Site icon TUNGATARANGA

ಅ.28 : ಶಿವದೂತ ಗುಳಿಗ ನಾಟಕ:ಜಾದುಗಾರ್ ವಿಕ್ರಮ್ ಶೆಟ್ಟಿ

ರಂಗಭೂಮಿಯಲ್ಲಿ ದಾಖಲೆ ಸೃಷ್ಟಿಸಿದ ದೇಶ ವಿದೇಶಗಳಲ್ಲಿ ಮೆಚ್ಚುಗೆ ಪಡೆದ ಕನ್ನಡ ನಾಟಕ ಶಿವದೂತ ಗುಳಿಗ ಪ್ರದರ್ಶನ ಅ.೨೮ರಂದು ಸಂಜೆ ೬-೩೦ಕ್ಕೆ ಕುವೆಂಪು ರಂಗಮಂದಿರದಲ್ಲಿ ಆಯೋಜಿ ಸಲಾಗಿದೆ ಎಂದು ಸಂಚಾಲಕ ಜಾದುಗಾರ್ ವಿಕ್ರಮ್ ಶೆಟ್ಟಿ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ನಾಟಕವೊಂದು ಅದ್ಭುತ ಹಾಗೂ ವಿಸ್ಮಯವಾಗಿದೆ. ಒಂದು ರೀತಿಯಲ್ಲಿ ಸಿನಿಮಾ ನೋಡಿದ ಹಾಗಾಗುತ್ತದೆ. ದೈವವನ್ನೇ ಮುಖ್ಯವಾಗಿಟ್ಟುಕೊಂಡು ವಿಭಿನ್ನ ಶೈಲಿ ಯಲ್ಲಿ ಈ ನಾಟಕ ಮೂಡಲಿದೆ. ಈ ಶಿವದೂತ ಗುಳಿಗ ಅ.೨೮ರ ರಾತ್ರಿ ಕಾಣಿಸುತ್ತಾನೆ ಎಂದರು.


ರಂಗಪ್ರೇಮಿ ಕೆ.ಜಿ. ವೆಂಕಟೇಶ್ ಮಾತನಾಡಿ, ಪ್ರಮುಖ ನಿರ್ದೇಶಕರಲ್ಲೊಬ್ಬರಾಗಿರುವ ವಿಜಯಕು ಮಾರ್ ಕೊಡಿಯಾಲ್‌ಬೈಲ್ ಅವರು ಶಿವದೂತ ಗುಳಿಗ ನಾಟಕದ ನಿರ್ದೇಶನ ಮಾಡಿದ್ದಾರೆ. ಎ.ಕೆ. ವಿಜಯ್ ಸಂಗೀತ ನೀಡಿದ್ದಾರೆ. ಇದು ಗೌರವ ಪ್ರವೇಶವಾಗಿದ್ದು, ಟಿಕೆಟ್ ಬೆಲೆ ೫೦೦ ಮತ್ತು ೧೦೦೦ರೂ. ಇರುತ್ತದೆ.

ಟಿಕೆಟ್ ಮತ್ತು ವಿವರಗಳಿಗೆ ಮೊ: ೯೪೪೮೧೦೮೨೨೨ ಮತ್ತು ೮೦೭೩೫೭೯೫೭೫ರಲ್ಲಿ ಸಂಪರ್ಕಿಸಬಹುದಾಗಿದೆ.
ಮಂಗಳೂರಿನ ಪುರಭವನದಲ್ಲಿ ಆರಂಭವಾದ ಶಿವದೂತ ಗುಳಿಗ ನಾಟಕದ ಮೊದಲ ಹೆಜ್ಜೆಯಿಂದ ಹಿಡಿದು ೫೧೭ನೇ ಪ್ರದರ್ಶನವಾಗಿದೆ. ಮತ್ತು ೧೦೦೦ದ ಪ್ರದರ್ಶನಕ್ಕೆ ಮುನ್ನುಗ್ಗುತಿದೆ. ಕಲಾ ಸಂಗಮ ತಂಡದ ಕಲಾವಿದರು ನಾಟಕದ ದೃಶ್ಯಾವಳಿಗಳಿಗೆ ಜೀವ ತುಂಬಿದ್ದಾರೆ. ಪರಮಾನಂದ ವಿ.

ಸಾಲ್ಯಾನ್ ಅವರ ಸಂಭಾಷಣೆ ಗುರುದೇವ ಆರ್ಟ್ಸ್ ಬಂಟ್ವಾಳ, ಶರತ್ ಪೂಜಾರಿ ಮಾಲೆಮಾರ್ ವಸ್ತ್ರ ವಿನ್ಯಾಸ, ಹರೀಶ್ ಆಚಾರ್ಯ, ಚಂದ್ರಶೇಖರ ಶಿರ್ವ ಮಟ್ಟಾರ್ ರಂಗವಿನ್ಯಾಸ ಮಾಡಿದ್ದಾರೆ.


ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ತೆಲಿಕದ ಬೊಳ್ಳಿ ದೇವದಾಸ್ ಕಾಪಿಕಾಡ್, ಡಾ| ವೈಷ್ಣವಿ, ರವೀಂದ್ರ ಪ್ರಭು, ನರಸಿಂಹ ಕಿಣಿ, ವಿಶಾಲ್ ರಾಜ್ ಕೋಕಿಲ ಇವರ ಹಿನ್ನೆಲೆ ಸಂಗೀತವಿದ್ದು

ಎ.ಕೆ. ವಿಜಯ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಗುಳಿಗನ ಪಾತ್ರವನ್ನು ಕಾಂತಾರದ ಗುರುವ ಪಾತ್ರಧಾರಿ ಸ್ವರಾಜ್ ಶೆಟ್ಟಿ ಮಾಡಿದ್ದಾರೆ. ನಿತೇಶ್ ಕಿನ್ನಿಗೋಳಿ, ವಿನೋದ್ ರಾಜ್ ಕೋಕಿಲ, ರಮೇಶ್ ಕಲ್ಕಡ್ಕ, ಕೀತ್ ಪುರ್ತಾ ಡೋ, ಧನು ಕುಲಾಲ್ ಬೊಳಂತೂರು, ಮಂಜೇಶ್ವರ, ನಾಟಕದಲ್ಲಿ ಅಭಿನಯಿಸಿದ್ದಾರೆ.

Exit mobile version