Site icon TUNGATARANGA

264 ಬಿಎಸ್‌ಎನ್‌ಎಲ್ ಟವರ್ ಮಂಜೂರು |ಅಧಿಕಾರಿಗಳ ಜೊತೆ ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ

ಶಿವಮೊಗ್ಗ ಲೋಕಸಭಾ ಕ್ಷೇತ್ರವ್ಯಾಪ್ತಿ ಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ಒಳಗೊಂಡಂತೆ ೨೬೪ ಬಿ.ಎಸ್.ಎನ್.ಎಲ್. ಟವರ್ ಮಂಜೂರಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.


ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬಿ.ಎಸ್.ಎನ್.ಎಲ್. ಟವರ್ ಅಳವಡಿಕೆಗೆ ಸಂಬಂಧಪಟ್ಟಂತೆ ಅಧಿಕಾರಿಗಳ ಜೊತೆ ಸಭೆ ನಡೆಸಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಪತ್ರಕರ್ತರ ಜೊತೆ ಮಾತನಾಡಿದ ಅವರು ಭದ್ರಾವತಿ ೧೧, ಹೊಸನಗರ, ೪೫, ಸಾಗರ ೧೦೭, ಶಿಕಾರಿಪುರ ೧೫, ಶಿವಮೊಗ್ಗ ೨೧, ತೀರ್ಥಹಳ್ಳಿ ೩೪, ಬೈಂದೂರು ೨೩, ಸೊರಬ ೦೭ ಟವರ್ ಮಂಜೂರಾಗಿದೆ ಎಂದರು.


ಈಗಾಗಲೆ ಟವರ್ ಮಂಜೂರು ಆಗಿರುವ ತಾಲ್ಲೂಕುಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ ಸರ್ವೇ ಮೂಲಕ ಟವರ್ ಅಳವಡಿ ಕೆಗೆ ಜಾಗ ಗುರುತಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಶಿವಮೊಗ್ಗ ಜಿಲ್ಲೆಯ ನೆಟ್‌ವರ್ಕ್ ಸಮಸ್ಯೆ ಬಗೆ ಹರಿಸಲು ಹೆಚ್ಚು ಒತ್ತು ನೀಡಿದೆ

. ಒಂದು ಟವರ್ ಅಳವಡಿಕೆಗೆ ಕನಿಷ್ಟ ೧ ಕೋಟಿಯಿಂದ ಗರಿಷ್ಟ ೨ ಕೋಟಿ ರೂ. ವೆಚ್ಚ ತಗಲುತ್ತದೆ. ಮಲೆನಾಡು ಭಾಗವು ಹೆಚ್ಚು ಗುಡ್ಡಗಾಡುಗಳಿಂದ ಕೂಡಿರುವು ದರಿಂದ ಟವರ್ ಅಳವಡಿಕೆಗೆ ಹೆಚ್ಚು ವೆಚ್ಚ ತಗಲುವ ಸಾಧ್ಯತೆ ಇದೆ. ಸಾಗರ ತಾಲ್ಲೂಕಿನ ಗುಡ್ಡಗಾಡು, ಕಣಿವೆ ಪ್ರದೇಶಗಳಲ್ಲೂ ಯಶಸ್ವಿಯಾಗಿ ಟವರ್ ಅಳವಡಿಸಿ ನೆಟ್‌ವರ್ಕ್ ಸೌಲಭ್ಯ ಕಲ್ಪಿಸುವ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ ಎಂದು ಹೇಳಿದರು.


ಪ್ರಸ್ತುತ ದಿನಮಾನಗಳಲ್ಲಿ ಜಗತ್ತಿನ ಶೇ. ೬೦ರಷ್ಟು ವಹಿವಾಟುಗಳು ಡಿಜಿಟಲ್ ಆಧಾರದಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಯವರು ದೇಶದಲ್ಲಿ ೪.೬೩ ಲಕ್ಷ ಕಾಮನ್ ಸರ್ವಿಸ್ ಸೆಂಟರ್‌ಗೆ ಚಾಲನೆ ನೀಡಿದ್ದಾರೆ. ಇದರಿಂದ ಯುವಶಕ್ತಿಗೆ ದೊಡ್ಡ ಪ್ರಮಾಣದಲ್ಲಿ ನೆಟ್‌ವರ್ಕ್ ಸೌಲಭ್ಯ ಸಿಗಲಿದೆ. ಇದು ಗ್ರಾಮೀಣ ಭಾಗಕ್ಕೂ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.


ದೇಶದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಸುಮಾರು ೭೫ಕೋಟಿಗೂ ಹೆಚ್ಚು ಜನರು ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಿರುವುದು ಒಂದು ಅಂದಾಜಿನ ಪ್ರಕಾರ ಪತ್ತೆಯಾಗಿದೆ. ಆರಂಭದಲ್ಲಿ ೧ ಜಿ.ಬಿ. ಡಾಟಕ್ಕೆ ೩೦೮ ರೂಪಾಯಿ ಇದ್ದದ್ದು ಈಗ ಅದು ರೂ. ೧೦ಕ್ಕೆ ಇಳಿದಿದೆ. ಇದು ಕೇಂದ್ರ ಸರ್ಕಾರದ

ಸಾಧನೆಯಾಗಿದೆ. ಸಾಗರ ತಾಲ್ಲೂ ಕಿನಲ್ಲಿ ಟವರ್ ಅಳವಡಿಕೆಗೆ ಸಂಬಂಧಪ ಟ್ಟಂತೆ ಗ್ರಾಮೀಣ ಭಾಗದ ಜನರು ನೀಡಿರುವ ಅಹವಾಲು ಸ್ವೀಕರಿಸಲಾಗಿದ್ದು, ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಗ್ರಾಮಾಂತರ ಅಧ್ಯಕ್ಷ ಲೋಕನಾಥ ಬಿಳಿಸಿರಿ, ನಗರ ಅಧ್ಯಕ್ಷ ಗಣೇಶಪ್ರಸಾದ್, ದೇವೇಂದ್ರಪ್ಪ ಇನ್ನಿತರರು ಹಾಜರಿದ್ದರು.

Exit mobile version