Site icon TUNGATARANGA

ದೆವ್ವ’ದ ಹಲ್ಲೆ-ನಾಲ್ವರ ಸಾವು

ಪಟ್ನಾ: ಬಿಹಾರದ ಸಿವಾನ್ ಜಿಲ್ಲೆಯ ಭಗವಾನಪುರದಲ್ಲಿ ಭಯಾನಕ ಘಟನೆಯೊಂದು ನಡೆದಿದ್ದು, ಮಹಿಳೆ ಮತ್ತು ಆಕೆಯ ಐವರು ಮಕ್ಕಳ ಮೇಲೆ ಕೊಡಲಿಯಿಂದ ಭೀಕರವಾಗಿ ಹಲ್ಲೆ ಮಾಡಲಾಗಿದೆ. ಈ ಘಟನೆಯಲ್ಲಿ ನಾಲ್ವರು ಮಕ್ಕಳು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮಹಿಳೆ ಮತ್ತು ಇನ್ನೋರ್ವ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ.

ಅವಧೇಶ್ ಚೌಧರಿ ಎಂಬ ವ್ಯಕ್ತಿ ಈ ದುಷ್ಕೃತ್ಯ ಎಸಗಿದ್ದಾನೆ. ತನ್ನ ಪತ್ನಿ ಮತ್ತು ಮಕ್ಕಳ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾನೆ. ಮಕ್ಕಳು ಸ್ಥಳದಲ್ಲಿಯೇ ರಕ್ತಸ್ರಾವದಿಂದ ಒದ್ದಾಡುತ್ತಿದ್ದರೂ ಅದರ ಪರಿವೇ ಅವನಿಗಿಲ್ಲದಂತೆ ಆರಾಮಾಗಿ ಇದ್ದ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅವಧೇಶ್​ನನ್ನು ಬಂಧಿಸಿದ್ದಾರೆ. ಈ ನಡುವೆ ತನಗೆ ಏನೂ ಗೊತ್ತೇ ಇಲ್ಲವೆಂಬಂತೆ ವರ್ತಿಸಿರುವ ಆತ, ನನಗೆ ಏನೂ ಗೊತ್ತಿಲ್ಲ. ಮನೆಯ ಗೇಟಿನ ಒಳಗೇ ಬರುತ್ತಿದ್ದಂತೆಯೇ ಮೈಮೇಲೆ ದೆವ್ವ ಹೊಕ್ಕಿದಂತೆ ಆಯಿತು ಎಂದು ಹೇಳಿದ್ದಾನೆ ಎನ್ನಲಾಗಿದೆ.

Exit mobile version