Site icon TUNGATARANGA

ಶಿವಮೊಗ್ಗ | ಆಲ್ಕೋಳ ಮೆಸ್ಕಾಂ ಪವರ್ ಮ್ಯಾನ್ ಪ್ರವೀಣ್ ನಾಯ್ಕ್ ರಿಂದ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದಕ್ಕೆ ಸುಣ್ಣ | ಕ್ರಮಕ್ಕೆ ಸೋಮಿನಕೊಪ್ಪ ಸಾರ್ವಜನಿಕರ ಆಗ್ರಹ

ರಾಕೇಶ್ ಸೋಮಿನಕೊಪ್ಪ


ಶಿವಮೊಗ್ಗ,
ಸಂವಿಧಾನದ ಆರ್ಟಿಕಲ್ 14 ರ ಪ್ರಕಾರ ರಾಜ್ಯದ ಯಾವುದೇ ವ್ಯಕ್ತಿಗೆ ಕಾನೂನಿನ ಮುಂದೆ ಸಮಾನತೆಯನ್ನು ಅಥವಾ ಭಾರತದಲ್ಲಿ ವಾಸಿಸುವ ಎಲ್ಲರಿಗೂ ಸಮಾನ ಕಾನೂನು ಎಂಬ ನೀತಿಯಿದೆ. ಇದನ್ನು ನಿರಾಕರಿಸುವಂತಿಲ್ಲ. ಇದನ್ನು ಅರಿಯದ ಆಲ್ಕೋಳ ವ್ಯಾಪ್ತಿಯ ಮೆಸ್ಕಾಂನ ಪವರ್‌ಮ್ಯಾನ್ ಪ್ರವೀಣ್‌ನಾಯ್ಕ್ ಇದನ್ನು ದುರುಪಯೋಗ ಪಡಿಸಿಕೊಂಡು ಎಲ್ಲಡೆ ಬಗೆ ಬಗೆಯ ಆಟ ಆಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.


ನಗರದ ಸೋಮಿನಕೊಪ್ಪ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುವ ಈ ಪವರ್‌ಮ್ಯಾನ್ ಪ್ರವೀಣ್ ನಾಯ್ಕ್, ತಮ್ಮಗೆ ಬೇಕಿದ್ದವರ ಕರೆಂಟ್ ಬಿಲ್ ಜಾಸ್ತಿ ಇದ್ದರೂ ಸಹ ಕಟ್ ಮಾಡದೇ ಹಾಗೇ ನಗಾಡುತ್ತಾ ಬಿಟ್ಟುಹೋಗುತ್ತಿದ್ದಾರೆ. ಮುಖ ನೋಡಿ ಮಣೆ ಹಾಕುವ ಅವರು ಕೆಲವರ ಬಿಲ್ ಕಡಿಮೆ ಇದ್ದರೂ ಸಹ ಕರೆಂಟ್ ಕಟ್ ಮಾಡಿ ನಿತ್ಯ ಜನರ ಆಕ್ರೋಶಕ್ಕೆ ತುತ್ತಾಗುತ್ತಿದ್ದಾರೆ.


ಇದೇ ಸೋಮಿನಕೊಪ್ಪ ಭೋವಿ ಕಾಲೋನಿಯಲ್ಲಿ ಕೆಲವು ವರ್ಷಗಳ ಹಿಂದೆ ಇದೇ ಪವರ್ ಮ್ಯಾನ್ ಪ್ರವೀಣ್‌ನಾಯ್ಕ್ ಹಾಗೂ ಇಲ್ಲಿನ ಜನರ ವಿರುದ್ಧ ಕರೆಂಟ್ ಬಿಲ್ ವಿಚಾರಕ್ಕೆ ಗಲಾಟೆ ನಡೆದಿತ್ತು. ಈ ಸಂದರ್ಭದಲ್ಲಿ ಕೆಲವು ಯುವಕರು ಪ್ರಶ್ನಿಸಿದ್ದಾರೆ. ಎಲ್ಲರಿಗೂ ಒಂದೇ ರೀತಿ ನೋಡಿ, ಕಡಿಮೆ ರೂಪಾಯಿ ಇದ್ದವರ ಮನೆ ಕರೆಂಟ್ ಕಟ್ ಮಾಡ್ತಿಯಾ, ಜಾಸ್ತಿ ಇರುವ ಮನೆಯವರ ಕರೆಂಟ್ ಕಟ್ ಮಾಡಲು ಒತ್ತಾಯಿಸಿದ್ದಾರೆ ಇದಕ್ಕೆ ಹಲ್ಲೆ ಮಾಡಲು ಬಂದಿದ್ದಾರೆ ಎಂದು ವಿನೋಬನಗರ ಪೊಲೀಸ್ ಠಾಣೆಯಲ್ಲಿ ಈ ಪವರ್‌ಮ್ಯಾನ್ ಮೋಹನ್, ಕೃಷ್ಣಪ್ಪ, ಶೇಖರ್, ಪ್ರಕಾಶ್ ಅವರ ವಿರುದ್ಧ ದೂರು ದಾಖಲಿಸಿದ್ದರು. ಅವತ್ತಿನ ಕೂಲಿಯನ್ನು ನಂಬಿಕೊಂಡು ಬದುಕುವ ಇಲ್ಲಿನ ಜನರು ಇನ್ನೂ ಸಹ ಕೋರ್ಟ್‌ಗೆ ಅಲೆದಾಡುತ್ತಿದ್ದಾರೆ. ಇದನ್ನು ರಾಜಿ ಮಾಡಿ ಕೇಸ್‌ನ್ನು ಮುಕ್ತಾಯಗೊಳಿಸಲು ಇಲ್ಲಿನ ಜನರು ಪತ್ರಿಕೆಯ ಮೂಲಕ ಹಿರಿಯ ಅಧಿಕಾರಿಗಳಿಗೆ ಮನವಿಯ ಮೂಲಕ ಒತ್ತಾಯಿಸಿದ್ದಾರೆ.


ಪವರ್ ಮ್ಯಾನ್ ಪ್ರವೀಣ್‌ನಾಯ್ಕ್ ಅವರ ಬಗ್ಗೆ ಇನ್ನೂ ಹೇಳುವುದಾದರೆ ಕಡಿಮೆ ಬಾಕಿ ಇದ್ದ ಮೊತ್ತಕ್ಕೆ ಮನೆಯ ಮೀಟರ್ ಅನ್ನು ಕಿತ್ತುಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಈತನ ವಿರುದ್ಧ ವಿನೋಬನಗರ ಠಾಣೆಯಲ್ಲಿ ದೂರು ದಾಖಲಿಸಲು ಹೋಗಿದ್ದೆ. ಅಲ್ಲಿನ ಪೊಲೀಸರು ಅವರನ್ನು ಕರೆಸಿ ಬುದ್ದಿಮಾತು ಹೇಳಿ ಕಳುಹಿಸಿದ್ದರು ಎಂದು ಮಹಿಳೆಯೋರ್ವರು ತಿಳಿಸಿದ್ದಾರೆ.


ಪವರ್‌ಮ್ಯಾನ್ ಪವೀಣ್‌ನಾಯ್ಕ್‌ನ ವಿರುದ್ಧ ಹಲವು ಆರೋಪಗಳನ್ನು ಕುರಿತು ಪತ್ರಕರ್ತ ಮಾತನಾಡಿದಾಗ ಈ ಪವರ್‌ಮ್ಯಾನ್ ದರ್ಪದಿಂದ ವರ್ತಿಸುತ್ತಿರುವುದನ್ನು ಹೇಳಿದ್ದಾರೆ. ಇದನ್ನು ತಿಳಿದ ಪತ್ರಕರ್ತ ಕೆಲವು ಮನೆಗಳನ್ನು ಭೇಟಿ ನೀಡಿ ಬಿಲ್‌ಗಳನ್ನು ನೋಡಿದಾಗ ಇಬ್ಬಗೆಯ ನೀತಿ ಅನುಸರಿಸುತ್ತಿರುವುದು ಕಂಡು ಬಂದಿದೆ.


ಈ ವಿಚಾರವನ್ನು ಗಮನಿಸಿದಾಗ ಮೆಸ್ಕಾಂನಿಂದ ಕೆಲ ಪವರ್‌ಮ್ಯಾನ್‌ಗಳಿಗೆ ಜನರ ಜೊತೆಗೆ ಒಡನಾಟದ ಪಾಠ ಹೇಳಿಕೊಡುವ ಅವ್ಯಶಕತೆ ಇದೆ ಎಂದರೆ ತಪ್ಪಾಗಲಾರದು. ಈತನ ವಿರುದ್ಧ ಮೆಸ್ಕಾಂನ ಹಿರಿಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಇತನ ವಿರುದ್ಧ ಮೆಸ್ಕಾಂ ಕಚೇರಿ ಸಮೀಪ ಪ್ರತಿಭಟಿಸುವುದಾಗಿ ತಿಳಿಸಿದ್ದಾರೆ.

ಜಾಸ್ತಿ ಬಿಲ್ ಇದ್ದವರ ಮನೆಯ ಕರೆಂಟ್ ಕಟ್ ಮಾಡದೇ ಕಡಿಮೆ ಇರುವ ಹಾಗೂ ವೈಯಕ್ತಿಕವಾಗಿ ಆಗದಿದ್ದವರ ಮನೆಯ ಕರೆಂಟ್ ಕಟ್ ಮಾಡಿ ಹೋಗುತ್ತಾರೆ. ಕೇಳಲು ಹೋದರೆ ಇಲ್ಲಿನ ಜನರ ಮೇಲೆಯೇ ಜಗಳವಾಡಲು ಮುಂದಾಗುತ್ತಾರೆ ಆ ನಂತರ ದೂರು ದಾಖಲಿಸುವ ಮೂಲಕ ಇಲ್ಲಿನ ಜನರಿಗೆ ತೊಂದರೆ ನೀಡುತ್ತಾರೆ. ಮೊದಲು ಜನರ ಹತ್ತಿರ ಹೇಗೆ ಮಾತನಾಡಬೇಕು, ವರ್ತಿಸಬೇಕು ಎಂದು ತಿಳಿದುಕೊಳ್ಳಲಿ.
-ಮೋಹನ್, ಯುವ ಕಾಂಗ್ರೆಸ್ ಮುಖಂಡ

Exit mobile version