Site icon TUNGATARANGA

ಈ ನೆಲದ ಪವಿತ್ರ ಮಣ್ಣಿನ ಬಗ್ಗೆ ಹೆಚ್ಚು ಗೌರವ ಹೊಂದಬೇಕು| ನನ್ನ ಭೂಮಿ ನನ್ನ ಮಣ್ಣು ಅತ್ಯುತ್ತಮ ಕಾರ್ಯಕ್ರಮದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು

ಸಾಗರ : ನನ್ನ ಭೂಮಿ ನನ್ನ ಮಣ್ಣು ಅತ್ಯುತ್ತಮ ಕಾರ್ಯಕ್ರಮ. ಇಂತಹ ಮಹತ್ವದ ಕಾರ್ಯಕ್ರಮದ ಮೂಲಕ ನನ್ನೂರಿನ ಮಣ್ಣು ದೆಹಲಿ ತಲುಪುತ್ತಿರುವುದು ಸಂತೋಷ ತಂದಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.


ಇಲ್ಲಿನ ತಾಲ್ಲೂಕು ಕಚೇರಿ ಆವರಣದಲ್ಲಿ ಶನಿವಾರ ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ನನ್ನ ಮಣ್ಣು ನನ್ನ ದೇಶ ಅಮೃತ ಕಲಶ ಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.


ಸಾಗರ ಕ್ಷೇತ್ರ ಅನೇಕ ಹೋರಾಟಗಳಿಗೆ ಭೂಮಿಕೆಯಾಗಿದೆ ಎನ್ನುವುದು ಸ್ಮರಣಾರ್ಹ. ಕಾಗೋಡು ಚಳುವಳಿ, ದಲಿತ ಚಳುವಳಿ ಈ ಮಣ್ಣಿನ ಮಹತ್ತರ ಹೋರಾಟಗಳಲ್ಲಿ ಗುರುತಿಸಿಕೊಳ್ಳುವಂತಹದ್ದಾಗಿದೆ. ಈ ನೆಲದ ಪವಿತ್ರ ಮಣ್ಣಿನ ಬಗ್ಗೆ ಹೆಚ್ಚು ಗೌರವ ಹೊಂದಬೇಕು.

ಭಾರತ ಎಲ್ಲ ಜಾತಿಮತಪಂಥಗಳನ್ನು ತನ್ನೊಳಗೆ ಹುದುಗಿಸಿಕೊಂಡಿದ್ದು ಸಾಮರಸ್ಯ, ಸಹಬಾಳ್ವೆ ನಮ್ಮ ಮೂಲಮಂತ್ರವಾಗಿದ್ದು ಅದಕ್ಕೆ ಪೂರಕವಾಗಿ ನಾವೆಲ್ಲ ನಡೆದುಕೊಳ್ಳಬೇಕು. ಯುವಜನರು ರಾಷ್ಟ್ರಪ್ರೇಮ ಬೆಳೆಸಿಕೊಳ್ಳುವ

ಮೂಲಕ ದೇಶಕ್ಕಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಂಡ ಯೋಧರು, ನಮ್ಮ ಸಂಸ್ಕೃತಿಯನ್ನು ಪ್ರಸರಿಸಿದ ಮಹಾತ್ಮರ ಬಗ್ಗೆ ಅರಿವು ಹೊಂದಬೇಕು ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ನಾಗೇಶ್ ಬ್ಯಾಲದ್, ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಪೂರ್ಣಿಮಾ ಇನ್ನಿತರರು ಹಾಜರಿದ್ದರು.

Exit mobile version