Site icon TUNGATARANGA

ಸಾಗರ |ದಸರಾ ಹಬ್ಬದ ಪ್ರಯುಕ್ತ ಅ.24 ರಂದು ರಾಷ್ಟ್ರಮಟ್ಟದ ಪುರುಷ ಹಾಗೂ ಮಹಿಳಾ ಕುಸ್ತಿ ಪಂದ್ಯಾವಳಿ ಆಯೋಜನೆ

ಸಾಗರ : ಗಾಂಧಿನಗರ ಯುವಜನ ಸಂಘದ ೪೮ನೇ ವರ್ಷದ ರಾಷ್ಟ್ರಮಟ್ಟದ ದಸರಾ ಬಯಲು ಜಂಗಿ ಕುಸ್ತಿ ಪಂದ್ಯಾವಳಿಯು ಅ. ೨೪ರಂದು ಮಧ್ಯಾಹ್ನ ೨ ಗಂಟೆಯಿಂದ ಗಾಂಧಿನಗರದ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸಂತೋಷ್ ಸದ್ಗುರು ತಿಳಿಸಿದರು.


ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಬಾರಿ ಮಹಿಳಾ ಕುಸ್ತಿ ಪಂದ್ಯಾವಳಿಯನ್ನು ಸಹ ಆಯೋಜಿಸಿದ್ದ ಗದಗ ಸೇರಿದಂತೆ ರಾಜ್ಯದ ಬೇರೆಬೇರೆ ಭಾಗಗಳಿಂದ ಮಹಿಳಾ ಕುಸ್ತಿಪಟುಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.


೧೯೭೫ರಿಂದ ಗಾಂಧಿನಗರ ಯುವಜನ ಸಂಘವ ವಿವಿಧ ಕಾರ್ಯಕ್ರಮಗಳ ಜೊತೆಗೆ ದಸರಾ ಕುಸ್ತಿ ಪಂದ್ಯಾವಳಿಗೆ ಹೆಚ್ಚು ಒತ್ತು ನೀಡುತ್ತಾ ಬರುತ್ತಿದ್ದು ಈ ಬಾರಿ ಸುಮಾರು ೫ ರಿಂದ ೬ ಲಕ್ಷ ರೂ. ಖರ್ಚುವೆಚ್ಚ ಪಂದ್ಯಾವಳಿಗೆ ತಗಲಲಿದೆ.

Click

ಪಂಜಾಬ್, ಹರ್ಯಾಣ, ದೆಹಲಿ ಸೇರಿದಂತೆ ರಾಷ್ಟ್ರದ ಹೆಸರಾಂತ ಕುಸ್ತಿಪಟುಗಳು ಅಖಾಡಕ್ಕೆ ಇಳಿಯಲಿದ್ದು, ಪರ್ಯಾಯ ಬೆಳ್ಳಿಗದೆ, ಬಂಗಾರದ ಬಳೆ, ಪರ್ಸಿಬಳೆ, ಬೆಳ್ಳಿಗದೆ ಜೊತೆಗೆ ಆಕರ್ಷಕ ನಗದು ಬಹುಮಾನಗಳ ಕುಸ್ತಿ ಪಂದ್ಯಾಟ ನಡೆಯಲಿದೆ ಎಂದು ತಿಳಿಸಿದರು.


ರಾಜ್ಯದಲ್ಲಿ ದೇಶಿಯ ಕುಸ್ತಿ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವ ಪ್ರಮುಖ ಸಂಘಗಳಲ್ಲಿ ನಮ್ಮ ಸಂಘಟನೆ ಮಂಚೂಣಿಯಲ್ಲಿದೆ. ಸ್ಥಳೀಯ ನಾಗರೀಕರು ಹಾಗೂ ದಾನಿಗಳ ಸಹಕಾರದಿಂದಲೇ ಕುಸ್ತಿ ಪಂದ್ಯಾವಳಿಯನ್ನು ನಡೆಸಿಕೊಂಡು ಬರಲಾಗುತ್ತಿದೆ

. ವಿಜಯದಶಮಿ ದಿನ ನಡೆಯುವ ಪಂದ್ಯಾವಳಿಗೆ ಹೆಚ್ಚಿನ ಕ್ರೀಡಾಸಕ್ತರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.


ಗೋಷ್ಟಿಯಲ್ಲಿ ಸಂಘದ ಪ್ರಮುಖರಾದ ವೆಂಕಟೇಶ್ ಕೆ., ಧರ್ಮರಾಜ್, ಸಂತೋಷ್ ಕೆ.ಜಿ., ಜಗನ್ನಾಥ್ ಜೇಡಿಕುಣಿ, ವಿಷ್ಣುವರ್ಧನ್, ರವಿಕುಮಾರ್ ಹಾಜರಿದ್ದರು.

Exit mobile version