ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಕಾರದಿಂದ ಅರ್ಜಿ ಹಾಕಿದವರಿಗೆ ಮೊದಲು ನಿವೇಶನಗಳನ್ನು ಕೊಡಬೇಕು. ಅಲ್ಲಿಯವರೆಗೆ ಯಾವುದೇ ಖಾಸಗಿ ಬಡಾ ವಣೆ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂದು ಸೂಚನೆ ನೀಡಿರುವುದಾಗಿ ನಗರಾಭಿ ವೃದ್ಧಿ ಖಾತೆ ಸಚಿವ ‘ಬೈರತಿ ಸುರೇಶ್ ತಿಳಿಸಿದರು.
ಜಿಲ್ಲಾಡಳಿತ ಸಭಾಂಗಣದಲ್ಲಿ ಶುಕ್ರವಾರ ಇಲಾಖೆ ಪ್ರಗತಿ ಪರಿಶೀಲನೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಸೂಡಾ ವತಿಯಿಂದ ನಿವೇಶನ ಕೋರಿ ಸುಮಾರು ೩೦೦೦ ಜನರು ಅರ್ಜಿ ಹಾಕಿದ್ದಾರೆ. ಅವರಿಗೆ ಮೊದಲ ಆದ್ಯತೆಯಲ್ಲಿ ನಿವೇಶನ ನೀಡು ವಂತೆ ಸೂಚಿಸಿದ್ದೇನೆ. ಇದಕ್ಕಾಗಿ ಸುಮಾರು ೫೦೦ ಎಕರೆ ಅಗತ್ಯ ಬೀಳಲಿದೆ ಎಂದರು.
ಶಿವಮೊಗ್ಗ ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇನ್ನೂ ಒಂದಿಷ್ಟು ಕಾಮಗಾರಿಗಳು ಆಗುವುದು ಬಾಕಿ ಇದೆ. ಈ ಉದ್ದೇಶಕ್ಕಾಗಿ ೭೦೦-೮೦೦ ಕೋಟಿ ರೂ. ಪ್ರಸ್ತಾವನೆ ಬಂದಿದೆ. ಈ ಹಣವನ್ನು ಮಂಜೂರು ಮಾಡಲಾಗುವುದು ಎಂದರು.
ಸ್ಮಾರ್ಟ್ ಸಿಟಿ ಕಾಮಗಾರಿ ಕಳಪೆಯಾ ಗಿದೆ ಎಂಬ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಈ ಬಗ್ಗೆ ತನಿಖೆ ನಡೆಸಲಾಗು ವುದು. ಯಾವುದೇ ಕಾಲಮಿತಿ ನಿಗದಿ ಪಡಿಸಿಲ್ಲ.
ಈಗಾಗಲೇ ಗುತ್ತಿಗೆದಾರರಿಗೆ ಹಣ ಕೂಡ ಪಾವತಿ ಆಗಿದೆ. ಕಳಪೆ ಕಾಮಗಾರಿ ಎಂಬುದು ಕಂಡುಬಂದರೆ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.