Site icon TUNGATARANGA

ಫುಟ್‌ಪಾತ್ ವ್ಯಾಪಾರಿಗಳ ಹಾವಳಿ ತಪ್ಪಿಸಲು ಮನವಿ

ಫುಟ್‌ಪಾತ್ ವ್ಯಾಪಾರಿಗಳು ಹಾಗೂ ರಸ್ತೆಯ ಮೇಲೆ ತಳ್ಳುಗಾಡಿಗಳ ಹಾವಳಿಯಿಂದಾಗಿ ನಾವು ಅಂಗಡಿಯವರು ಪರದಾಡುವಂತಾಗಿದೆ. ಕೂಡಲೇ ಅವರನ್ನು ತೆರವುಗೊಳಿಸಿ ಎಂದು ಗಾಂಧಿ ಬಜಾರ್ ವರ್ತಕರ ಸಂಘದಿಂದ ಬುಧವಾರ ಶಿವಮೊಗ್ಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.


ವ್ಯಾಪಾರಿಗಳು ಫುಟ್‌ಪಾತ್ ಅತಿಕ್ರಮಿಸಿಕೊಳ್ಳುವುದರಿಂದ ಗ್ರಾಹಕರಿಗೆ ಓಡಾಡಲು, ಅಂಗಡಿಗಳ ಒಳಗೆ ಬರಲು ಅಡ್ಡಿಯಾಗುತ್ತಿದೆ. ದ್ವಿಚಕ್ರ ವಾಹನಗಳು ಓಡಾಡುವುದು ದುಸ್ತರವಾಗಿದೆ.

ಪ್ರತಿ ದಿನ ಅಪಘಾತ ಸಂಭವಿಸುತ್ತಿವೆ. ಪಾದಚಾರಿಗಳು ಫುಟ್‌ಪಾತ್ ಬಿಟ್ಟು ರಸ್ತೆಯಲ್ಲಿ ಕಷ್ಟಪಟ್ಟು ಓಡಾಡುವಂತಾಗಿದೆ. ಇದು ಜಗಳಕ್ಕೆ ಕಾರಣವಾಗಿದೆ. ಮುಂದೆ ಅನಾಹುತಗಳು ಆಗುವ ಸಂಭವವಿದೆ. ಅದನ್ನು ತಪ್ಪಿಸಿ ಎಂದು ಕೋರಿದರು.


ಹಬ್ಬ-ಹರಿದಿನ ಬಂದಾಗ ಗಾಂಧಿಬಜಾರ್‌ನ ಫುಟ್‌ಪಾತ್ ಮತ್ತು ರಸ್ತೆಗಳಲ್ಲಿ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಹೆಚ್ಚಿಸುತ್ತಿದ್ದಾರೆ.

ಇದರಿಂದ ವರ್ತಕರಿಗೆ ವ್ಯಾಪಾರವೇ ಇಲ್ಲದಂತಾಗಿದೆ. ಪ್ರತಿ ತಿಂಗಳ ಬಾಡಿಗೆ, ಟ್ಯಾಕ್ಸ್ ಇತ್ಯಾದಿ ಕಟ್ಟುವ ನಮಗೆ ಬಹಳ ತೊಂದರೆಯಾಗುತ್ತಿದೆ. ಈ ಸಂಕಷ್ಟ ಪರಿಹರಿಸಿ ವರ್ತಕರಿಗೆ, ಪಾದಚಾರಿಗಳಿಗೆ ಹಾಗೂ ಗ್ರಾಹಕರಿಗೆ ಸುಲಲಿತವಾದ ವ್ಯಾಪಾರ ಮಾಡಲು ಅನುವು ಮಾಡಿಕೊಡಿ ಎಂದರು.


ಈ ವೇಳೆ ಗಾಂಧಿ ಬಜಾರ್ ವರ್ತಕರ ಸಂಘದ ಅಧ್ಯಕ್ಷ ವಿಜಯ್‌ಕುಮಾರ್ ಜೆ.ದಿನಕರ್, ಪದಾಧಿಕಾರಿಗಳಾದ ರಾಕೇಶ್ ಸಾತ್ರೆ, ಡಾ.ಎಸ್.ವಿ.ಭರತ್, ಎಸ್.ರಮೇಶ್, ಡಿ.ವಿ.ಹರೀಶ್, ಭವಾನಿಸಿಂಗ್ ರಾಥೋಡ್, ಬಿ.ಆರ್.ಅಮರನಾಥ್, ವಿನೋದ್‌ಕುಮಾರ್ ಜೈನ್ ಮತ್ತಿತರರು ಇದ್ದರು.

Exit mobile version