ತುಂಗಾ ಭದ್ರಾ ಸಕ್ಕರೆ ಕಾರ್ಖಾನೆ ಆಸ್ತಿ ಖಾಸಗಿ ಲೇಔಟ್ ಆಗಿ ಪರಿವರ್ತನೆ ಆಗದೇ ಸರ್ಕಾರಿ ಸಾರ್ವಜನಿಕ ಸೇವೆಗೆ ಮೀಸಲಾಗ ಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಕೆ. ದೇವೇಂದ್ರಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ತುಂಗಾ ಭದ್ರಾ ಸಕ್ಕರೆ ಕಾರ್ಖಾನೆ ಸುಮಾರು ೧೮೦೦ ಎಕರೆ ಜಾಗ ಹೊಂದಿದೆ. ಅಂದಿನ ಮೈಸೂರು ಸಂಸ್ಥಾನದ ಆಡಳಿತ ದಲ್ಲಿ ಕಬ್ಬು ಬೆಳೆಯುವ ರೈತರ ಅನುಕೂಲಕ್ಕಾಗಿ ಮಲವಗೊಪ್ಪದಲ್ಲಿ ೧೨೦ ಎಕರೆ ಜಾಗದಷ್ಟು ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ನೌಕರರಿಗೆ ಮನೆಗಳನ್ನು ನೀಡಿತ್ತು.
ಇದರ ಜೊತೆಗೆ ೧೨೦ ಎಕರೆ ಜಾಗದಲ್ಲಿ ಕಬ್ಬು ಸಾಗಾಣಿಕೆಗೆ ಬರುವ ವಾಹನಗಳ ನಿಲುಗಡೆಗೆ ಬಳಸಲಾಗುತ್ತಿತ್ತು. ಕ್ರಮೇಣ ಕಾರ್ಖಾನೆ ನಿಂತು ಹೋಯಿತು ಎಂದು ಮನವಿ ದಾರರು ತಿಳಿಸಿದರು.
ಈಗ ಕಾರ್ಖಾನೆಯ ಜಾಗವನ್ನು ನ್ಯಾಯಾಲಯದ ಮೂಲಕ ಆದೇಶ ಮಾಡಿ ಕೊಂಡು ಈ ಜಾಗವನ್ನು ಕೆಲವು ಪ್ರತಿಷ್ಠಿತ ರಾಜಕೀಯ ಪಟ್ಟಭದ್ರ ಹಿತಾಸಕ್ತಿ ಉಳ್ಳವರು ಲೇಔಟ್ ಗಳಾಗಿ ಪರಿವರ್ತನೆ ಮಾಡುವ ಹುನ್ನಾರ ಮಾಡುತ್ತಿದ್ದಾರೆ. ಇದು ತೀವ್ರ ಖಂಡನೀಯ. ಇದನ್ನು ಸಾರ್ವಜನಿಕ ಉದ್ದೇಶಕ್ಕೋಸ್ಕರವಾಗಿಯೇ ಮೀಸಲಾಗಿಡ ಬೇಕು. ಬೇಕಾದರೆ ನ್ಯಾಯಾಲಯದಿಂದ ಗೆದ್ದುಕೊಂಡ ಉದ್ದಿಮೆದಾರರಿಗೆ ಪರಿಹಾರ ನೀಡಿ ಆ ಜಾಗವನ್ನು ಸರ್ಕಾರ ವಶಕ್ಕೆ ಪಡೆಯಬೇಕು ಎಂದು ಆಗ್ರಹಿಸಲಾಗಿದೆ.
ಸರ್ಕಾರ ಈ ಜಾಗದಲ್ಲಿ ಇಂಜಿನಿಯ ರಿಂಗ್ ಕಾಲೇಜ್, ಅಥವಾ ಸರ್ಕಾರಿ ಕಚೇರಿಗಳ ಸಂಕೀರ್ಣ, ಇಲ್ಲವೇ ಐಟಿ ಬಿಟಿ ಉದ್ಯಮಕ್ಕಾಗಿ ಬಳಸಬೇಕು. ಇದರಿಂದ ಉದ್ಯೋಗವೂ ಸಿಕ್ಕಂತಾಗುತ್ತದೆ. ಯಾವುದೇ ಕಾರಣಕ್ಕೂ ಖಾಸಗಿ ಲೇಔಟ್ ಗೆ ಅವಕಾಶ ಕೊಡಬಾರದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಕವಿತಾ ರಾಘ ವೇಂದ್ರ, ಮಧುಕುಮಾರ್, ಬಾಲಾಜಿ, ಶಿವ ಕುಮಾರ್, ಅಫ್ತಾಬ್ ಫರ್ವಿಜ್, ಮಂಜು ನಾಥ್, ರೇಷ್ಮಾ ಮೊದಲಾದವರಿದ್ದರು.