ಶಿವಮೊಗ್ಗ: ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಇಂದು ಮಹಾನಗರ ಪಾಲಿಕೆ ವತಿಯಿಂದ ದಸರಾ ಅಂಗವಾಗೆ ನಡೆದ ಆಹಾರ ದಸರಾ-೨೦೨೩ರ ಕಾರ್ಯಕ್ರಮದಲ್ಲಿ
ಸಾರ್ವಜನಿಕರಿಗೆ ೨ ನಿಮಿಷದಲ್ಲಿ ಕೊಟ್ಟ ಕಡುಬು ಅವರೇಕಾಳು ಸಾಂಬಾರ್ ತಿನ್ನುವ ಸ್ಪರ್ಧೆಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಸಾಂಕೇತಿಕ ಚಾಲನೆ ನೀಡಿದರು.
ಈ ಸ್ಪರ್ಧೆಯಲ್ಲಿ ಮಹಿಳೆಯರಲ್ಲಿ ೮ಕೊಟ್ಟೆ ಕಡುಬು ತಿಂದ ಶಿವಮ್ಮ ಪ್ರಥಮ, ಜ್ಯೋತಿ ಶ್ರೀನಿವಾಸ ದ್ವಿತೀಯ, ಗೀತಾ ತೃತೀಯ ಬಹುಮಾನ ಪಡೆದರು.
ಪುರುಷರಲ್ಲಿ ೬ ಕೊಟ್ಟೆ ಕಡುಬು ತಿಂದ ವಿನೋದ್ ಪ್ರಥಮ, ರವಿಕಿರಣ್ ದ್ವಿತೀಯ, ನಾಗರಾಜ್ ತೃತೀಯ ಬಹುಮಾನ ಪಡೆದರು.
ಬಾಳೆಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಕೆ.ಎನ್. ಗೀತಾ ೮ ಬಾಳೆಹಣ್ಣು ತಿಂದು ಪ್ರಥಮ, ಸುಜಾತಾ ಎ.ಎನ್. ದ್ವಿತೀಯ, ತೃತೀಯ ಬಹುಮಾನ ಉಷಾ ಪಡೆದಿದ್ದಾರೆ.
ಪುರುಷರಲ್ಲಿ ದೀಪಕ್ ಶೆಟ್ಟಿ ೭ ಬಾಳೆಹಣ್ಣು ತಿಂದು ಪ್ರಥಮ ಸ್ಥಾನ, ಮಧು ದ್ವಿತೀಯ, ರಾಜಶೇಖರ್ ತೃತೀಯ ಬಹುಮಾನ ಪಡೆದರು
.
ಈ ಸಂದರ್ಭದಲ್ಲಿ ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮಿ ಶಂಕರ ನಾಯಕ, ಜ್ಞಾನೇಶ್ವರ್, ಸುನೀತಾ ಅಣ್ಣಪ್ಪ, ಯಮುನಾ ರಂಗೇಗೌಡ,
ಸುವರ್ಣಾ ಶಂಕರ್, ಆಹಾರ ದಸರಾ ಸಮಿತಿ ಅಧ್ಯಕ್ಷೆ ಆಶಾ ಚಂದ್ರಪ್ಪ, ಸದಸ್ಯರಾದ ಬಾನುಮತಿ, ವಿನೋದ್‌ಕುಮಾರ್, ಆರತಿ ಆ.ಮಾ. ಪ್ರಕಾಶ್ ಮತ್ತಿತರರಿದ್ದರು.