Site icon TUNGATARANGA

ಅದ್ದೂರಿಯಾಗಿ ದಸರಾ ಸಂಪನ್ನ |ನಗರದ ಫ್ರೀಡಂ ಪಾರ್ಕ್‌ನಲ್ಲಿ ಲಕ್ಷಾಂತರ ಜನರ ಹರ್ಷೋದ್ಘಾರ | ದೇವಾನುದೇವತೆಗಳ ಮೆರವಣಿಗೆ


ಲಕ್ಷಾಂತರ ಜನರ ಹರ್ಷೋದ್ಘಾರಗಳ ನಡುವೆ ತಹಶೀಲ್ದಾರ್ ಎನ್.ಜೆ. ನಾಗರಾಜ್ ಅಂಬು ಕಡಿಯು ವುದರೊಂದಿಗೆ ರಾವಣದಹನದ ನಡುವೆ ಬಾಣ ಬಿರುಸುಗಳ ಕಣ್ಣು ಕೋರೈಸುವ ಬೆಳಕಿನ ಹೊಳಪಿ ನೊಂದಿಗೆ ದಸರಾ ಸಂಪನ್ನಗೊಂಡಿತು.


ಇಡೀ ಫ್ರೀಡಂ ಪಾರ್ಕ್ ಜನರಿಂದ ತುಂಬಿಹೋ ಗಿತ್ತು. ದೇವಾನುದೇವತೆಗಳು ಮೆರವಣಿಗೆಯಲ್ಲಿ ಫ್ರೀಡಂ ಪಾರ್ಕ್ ತಲುಪುವ ಮುನ್ನವೇ ಕುಟುಂಬಸಮೇತವಾಗಿ ಸಾವಿರಾರು ಜನರು ನೆರೆದಿದ್ದರು.


ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕರಾದ ರಾಮಪ್ರಸಾದ್ ಮೊದಲಾದವರಿಂದ ಮಂತ್ರಘೋಷಗಳನ್ನ ಹಾಡಲಾಯಿತು. ಬನ್ನಿ ಕಡಿಯುವುದರಿಂದ ೯ ದಿನಗಳ ದಸರಾ ಹಬ್ಬ ಸಂಪನ್ನಗೊಂಡಿದೆ. ನಂತರ ೧೦ ತಲೆಯ ರಾವಣನನ್ನ ಸುಡಲಾಯಿತು.


ಫ್ರೀಡಂ ಪಾರ್ಕ್‌ನಲ್ಲಿ ಸಾರ್ವಜನಿಕರು ಸಂಗೀತ ಆಲಿಸುತ್ತಾ, ವಿವಿಧ ಬಗೆಯ ತಿನಿಸುಗಳನ್ನು ಸವಿಯುತ್ತಾ ಹಲವು ವಸ್ತುಗಳನ್ನು ಖರೀದಿಸುತ್ತಾ ಸಂಭ್ರಮದಲ್ಲಿ ಮಿಂದರು. ಯುವಕ ಯುವತಿಯರು ಸೆಲ್ಫಿ ಮತ್ತು ವೀಡಿಯೋ ಮಾಡುವ ದೃಶ್ಯ ಸಾಮಾನ್ಯವಾಗಿತ್ತು. ದ್ರೋಣ್‌ಗಳು ಫೋಟೋ ಕ್ಲಿಕ್ಕಿಸಲು ಆಕಾಶದಲ್ಲಿ ಸಂಚ ರಿಸಿದ್ದು, ನಕ್ಷತ್ರಗಳಂತೆ ಗೋಚರಿಸಿದವು.ಹಲವರು ಮೊಬೈಲ್ ಹಾಗೂ ಹೆಲ್ಮಟ್‌ಗಳನ್ನು ಕಳೆದುಕೊಂಡರು.


ಪಕ್ಷಭೇದವಿಲ್ಲದೆ ರಾಜಕಾರಣಿಗಳು ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಾಜಿ ಡಿಸಿಎಂ ಈಶ್ವರಪ್ಪ, ಸಂಸದ ರಾಘವೇಂದ್ರ, ಪಾಲಿಕೆ ಮೇಯರ್ ಶಿವಕುಮಾರ್,

ಉಪಮೇಯರ್ ಲಕ್ಷ್ಮೀ ಶಂಕರ್, ಪಾಲಿಕೆ ಸದಸದಯೆಯರು ಭಾಗವಹಿಸಿದ್ದರು. ಈಶ್ವರಪ್ಪ ಮತ್ತು ಸಂಸದರ ರಾಘವೇಂದ್ರ ಇಬ್ವರೂ ಕೈ ಹಿಡಿದು ಜನರಿಗೆ ಶುಭಕೋರಿರುವುದು ದಸರಾ ಹಬ್ಬದ ವಿಶೇಷವಾಗಿತ್ತು.

Exit mobile version