Site icon TUNGATARANGA

ಆನೆಯ ಬಾಲಕ್ಕೆ ಮಚ್ಚಿನೇಟು ಸಕ್ರೆಬೈಲು ಬಿಡಾರದಲ್ಲಿ ಘಟನೆ !

ಸಕ್ರೆಬೈಲು ಆನೆ ಬಿಡಾರದ ತುಂಬು ಗರ್ಭಿಣಿ ಭಾನುಮತಿ ಆನೆಯ ಬಾಲ ತುಂಡಾಗುವಷ್ಟು ಕತ್ತಿಯಿಂದ ಹಲ್ಲೆ ನಡೆಸಿದ್ದು ವನ್ಯಜೀವಿ ಪ್ರಿಯರಲ್ಲಿ ತಲ್ಲಣ ಮೂಡಿಸಿದೆ.


ತುಂಬು ಗರ್ಭಿಣಿ ಭಾನುಮತಿ ಆನೆಯ ಬಾಲಕ್ಕೆ ಮಚ್ಚಿನಿಂದ ಹೊಡೆದು ಕಿಡಿಗೇಡಿಗಳು ಗಾಯಗೊಳಿ ಸಿದ್ದಾರೆ.


ಕಾವಾಡಿ ಮೊಹಮ್ಮದ್ ಹಾಗು ಸುದೀಪ್ ಭಾನುಮತಿ ಆನೆಯ ಜವಬ್ದಾರಿಯನ್ನು ಹೊತ್ತ ಸಿಬ್ಬಂದಿಗಳಾಗಿದ್ದಾರೆ. ಹದಿನೆಂಟು ತಿಂಗಳ ತುಂಬು ಗರ್ಭಿಣಿಯಾಗಿರುವ ಭಾನುಮತಿ ಆನೆಯನ್ನು

ಮೊನ್ನೆಯಷ್ಟೆ ಮಾವುತ, ಕಾವಾಡಿಗಳು ಹಾರೈಕೆ ಮಾಡಿ ಆಹಾರ ನೀಡಿ ಬಂದಿದ್ದರು. ಸೋಮವಾರ ಬೆಳಗ್ಗೆ ಭಾನುಮತಿ ಆನೆಯನ್ನು ನೋಡಲು ಹೋದ ಸಿಬ್ಬಂದಿಗಳಿಗೆ ದಾರಿಯಲ್ಲಿ

ಅಲ್ಲಲ್ಲಿ ರಕ್ತ ಬಿದ್ದಿರುವುದು ಕಂಡಿದೆ. ಆಗ ಸಿಬ್ಬಂದಿಗಳು ಸಹಜವಾಗಿಯೇ ಖುಷಿ ಪಟ್ಟಿದ್ದಾರೆ. ಭಾನುಮತಿ ಇಲ್ಲೇ ಎಲ್ಲೋ ಮರಿ ಹಾಕಿರಬೇಕು ಎಂದು ರಕ್ತದ ಜಾಡನ್ನು ಹಿಂಬಾಲಿಸಿ ದ್ದಾರೆ.

ಆದರೆ ಭಾನುಮತಿ ನೋಡಿದಾಗ ಸಿಬ್ಬಂದಿಗಳಿಗೆ ಆಘಾತ ಎದುರಾಗಿತ್ತು.ಭಾನುಮತಿ ಆನೆಯ ಬಾಲಕ್ಕೆ ಯಾರೋ ಕಿಡಿಗೇಡಿಗಳು ಮಚ್ಚಿ ನಿಂದ ಹಲ್ಲೆ ನಡೆಸಿದ್ದಾರೆ. ಚರ್ಮ ಬಾಲಕ್ಕೆ ಅಂಟಿಕೊಂಡಿದ್ದು ಬಿಟ್ಟರೆ ಬಾಲ ಬಹುತೇಕ ತುಂಡಾಗಿದೆ. ಭಾನುಮತಿ ಆನೆಯ ಆರ್ತನಾದ ಮುಗಿಲು ಮುಟ್ಟಿತ್ತು.

ತಕ್ಷಣ ಸಿಬ್ಬಂದಿಗಳು ವನ್ಯಜೀವಿ ವೈದ್ಯ ವಿನಯ್‌ಗೆ ಮಾಹಿತಿ ಮುಟ್ಟಿಸಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ವಿನಯ್ ಆನೆಯ ಬಾಲಕ್ಕೆ ಏಳು ಹೊಲಿಗೆ ಹಾಕಿ ಚಿಕಿತ್ಸೆ ನೀಡಿದರು.

ನಂತರ ಭಾನುಮತಿ ಚೇತರಿಕೆ ಕಾಣುತ್ತಿದೆ.


ಇದು ಹೊರಗಿನ ಕಿಡಿಗೇಡಿಗಳ ಕೃತ್ಯವೋ ಅಥವಾ ಬಿಡಾರದ ಕೆಲವು ಸಿಬ್ಬಂದಿ ನಡುವಿನ ವೈಯ ಕ್ತಿಕ ದ್ವೇಷವೋ ಎಂಬುದು ತನಿಖೆ ಯಿಂದ ಮಾತ್ರ ಹೊರಬೀಳಲಿದೆ.

Exit mobile version