ನೇತೃತ್ವದ ತಂಡ ಮಹಾರಾಷ್ಟ್ರ ಗಡಿಯಲ್ಲಿ ಅ.೨೫ರಂದು ನಾಲ್ವರನ್ನು ಬಂಧಿಸಿತ್ತು. ಉಳಿದವರ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿದೆ.


ತಾಲ್ಲೂಕಿನ ತಿಪ್ಲಾಪುರ ಕ್ಯಾಂಪ್ ಗ್ರಾಮದ ನಿವಾಸಿಗಳಾದ ಸಮೀರ್, ಜಮೀರ್ ಅಲಿಯಾಸ್ ಸಮೀರ್, ನಾಮತ್ ಅಲಿ ಮತ್ತು ಮಹಮ್ಮದ್ ಶಫಿವುಲಾ ಬಂಧಿತರು. ಬಂಧಿತರಿಂದ ಮಾರಕಾಸ್ತ್ರ ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ತಂಡದಲ್ಲಿ ಠಾಣಾಧಿಕಾರಿ ಶ್ರೀಶೈಲ ಕೆಂಚಣ್ಣವರ, ಸಿಬ್ಬಂದಿ ಮಂಜುನಾಥ್, ಈರಯ್ಯ, ಮತ್ತು ಶಿವಪ್ಪ ಇದ್ದರು.

Exit mobile version