Site icon TUNGATARANGA

ಅ 12 ಮತ್ತು 13 ರಂದು ಶಿವಮೊಗ್ಗದ ಈ ಏರಿಯಾಗಳಲ್ಲಿ ಕುಡಿಯುವ ನೀರು ಬಂದ್ | ಏರಿಯಾಗಳ ಮಾಹಿತಿಗೆ ಲಿಂಕ್ ಬಳಸಿ

ಶಿವಮೊಗ್ಗ,  : ಶಿವಮೊಗ್ಗ ನಗರದ ಕೆ.ಆರ್.ವಾಟರ್ ವರ್ಕ್ಸ್‌ನಲ್ಲಿರುವ ಆರ್.ಎಂ.-೦೭ ಏರು ಕೊಳವೆ ಮಾರ್ಗಕ್ಕೆ ೫೦೮ ಮಿ.ಮೀ. ವ್ಯಾಸದ ಎಂ.ಎಸ್. ಕೊಳವೆ ಮಾರ್ಗದಲ್ಲಿ ತುರ್ತು


 ದುರಸ್ಥಿ ಕಾರ್ಯ ಕೈಗೊಳ್ಳಬೇಕಾಗಿರುವುದರಿಂದ ಅ. ೧೨ ಮತ್ತು ೧೩ ರಂದು ನಗರದ ಮಿಳಘಟ್ಟ, ತುಂಗಾನಗರ, ಪಿ.ಡಬ್ಲ್ಯೂಡಿ ಟ್ಯಾಂಕ್ (ಮಾರ‍್ನಮಿಬೈಲ್), ಜಿಲ್ಲಾ ಪಂಚಾಯತ್ ಕಚೇರಿ ಎದುರು,



 ರವೀಂದ್ರನಗರ, ಸ್ಟೇಡಿಯಂ ಟ್ಯಾಂಕ್, ಶಿವಮೂರ್ತಿ ಸರ್ಕಲ್ ಟ್ಯಾಂಕ್‌ಗಳಿಗೆ ಹೊಂದಿಕೊಂಡಿರುವ ಬಡಾವಣೆಗಳಿಗೆ ದೈನಂದಿನ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಸಾರ್ವಜನಿಕರು ಮಂಡಳಿಯೊಂದಿಗೆ 



ಸಹಕರಿಸುವಂತೆ ಕನನೀಸ ಮತ್ತು ಒಚ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 
Exit mobile version