Site icon TUNGATARANGA

ಆ.18-20: ಸಂಭ್ರಮದ ಕಲಾ ದಸರಾ ಆಚರಣೆ/ ಅಧ್ಯಕ್ಷೆ ಸುರೇಖಾ ಮುರುಳೀಧರ್ ವಿವರಣೆ

ಶಿವಮೊಗ್ಗ, ಅ13:
ಮಹಾನಗರ ಪಾಲಿಕೆಯಿಂದ ಹಮ್ಮಿ ಕೊಂಡಿರುವ ದಸರಾ ಹಬ್ಬದ ಕಲಾ ದಸರಾ ವನ್ನು ಅತ್ಯಂತ ಸಡಗರ ಸಂಭ್ರಮದಿಂದ ಹಲವು ಕಾರ್ಯಕ್ರಮಗಳ ಮೂಲಕ ಆಚರಿಸಲಾಗುವುದು ಎಂದು ಕಲಾ ದಸರಾದ ಅಧ್ಯಕ್ಷೆ ಸುರೇಖಾ ಮುರುಳೀಧರ್ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅ. ೧೮ರಿಂದ ೨೦ರ ವರೆಗೆ ಶಿವಪ್ಪನಾಯಕ ಅರಮನೆ ಮತ್ತು ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ೧೮ರಂದು ಬೆಳಿಗ್ಗೆ ೧೦ ಗಂಟೆಗೆ ಛಾಯಾಚಿತ್ರ ಪ್ರದರ್ಶನ ಮತ್ತು ಚಿತ್ರಕಲಾ ಪ್ರದರ್ಶನ ಹಾಗೂ ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆ ಇರುತ್ತದೆ. ಈ ಎರಡೂ ಪ್ರದರ್ಶನವನ್ನು ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ. ಮಿಥುನ್ ಕುಮಾರ್ ಉದ್ಘಾಟಿಸುವರು ಎಂದ ಅವರು, ಕಾರ್ಯಕ್ರಮದಲ್ಲಿ ಉಪವಿಭಾಗಾ ಧಿಕಾರಿ ಸತ್ಯನಾರಾಯಣ ಜಿ.ಹೆಚ್. ಸೇರಿದಂತೆ ಮೇಯರ್ ಎಸ್.ಶಿವಕು ಮಾರ್, ಆಯುಕ್ತ ಕೆ. ಮಾಯಣ್ಣಗೌಡ, ಹಾಗೂ ಕಲಾ ದಸರಾದ ಸದಸ್ಯರು ಮತ್ತು ವಹಾನಗರ ಪಾಲಿಕೆ ಸದಸ್ಯರು ಉಪಸ್ಥಿತರಿ ರುತ್ತಾರೆ ಎಂದರು.


ಸಂಜೆ 4 ಗಂಟೆಯಿಂದ 5 ಗಂಟೆಯ ವರೆಗೆ ವಿವಿಧ ಕಲಾತಂಡಗಳ ಕಲಾ ಜಾಥಾ ಇರುತ್ತದೆ. ಡೊಳ್ಳು ಕುಣಿತ, ವೀರಗಾಸೆ, ದೇವಿ ವೇಷಧಾರಿ, ಕೀಲುಕುದುರೆಗಳು ಇದರಲ್ಲಿ ಭಾಗವಹಿಸುತ್ತವೆ. ಸಂಜೆ ೫-೩೦ರಿಂದ ಜಯಶ್ರೀ ಶ್ರೀಧರ್ ಅವರ ಸುಗಮ ಸಂಗೀತ ಕಾರ್ಯಕ್ರಮ ಇದ್ದು, ಖ್ಯಾತ ಗಾಯಕಿ ಸುರೇಖಾ ಹೆಗಡೆ ಉದ್ಘಾಟಿಸುವರು. ಹಾಗೆಯೇ ರಾiನ್ ಸಹೋದರಿಯರಿಂದ ವೀಣಾ ವೈವಿಧ್ಯತೆ ಇರುತ್ತದೆ ಎಂದರು.
ಅ.೧೯ರಂದು ಶಿವಪ್ಪ ನಾಯಕ ಅರಮ ನೆಯಲ್ಲಿಯೇ ಸಂಜೆ 5ಗಂಟೆಯಿಂದ ‘ಒಂದು ಭಜನೆ ನೂರು ಕಂಠ ಕಾರ್ಯ ಕ್ರಮದ ಅಡಿಯಲ್ಲಿ100 ಜನರು ಭಜನಾಮೃತ ವೈಭವ ನಡೆಸಿಕೊಡುವರು. ಹಾಗೆಯೇ ಪ್ರತಿಮಾ ಕೋಡೂರು ಅವರಿಂದ ಹರಿಕಥೆ ಮತ್ತು ಅಪರೂಪದ ಹಾಗೂ ಮರೆಯಾಗುತ್ತಿರುವ ಮಾತನಾ ಡುವ ಗೊಂಬೆ ಕಾರ್ಯಕ್ರಮವನ್ನು ಮೈಸೂರಿನ ಸುಮಾ ರಾಜ್‌ಕುಮಾರ್ ನಡೆಸಿಕೊಡಲಿದ್ದಾರೆ. ವೇಣುವಾದನ ಕಾರ್ಯಕ್ರಮವಿರುತ್ತದೆ. ಈ ಎಲ್ಲಾ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ ಉದ್ಘಾಟಿಸುವರು. ಶಾಸಕರಾದ ಡಿ.ಎಸ್. ಅರುಣ್, ರುದ್ರೇಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುತ್ತಾರೆ ಎಂದರು.

ಗೊಂಬೆ ಪ್ರದರ್ಶನ ಮತ್ತು ಸ್ಪರ್ಧೆ
ದಸರಾ ಹಬ್ಬದ ವಿಶೇಷತೆಯಿಂದ ಕೂಡಿರುವ ಗೊಂಬೆ ಪ್ರದರ್ಶನವನ್ನು ಕಲಾ ದಸರಾದಲ್ಲಿ ‘ಮನೆಗೊಂದು ಗೊಂಬೆ ಹೆಸರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಅ.೧೮ರಂದು ಶಿವಪ್ಪ ನಾಯಕ ಅರಮನೆಯಲ್ಲಿಯೇ ಇದರ ಪ್ರದರ್ಶನವಿರುತ್ತದೆ. ನಮ್ಮ ಸಂಸ್ಕೃತಿ, ಕಲೆಯನ್ನು ಸಾರುವ ಪ್ರತಿಬಿಂಬಿಸುವ ಯಾವುದೇ ಗೊಂಬೆಗಳಿದ್ದರೆ ಸಾರ್ವಜನಿಕರು ನಮಗೆ ತಲುಪಿಸಬಹುದು. ಪ್ರದರ್ಶನದ ನಂತರ ವಾರಸುದಾರರಿಗೆ ಆ ಗೊಂಬೆಗಳನ್ನು ವಾಪಾಸು ನೀಡಲಾಗುತ್ತದೆ. ಇದೊಂದು ವಿಶಿಷ್ಟ ಪ್ರದರ್ಶನವಾಗಿರುತ್ತದೆ ಎಂದು ಸುರೇಖಾ ಮುರಳೀಧರ್ ತಿಳಿಸಿದರು.
ಹಾಗೆಯೇ ಮನೆಮನೆಗಳಲ್ಲಿ ಗೊಂಬೆಗಳನ್ನು ಕೂರಿಸಲಾಗುತ್ತದೆ. ತಮ್ಮ ಮನೆಗಳಲ್ಲಿ ಕೂರಿಸಿದ್ದರೆ ಕಲಾ ದಸರಾ ಸಮಿತಿಗೆ ತಿಳಿಸಬೇಕು. ನಾವು ೧೬ ಮತ್ತು ೧೭ರಂದು ಯಾರು ಮನೆಗಳಲ್ಲಿ ಗೊಂಬೆಗಳನ್ನು ಕೂರಿಸುತ್ತಾರೊ ಅವರ ಮನೆಗಳಿಗೆ ಹೋಗಿ ವೀಡಿಯೋ ಚಿತ್ರೀಕರಣ ಮಾಡಲಾಗುವುದು. ವಿಶೇಷವಾಗಿ ಮತ್ತು ವಿಶಿಷ್ಟವಾಗಿ ಗೊಂಬೆ ಕೂರಿಸಿದವರಿಗೆ ಬಹುಮಾನ ನೀಡಲಾಗುತ್ತದೆ. ಈ ಬಗ್ಗೆ ಹೆಚ್ಚಿನ ವಿವರಗಳಿಗೆ ಮೊ: ೯೪೮೧೫೬೪೩೪೩ / ೯೯೭೨೨೬೦೬೦೦/ ೮೭೨೨೩೭೫೪೭೫ರಲ್ಲಿ ಸಂಪರ್ಕಿಸಬಹುದು.


ಅ.20ರಂದು ಜ್ಞಾನ ದಸರಾವನ್ನು ಕುವೆಂಪು ರಂಗಮಂದಿರದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಸಮನ್ವಯ ಟ್ರಸ್ಟ್ ಸಹಕಾರದಲ್ಲಿ ಪದವಿ ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಒಂದು ದಿನದ ತರಬೇತಿಯಾಗಿದೆ. ನಗರದ ಎಲ್ಲಾ ಕಾಲೇಜಿನ ಪದವಿ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾಧಿಕಾರಿಗಳು ಕಾರ್ಯಾಗಾರ ಉದ್ಘಾಟಿಸುವರು. ಹಲವು ಗಣ್ಯರು ಇದರಲ್ಲಿ ಭಾಗವಹಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್. ಎನ್. ಚನ್ನಬಸಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷೆ ಭಾನುಮತಿ ವಿನೋದ್‌ಕುಮಾರ್ ಶೇಟ್, ಸದಸ್ಯೆ ಕಲ್ಪನಾ ರಮೇಶ್, ಸದಸ್ಯ ಕಾರ್ಯ ದರ್ಶಿ ಶಶಿಧರ್ ಎ.ಪಿ., ನಳಿನಾ, ಲೀಲಾ, ಕೆ.ಜಿ. ವೆಂಕಟೇಶ್ ಮುಂತಾದವರಿದ್ದರು.

Exit mobile version