Site icon TUNGATARANGA

ಎಸಿಬಿ ಬಲೆಗೆ ಎಪಿಎಂಸಿ ಸೂಪರ್ ಡೆಂಟ್

ಶಿವಮೊಗ್ಗ ಎಪಿಎಂಸಿಯಲ್ಲಿ ಕೃಷಿ ಉಪ ನಿರ್ದೇಶಕರ ಕಚೇರಿಯ ಮಾರುಕಟ್ಟೆ ವಿಭಾಗದ ಸೂಪರ್ ಡೆಂಟ್ ಆಗಿರುವ ಸಾಮ್ಯಾ ನಾಯ್ಕ್ ಎನ್ನುವವರು ಮಂಗಳವಾರ ಸಂಜೆ ಎಸಿಬಿ ಬಲೆಗೆ ಬಿದ್ದಿದ್ದಾರೆ.
ತಾಲೂಕಿನ ವೀರಣ್ಣನ ಬೆನವಳ್ಳಿಯ ವಾಸಿ ಉಮಾಮಹೇಶ್ವರ ಅವರು ಎಪಿಎಂಸಿ ವ್ಯಾಪಾರದ ತಮ್ಮ ಪರವಾನಗಿಯನ್ನು ರದ್ದು ಮಾಡಲು ಕೋರಿದ್ದರು. ಇದಕ್ಕೆ ನಾಯ್ಕ್ 10 ಸಾವಿರ ರೂ. ಬೇಡಿಕೆ ಇಟ್ಟಿದ್ದರು.
ಈ ವಿಚಾರವನ್ನು ಎಸಿಬಿಗೆ ಉಮಾಮಹೇಶ್ವರ್ ತಿಳಿಸಿದ್ದರು.
ಇಂದು 10 ಸಾವಿರ ರೂ. ಪೈಕಿ 5 ಸಾವಿರ ರೂ. ಹಣ ಲಂಚ ಪಡೆಯುವ ವೇಳೆಗೆ ಸಾಮ್ಯಾ ನಾಯ್ಕ್ ಅವರನ್ನು ಎಸಿಬಿ ಪೊಲೀಸರು ಬಲೆಗೆ ಬೀಳಿಸಿದ್ಬಿದಾರೆ.

Exit mobile version