ಶಿವಮೊಗ್ಗ,ಅ.೧೬: ತಾಲೂಕಿನ ಕೋಟೆಗಂಗೂರು ಸಮೀಪದ ಸಿದ್ಲೀಪುರದಲ್ಲಿ ನಿತ್ಯವೂ ಮಣ್ಣಿನ ಲಾರಿ ಮತ್ತು ಟಿಪ್ಪರ್‌ಗಳ ಓಡಾಟದಿಂದ ಗ್ರಾಮದ ಜನಜೀವನ ಕಷ್ಟಕರವಾಗಿದ್ದು,
ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಗ್ರಾಮದಲ್ಲಿ ಪ್ರತಿನಿತ್ಯ ಲಾರಿಗಳು ಮಣ್ಣುತುಂಬಿಕೊಂಡು ಸಂಚರಿಸುತ್ತವೆ. ಅಕ್ಟೋಬರ್ ತಿಂಗಳಿಂದ ಮೇ ತಿಂಗಳ ತನಕ ಇದು ನಿರಂತರವಾಗಿರುತ್ತದೆ. ಗ್ರಾಮದಲ್ಲಿ
ಅಂಗನವಾಡಿ ಕೇಂದ್ರ, ಬಸ್ಸು ನಿಲ್ದಾಣ ಮತ್ತು ರಸ್ತೆಯ ಎರಡೂ ಬದಿಯಲ್ಲಿ ವಾಸದ ಮನೆಗಳಿವೆ. ಈ ಲಾರಿಗಳ ಓಡಾಟದಿಂದ ಇಡೀ ಗ್ರಾಮ ಧೂಳುಮಯವಾಗುತ್ತಿದೆ
ಮಕ್ಕಳು ಸೇರಿದಂತೆ ಗ್ರಾಮಸ್ಥರಲ್ಲಿ ಅಸ್ತಮಾ ಇತ್ಯಾದಿ ಆರೋಗ್ಯ ಸಮಸ್ಯೆಗಳಾಗುತ್ತಿವೆ.
ಈ ಬಗ್ಗೆ ಲಾರಿ ಮಾಲೀಕರ ಗಮನಕ್ಕೆ ತಂದರೆ ಅವರು ಪೊಲೀಸು ದೂರು ನೀಡಿದ್ದಾರೆ. ಇದರಿಂದ ಗ್ರಾಮಸ್ಥರ ಸಹಜ ಜೀವನಕ್ಕೆ ತೊಂದರೆಯಾಗಿದೆ.
ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸುವಲ್ಲಿ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಕೋರಿಕೆ ಸಲ್ಲಿಸಲಾಗಿದೆ.