Site icon TUNGATARANGA

ಶಿವಮೊಗ್ಗ/ ಡೆಂಗ್ಯೂ ಜ್ವರಕ್ಕೆ ನವ ವಿವಾಹಿತೆ ಬಲಿ? ಏನಾಗ್ತಿದೆ ಅರೋಗ್ಯ?!


ರಿಪ್ಪನ್‌ಪೇಟೆ,ಅ.08:
ಶಿವಮೊಗ್ಗ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರಕ್ಕೆ ನವವಿವಾಹಿತೆ ಸಾವು ಕಂಡ ಘಟನೆ ರಿಪ್ಪನ್ ಪೇಟೆಯ ಶಬರೀಶ ನಗರದಲ್ಲಿ ನಡೆದಿದೆ‌.
ಇಲ್ಲಿನ ಮಧುರ (31) ಮೃತಪಟ್ಟ ಮಹಿಳೆ. ಅವರು ಕಳೆದೊಂದು ವಾರದಿಂದ ಜ್ವರದಿಂದ ಬಳಲುತ್ತಿದ್ದು, ಸಾಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.


ನಿನ್ನೆ ಬೆಳಗ್ಗೆ ಸಾಗರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ತಾಳಗುಪ್ಪದ ತಾಯಿ ಮನೆಗೆ ಹೋಗಿದ್ದು. ಸಂಜೆ ಮತ್ತೆ ತಲೆ ನೋವು, ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮತ್ತೆ ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ವೈದ್ಯರ ಸಲಹೆಯಂತೆ ಬೆಳಗ್ಗೆ 5 ಗಂಟೆಗೆ ಸಾಗರದಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬರುವ ಪ್ರಯತ್ನ ನಡೆದಿತ್ತು. ಆದರೆ, ದುರಾದೃಷ್ಟವಶಾತ್ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.


ಈಕೆ ಕಳೆದ 6 ತಿಂಗಳ ಹಿಂದಷ್ಟೆ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಮಂಜುನಾಥ ಎಂಬುವವರೊಂದಿಗೆ ಇವರು ಮದುವೆಯಾಗಿದ್ದರು. ಇದೀಗ ಶಬರೀಶ ನಗರದಲ್ಲಿ ನೀರವಮೌನ ಆವರಿಸಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇಂದು ಸಂಜೆ ರಿಪ್ಪನ್‌ಪೇಟೆ ಹಿಂದೂ ರುದ್ರಭೂಮಿಯಲ್ಲಿ ಇವರ ಅಂತ್ಯಕ್ರಿಯೆ ನೆರವೇರಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.

Exit mobile version