Site icon TUNGATARANGA

ಶಿವಮೊಗ್ಗ ಗಾಂಧಿಬಜಾರ್‌ನಲ್ಲಿ ಗಲಾಟೆ ಏನಾಯ್ತು..!

ಶಿವಮೊಗ್ಗ: ಶಿವಮೊಗ್ಗ ನಗರದ ಗಾಂಧಿ ಬಜಾರ್‌ನಲ್ಲಿ ಆಗಾಗಿದೆ ಇಗಾಗಿದೆ ಎಂದು ಚಿಕ್ಕ ಘಟನೆಗಳನ್ನು ದೊಡ್ಡ ಘಟನೆಗಳಾಗಿ ಬಿಂಬಿಸುವ ಸಾಮಾಜಿಕ ಜಾಲತಾಣ ಹಾಗೂ ಫೋನ್ ಕರೆಗಳ ಹಾವಳಿ ನಿಜಕ್ಕೂ ಖಂಡನೀಯ.

ಕಿರಿಕಿರಿಗೆ ಬ್ರೇಕ್


ಇಂದು ಬೆಳಗ್ಗೆ ಬಜರಂಗದಳದ ಪ್ರಮುಖ ನಾಗೇಶ್ ಎಂಬಾತನ ಮೇಲೆ ವೈಯಕ್ತಿಕ ವಿಚಾರಕ್ಕೆ ಹಲವರು ಹಲ್ಲೆನಡೆಸಿದ್ದಾರೆನ್ನಲಾದ ವಿಷಯಕ್ಕೆ ಸಂಬಂಧಪಟ್ಟಂತೆ ಇಂದು ಗಾಂಧಿ ಬಜಾರ್, ಚೋರ್ ಬಜಾರ್‌ನಲ್ಲಿ ಪ್ರಕ್ಷ್ಯುಬ್ದ ವಾತಾವರಣ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಭಾರಿ ಮುಂಜಾಗೃತ ಕ್ರಮ ಕೈಗೊಂಡಿದ್ದರೂ ಸಹ ಚೋರ್ ಬಜಾರ್‌ನಲ್ಲಿ ಓರ್ವನ ಮೇಲೆ ಹಲ್ಲೆ ನಡೆಸಿದ್ದ ವಿಷಯ ಇಡೀ ಏರಿಯಾವನ್ನು ಆತಂಕಕ್ಕೆ ದೂಡಿತ್ತು.

ಬಾಗಿಲಿಗ ಬ್ರೇಕ್


ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜ್, ಡಿವೈಎಸ್‌ಪಿ ಉಮೇಶ್ ಈಶ್ವರ್ ಚಂದ್ರ, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ವಸಂತ್ ಕುಮಾರ್, ಸಂಜೀವ್ ಕುಮಾರ್, ಹರೀಶ್ ಕುಮಾರ್ ಹಾಗೂ ಎಸ್‌ಐಗಳಾದ ಶಂಕರಮೂರ್ತಿ, ಉಮೇಶ್ ಕುಮಾರ್ ಸೇರಿದಂತೆ ಭಾರಿ ದೊಡ್ಡ ತಂಡ ಗಾಂಧಿ ಬಜಾರ್‌ನಲ್ಲಿ ಬೀಡು ಬಿಟ್ಟು ಪರಿಸ್ಥಿತಿಯನ್ನು ನಿಯಂತ್ರಿಸುತ್ತಿದೆ. ಗಾಂಧಿ ಬಜಾರ್‌ನ ಬಹುತೇಕ ಅಂಗಡಿಗಳು ಬಾಗಿಲು ಮುಚ್ಚಿವೆ.
ಗಾಂಧಿ ಬಜಾರ್‌ನ ಚೋರ್ ಬಜಾರ್‌ನಲ್ಲಿ ಪ್ರಕ್ಷ್ಯಬ್ದ ವಾತಾವರಣ ನಿರ್ಮಾಣವಾಗಿದ್ದು, ಇದಕ್ಕೆ ಬಜರಂಗದಳದ ಕಾರ್ಯಕರ್ತ ನಾಗೇಶ್ (೨೮) ಎಂಬಾತನ ಮೇಲೆ ಇಂದು ಬೆಳಗ್ಗೆ ನೆಹರೂ ಕ್ರೀಡಾಂಗಣದಿಂದ ಮನೆಗೆ ವಾಪಾಸ್ ಬರುತ್ತಿದ್ದಾಗ ಬೈಕ್‌ನಲ್ಲಿ ಬಂದ ನಾಲ್ವರು ದೊಣ್ಣೆಯಿಂದ ಹಲ್ಲೆ ಮಾಡಿದ್ದು ಕಾರಣವೆನ್ನಲಾಗಿದೆ.
ಲಷ್ಕರ್ ಮೊಹಲ್ಲಾ ಹಾಗೂ ಟ್ಯಾಂಕ್ ಮೊಹಲ್ಲಾಗಳಲ್ಲೂ ಜನಗಳ ಗುಂಪುಗೂಡುವಿಕೆ ನಡೆದ್ದಿತ್ತೇನ್ನುವ ಊಹಾಪೋಹಾ ಹೇಳಿಕೆಗಳ ಕೇಳಿ ಬರುತ್ತಿವೆ. ಸುಳ್ಳು ಹೇಳಿಕೆಗಳನ್ನು ನಂಬದಿರಿ ಶಾಂತಿ ಕಾಪಾಡಲು ಬದ್ಧರಾಗಿರಿ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜ್ ತಿಳಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾಡಳಿತದ ಅಧಿಕಾರಿಗಳು, ತಹಸಿಲ್ದಾರ್ ನಾಗರಾಜ್ ಸೇರಿದಂತೆ ಹಲವರು ಭೇಟಿ ನೀಡಿದ್ದರು.

Exit mobile version