Site icon TUNGATARANGA

ಕ್ರೀಡೆಯಲ್ಲಿ ಕ್ರೀಡಾ ಮನೋಭಾವದಿಂದ ಭಾಗವಹಿಸಿ, ಸೋಲು – ಗೆಲುವನ್ನು ಸಮಾನವಾಗಿ ಸ್ವೀಕರಿಸಿ: ಚನ್ನಪ್ಪ ಚಾಲನೆ

ಕ್ರೀಡೆಯಿಂದ ಶಿಸ್ತು, ಏಕಾಗ್ರತೆ  ಬೆಳೆಯುವುದು ಎಂದು ಭದ್ರಾವತಿಯ ಮಾಜಿ ನಗರಸಭಾ ಅಧ್ಯಕ್ಷರು ಹಾಲಿ ಸದಸ್ಯರಾದ ಚನ್ನಪ್ಪ  ಕ್ರೀಡಾಪಟುಗಳಿಗೆ ತಿಳಿಸಿದರು.

     

ಭದ್ರಾವತಿ ನಗರದ ಶ್ರೀ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಭದ್ರಾವತಿ. ಹಾಗೂ ಶ್ರೀ ಜ್ಞಾನಶ್ರೀ ವಿದ್ಯಾಸಂಸ್ಥೆ ದೊಡ್ಡ ಗೋಪಿನಹಳ್ಳಿ,ಭದ್ರಾವತಿ. ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ 14 ಮತ್ತು 17 ವರ್ಷ ವಯೋಮಿತಿಯೊಳಗಿನ ಬಾಲಕರ ಜಿಲ್ಲಾಮಟ್ಟದ ನೇರ ಕ್ರಿಕೆಟ್ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದ ಅವರು, ಓದಿನ ಜೊತೆಗೆ ಕ್ರೀಡೆಗೂ ಹೆಚ್ಚು ಒತ್ತು ಕೊಟ್ಟಾಗ ಕ್ರೀಡೆ ಬೆಳೆಯಲು ಸಾಧ್ಯವಾಗುತ್ತದೆ.

    ಕ್ರೀಡೆಯಲ್ಲಿ ಕ್ರೀಡಾ ಮನೋಭಾವದಿಂದ ಭಾಗವಹಿಸಿ, ಸೋಲು – ಗೆಲುವನ್ನು ಸಮಾನವಾಗಿ ಸ್ವೀಕರಿಸಿ,ನಿರಂತರ ಅಭ್ಯಾಸದಿಂದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಕ್ರೀಡಾಪಟುಗಳಿಗೆ ಕರೆ ನೀಡಿದರು.

 ಇದೇ ಸಂದರ್ಭದಲ್ಲಿ ಹಿರಿಯ ದೈಹಿಕ ಶಿಕ್ಷಣ ನಿರ್ದೇಶಕರಾದ ಶಿವಲಿಂಗೇಗೌಡ ಮಾತನಾಡುತ್ತಾ, ಸೋಲು ಗೆಲುವು ಮುಖ್ಯವಲ್ಲ,ಕ್ರೀಡಾ ಕೂಟದಲ್ಲಿ ಭಾಗವಹಿಸುವುದು ಮುಖ್ಯ. ಕ್ರೀಡೆಯಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೂ ಶುಭ ಹಾರೈಸಿದರು.

   ಭದ್ರಾವತಿ ತಾಲ್ಲೂಕಿನ ದೈಹಿಕ ಶಿಕ್ಷಣ ಪರಿವೀಕ್ಷರಾದ ಪ್ರಭು ಜಿ. ಎಚ್., ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ  ರಾ. ಹ. ತಿಮ್ಮೇನಹಳ್ಳಿ, ಕ್ರಿಕೆಟ್ ತೀರ್ಪುಗಾರರಾದ  ರಘುವೀರ್ ಮತ್ತು ಅನಿಲ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Exit mobile version