Site icon TUNGATARANGA

ರಾಜ್ಯ ಸರ್ಕಾರದ ವಿರುದ್ದ ಶಾಸಕ ಚನ್ನಬಸಪ್ಪ ಅಕ್ರೋಶ | ರಾಜ್ಯ ಸರ್ಕಾರ ದೇಶದ್ರೊಹ ರಾಷ್ಟ್ರ ದ್ರೋಹದ ಕೆಲಸಗಳಿಗೆ ಕೊಡಬಾರದು

ಶಿವಮೊಗ್ಗ: ರಾಷ್ಟ್ರ ದ್ರೋಹದ ಕೆಲಸಗಳಿಗೆ ರಾಜ್ಯ ಸರ್ಕಾರ ಕುಮ್ಮಕ್ಕು ಕೊಡಬಾರದು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.


ಅವರು ಇಂದು ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿಯಾಗಿದೆ. ಇತ್ತೀಚಿನ ರಾಗಿಗುಡ್ಡದ ಘಟನೆಗೆ ಸಂಬಂಧಿಸಿದಂತೆ ಸಾಂತ್ವನ ಹೇಳಲು ಬಂದ ಹಿಂದೂ ನಾಯಕನನ್ನು ಬಂಧಿಸುತ್ತಾರೆ.

ಇದು ನೀಚ ಕೃತ್ಯ ಅಲ್ಲವೇ. ಮೈಸೂರು ದಸರಾವನ್ನು ಇಡೀ ದೇಶವೇ ನೋಡುತ್ತದೆ. ಇಂತಹ ದಸರಾಕ್ಕೆ ಪರ್ಯಾಯವಾಗಿ ಆಚರಿಸುವ ಮಹಿಷ ದಸರಾಕ್ಕೆ ಅನುಮತಿ ಕೊಡುತ್ತಾರೆ. ಯಾರನ್ನು ಪೂಜೆ ಮಾಡಬೇಕು ಎಂಬುದೇ ಗೊತ್ತಿಲ್ಲ ಎಂದರು.


ಇಸ್ರೇಲ್ ಮತ್ತು ಪ್ಯಾಲಸ್ತೇನ್ ಯುದ್ಧ ನಡೆಯುತ್ತಿದೆ. ಭಾರತ ಇಸ್ರೇಲ್ ಪರವಾಗಿ ನಿಂತಿದೆ. ಆದರೆ ಬೆಂಗಳೂರಿನಂತಹ ನಗರದಲ್ಲಿ ಭಯೋತ್ಪಾದಕರ ಪರವಾಗಿ ಪ್ರತಿಭಟನೆ ಮಾಡುವವರಿಗೆ ರಾಜ್ಯ ಸರ್ಕಾರ ಕುಮ್ಮಕ್ಕು ನೀಡುತ್ತದೆ. ಇದು ದೇಶ ದ್ರೋಹದ ಕೆಲಸವಲ್ಲವೇ

. ಭಯೊತ್ಪಾದಕರು ಅಲ್ಲಿ ಆಸ್ಪತ್ರೆಗಳಿಗೇ ರಾಕೆಟ್ ಉಡಾಯಿಸಿ ಕೊಲ್ಲುವಷ್ಟು ನೀಚರಾಗಿದ್ದಾರೆ. ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಬಲಿ ತೆಗೆದುಕೊಂಡಿದ್ದು ಇದೇ ಭಯೋತ್ಪಾದಕರಲ್ಲವೇ. ಕಾಂಗ್ರೆಸ್ಸಿಗರಿಗೆ ಇದೇಕೆ ಅರ್ಥವಾಗುತ್ತಿಲ್ಲ. ಭಯೋತ್ಪಾದಕರ ಪರವಾಗಿ ಇರುವವನ್ನು ಹೆಡೆಮುರಿ ಕಟ್ಟಬೇಕಲ್ಲವೇ.

ಇನ್ನೂ ಎಷ್ಟು ದಿನ ವೋಟ್ ಬ್ಯಾಂಕ್ ರಾಜಕಾರಣ ಕಾಂಗ್ರೆಸ್ ಮಾಡುತ್ತದೆ. ಇದನ್ನು ಬಿಜೆಪಿ ಸಹಿಸಿಕೊಳ್ಳುವುದಿಲ್ಲ ಎಂದ ಅವರು, ಬಹುತ್ವ ಕರ್ನಾಟಕ ಸಂಘಟನೆಯನ್ನು ನಿಷೇಧ ಮಾಡಬೇಕು ಎಂದರು.


ಬಾಯಿಗೆ ಬಂದಂತೆ ಮಾತನಾಡುವ ಪ್ರೊ. ಭಗವಾನ್ ಎಲ್ಲಿಗೆ ಬೇಕಾದರೂ ಹೋಗಬಹುದು. ಆದರೆ ಸಾಂತ್ವನ ಹೇಳಲು ಮುತಾಲಿಕ್ ಬರಬಾರದೇ. ಯಾರನ್ನು

ಗಡಿಪಾರು ಮಾಡಬೇಕು, ಯಾರು ರಾಷ್ಟ್ರ ದ್ರೋಹಿಗಳು, ಯಾರು ರಾಷ್ಟ್ರಭಕ್ತರು, ಯಾವುದು ದಸರಾ ಹಬ್ಬ ಈ ಕಲ್ಪನೆ ರಾಜ್ಯ ಸರ್ಕಾರಕ್ಕೆ ಇದೆಯೇ ಎಂದು ಪ್ರಶ್ನೆ ಮಾಡಿದರು.


ಪತ್ರಿಕಾ ಗೋಷ್ಠಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ನಗರಾಧ್ಯಕ್ಷ ಜಗದೀಶ್, ಪಾಲಿಕೆ ಸದಸ್ಯ ಜ್ಞಾನೇಶ್ವರ್, ಬಾಲು, ಶಶಿಧರ್, ಅಣ್ಣಪ್ಪ ಕೆ.ವಿ. ಇದ್ದರು.

Exit mobile version