Site icon TUNGATARANGA

ಹೊಸಮನೆ ಬಡಾವಣೆಯ ನಾಗರಿಕರ ಬಹು ವರ್ಷಗಳ ಬೇಡಿಕೆ ರಾಜಕಾಲುವೆ : ಸಚಿವ ಬೈರತಿ ಸುರೇಶ್ ರ ವರಿಂದ ಉದ್ಘಾಟನೆ

 *ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯ ನಾಗರಿಕರ ಬಹು ವರ್ಷಗಳ ಬೇಡಿಕೆಯಾಗಿದ ರಾಜಕಾಲುವೆ ನಿರ್ಮಾಣದ ಕಾಮಗಾರಿಯು ಮಹಾನಗರ ಪಾಲಿಕೆಯ 2022- 23ರ ಎಸ್ .ಎಫ್. ಸಿ ವಿಶೇಷ ಅನುದಾನದ ಒಂದು ಕೋಟಿ

ರೂ ವೆಚ್ಚದ ರಾಜಕಾಲುವೆ ಕಾಮಗಾರಿ ಪೂರ್ಣಗೊಂಡಿದ್ದು.  ಇದರ ಉದ್ಘಾಟನೆಯನ್ನು ಇಂದು  ಬೆಳಗ್ಗೆ ಸಂಗೊಳ್ಳಿ ರಾಯಣ್ಣ ರಸ್ತೆಯಲ್ಲಿ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಶ್ರೀ ಬೈರತಿ ಸುರೇಶ್ ರವರು ನೆರೆವೇರಿಸಿದರು*.

*ನಂತರ ಮಾತನಾಡಿದ ಅವರು ಸಂಗೊಳ್ಳಿ ರಾಯಣ್ಣ ರಸ್ತೆ (ಜೈಲ್ ರಸ್ತೆಯ) ಮುಖ್ಯ ಸೇತುವೆಯನ್ನು  ತತ್ತಕ್ಷಣವೇ ವಿಶೇಷ ಅನುದಾನವನ್ನು ಸಿದ್ಧಪಡಿಸಿ ನೂತನ ಸೇತುವೆಯನ್ನು ನಿರ್ಮಾಣ ಮಾಡಲು  ಹಾಗೂ ರಾಜುಕಾಲುವೆ ಮೇಲ್ಭಾಗ ಕವರಿಂಗ್ ಸ್ಲಾಬ್  ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಿದರು*

*ಕಾರ್ಯಕ್ರಮದ ಅಧ್ಯಕ್ಷತೆ ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ರೇಖಾ ರಂಗನಾಥ್  ವಹಿಸಿದ್ದರು ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಆರ್ ಪ್ರಸನ್ನ ಕುಮಾರ್, ಜಿಲ್ಲಾ ಕಾಂಗ್ರೆಸ್

ಅಧ್ಯಕ್ಷ ಹೆಚ್.ಎಸ್ ಸುಂದರೇಶ್, ಯುವ ಮುಖಂಡರಾದ ಕೆ ರಂಗನಾಥ್, ಪ್ರಮುಖರಾದ ಕಲ್ಗೂಡು ರತ್ನಾಕರ್, ಎಂ ಪ್ರವೀಣ್ ಕುಮಾರ್ , ಹೆಚ್.ಪಾಲಾಕ್ಷಿ ಎಸ್.ಎಂ ಶರತ್, ಹೆಚ್ ಪಿ ಗಿರೀಶ್, ಬಿ.ಲೋಕೇಶ್, ಎಸ್.ಕುಮರೇಶ್, ಬಡಾವಣೆಯ ಪ್ರಮುಖರಾದ ಬಸವರಾಜ್ , ಚಂದ್ರು ಗೆಡ್ಡೆ , ಪ್ರಕಾಶ್, ಕೆ ಎಲ್ ಪವನ್, ಇತರರು ಇದ್ದರು*

Exit mobile version