Site icon TUNGATARANGA

ಅ.೧16-17: ದಸರಾ ಚಲಚಿತೋತ್ಸವ/ಅಧ್ಯಕ್ಷೆ ಸುವರ್ಣಾ ಶಂಕರ್


ಶಿವಮೊಗ್ಗ, ಅ.೧೩:
ಪಾಲಿಕೆಯಿಂದ ನಡೆಯಲಿರುವ ದಸರಾ ಹಬ್ಬದ ಅಂಗವಾಗಿ ದಸರಾ ಚಲನಚಿತ್ರೋತ್ಸವವನ್ನು ಪುನೀತ್ ರಾಜ್‌ಕುಮಾರ್ ಅವರ ಪುಣ್ಯಸ್ಮರಣೆ ಯಲ್ಲಿ ಅ.೧೬ ಮತ್ತು ೧೭ರಂದು ಹಮ್ಮಿಕೊಳ್ಳಲಾಗಿದೆ ಎಂದು ಚಲನಚಿತ್ರ ದಸರಾ ಸಮಿತಿಯ ಅಧ್ಯಕ್ಷೆ ಸುವರ್ಣಾ ಶಂಕರ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಾಲಿಕೆ, ಜಿಲ್ಲಾಡಳಿತ, ಬೆಳ್ಳಿಮಂಡಲ, ಸಿಹಿಮೊಗೆ, ಶಿವಮೊಗ್ಗ ಚಿತ್ರಸಮಾಜ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ದಸರಾ ಚಲನಚಿತ್ರೋತ್ಸವ ಆಯೋಜಿಸಲಾಗಿದ್ದು, ೧೬ರ ಬೆಳಿಗ್ಗೆ ೯ ಗಂಟೆಗೆ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ನಿರ್ದೇಶಕ ಪನ್ನಗಾಭರಣ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಚಲನಚಿತ್ರ ಕಲಾವಿದೆ ಮೇಘನಾ ರಾಜ್ ಭಾಗವಹಿಸುವರು. ನಿರೂಪಕಿ ಸಂಧ್ಯಾ ಭಟ್, ಕಿರುತೆರೆ ಕಲಾವಿದೆ ರೂಪಿಕಾ ಉಪಸ್ಥಿತರಿರುವರು ಎಂದರು.


ಕಾರ್ಯಕ್ರಮದಲ್ಲಿ ಮೇಯರ್ ಎಸ್. ಶಿವಕುಮಾರ್, ಉಪಮೇಯರ್ ಲಕ್ಷ್ಮಿ ಶಂಕರನಾಯಕ್, ಶಾಸಕ ಡಿ.ಎಸ್. ಅರುಣ್, ಆಯುಕ್ತ ಮಾಯಣ್ಣ ಗೌಡ, ಸದಸ್ಯರಾದ ಎಸ್. ಜ್ಞಾನೇಶ್ವರ್, ಮೇಹಕ್ ಶರೀಫ್ ಮಂಜುನಾಥ್, ರಮೇಶ್ ಹೆಗಡೆ, ವಿಶ್ವನಾಥ್, ಲತಾ ಹೆಗಡೆ ಮತ್ತು ವಾರ್ತಾಧಿಕಾರಿ ಆರ್.ಮಾರುತಿ, ಬೆಳ್ಳಿ ಮಂಡಲ ಸಂಚಾಲಕ ವೈದ್ಯನಾಥ್, ಚಿತ್ರಮಂದಿರದ ಮಾಲೀಕರಾದ ಎನ್.ಜೆ. ವೀರಣ್ಣ, ಶೈಲೇಶ್ ಮುಂತಾದವರು ಹಾಜರಿರುತ್ತಾರೆ ಎಂದರು.
ಚಲನಚಿತ್ರೋತ್ಸವದ ಅಂಗವಾಗಿ ಅ.೧೬ರಂದು ಬೆಳಿಗ್ಗೆ ೯ ಗಂಟೆಗೆ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ತತ್ಸಮ ತದ್ಭವ ಹಾಗೂ ೧೭ರಂದು ಬೆಳಿಗ್ಗೆ ೯ ಗಂಟೆಗೆ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಕಾಂತಾರ ಚಲನಚಿತ್ರ ಉಚಿತ ಪ್ರದರ್ಶನವಿರುತ್ತದೆ ಎಂದರು.


೧೭ರಂದು ಬೆಳಿಗ್ಗೆ ೧೦ ಗಂಟೆಗೆ ಅಂಬೇಡ್ಕರ್ ಭವನದಲ್ಲಿ ದಸರಾ ಚಲನಚಿತ್ರ ರಸಗ್ರಹಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಉದ್ಘಾಟಿಸುವರು. ಮೇಯರ್, ಉಪಮೇಯರ್ ಸೇರಿದಂತೆ ಚಲನಚಿತ್ರ ದಸರಾ ಸಮಿತಿಯ ಸದಸ್ಯರು ಹಾಜರಿರುತ್ತಾರೆ ಎಂದರು.
ಈ ಕಾರ್ಯಾಗಾರದಲ್ಲಿ ನಾಲ್ಕು ಉಪನ್ಯಾಸಗಳನ್ನು ಏರ್ಪಡಿಸಿದ್ದು, ಚಲನಚಿತ್ರ ಮತ್ತು ಸಾಹಿತ್ಯ ಕುರಿತು ಚಿಂತಕ ಶಾಂತಾರಾಮ್ ಪ್ರಭು, ಕಿರುಚಿತ್ರ ನಿರ್ಮಾಣ ಕುರಿತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಡಿ. ಸತ್ಯಪ್ರಕಾಶ್, ಚಲನಚಿತ್ರ ಛಾಯಾಗ್ರಹಣ ಕುರಿತು ಜಿ.ಎಸ್. ಭಾಸ್ಕರ್, ಹಾಡು ಹುಟ್ಟಿದ ಬಗೆ ಕುರಿತು ಎನ್. ಎಸ್.ಶ್ರೀಧರ ಮೂರ್ತಿ ಮಾತನಾಡುವರು. ಸಂಜೆ ನಾಲ್ಕು ಗಂಟೆಗೆ ಸಮಾರೋಪ ಸಮಾರಂಭ ಇರುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಸದಸ್ಯ ವಿಶ್ವನಾಥ್, ಬೆಳ್ಳಿಮೋಡ ಸಂಚಾಲಕ ವೈದ್ಯನಾಥ್ ಹೆಚ್.ಯು., ಅಧಿಕಾರಿ ಗಳಾದ ಯಶವಂತ್, ಮಂಜಪ್ಪ, ಕುಪ್ಪುರಾಜ್, ರಂಗನಾಥ್ ಇದ್ದರು.

Exit mobile version