Site icon TUNGATARANGA

ನಿಮ್ಮ ತುಂಗಾತರಂಗ ಆತ್ಮೀಯರಿಗೊಂದೇ ಮನವಿ/ ಎಂದಿನಂತಿನ ವಿಶೇಷಾಂಕಕ್ಕೆ ನಿಮ್ಮ ಬರಹ/ ಜಾಹೀರಾತು ಇರಲಿ/ ಅಕ್ಷರ ಜೊತೆಗಿನ ಒಡನಾಟದಲ್ಲಿ ಪ್ರೀತಿಯ ಗುದ್ದು/ ಮಾಹಿತಿ ಓದಿ ಇಷ್ಟ ಕಷ್ಟ ಮಿಕ್ಕಿದ್ದು

ಎಂದಿನಂತೆ ಪ್ರತಿ ವರುಷದ ನಿಮ್ಮ ತುಂಗಾತರಂಗದ ವಿಶೇಷಾಂಕದಲ್ಲಿ ನಿಮ್ಮ ಬರಹವಿರಲಿ, ಆತ್ಮೀಯರಾದ ನಿಮ್ಮದೊಂದು ಚಿಕ್ಕ ಚೊಕ್ಕ ಜಾಹೀರಾತಿರಲಿ.
೨೦೧೨ರಿಂದ ಇಂದಿನವರೆಗೂ ನಿಮ್ಮ ಮನೆ ಹಾಗೂ ಮನ ತಲುಪುತ್ತಿರುವ ನಿಮ್ಮ ತುಂಗಾತರಂಗ ದಿನಪತ್ರಿಕೆಯ ಬಳಗದ ನಿರಂತರ ಶ್ರಮ, ನಿಮ್ಮನ್ನ ಜೊತೆಗಿಟ್ಟುಕೊಂಡು ನಡೆಸುವ ಹಾದಿಯೇ ಇಂದಿಗೂ ಪತ್ರಿಕೆಗೆ ಬೆನ್ನೆಲುಬಾಗಿ ನಿಂತಿದೆ.
ಎಂದಿನಂತೆ ಪ್ರತಿವರುಷದ ಕ್ಯಾಲೆಂಡರ್, ಪ್ರತಿ ದೀಪಾವಳಿಯಲ್ಲಿ ಪತ್ರಿಕೆಯ ವರುಷದ ಸಂಭ್ರಮದಲ್ಲಿ ನೀಡುವ ವಾರ್ಷಿಕ ವಿಶೇಷಾಂಕ ತುಂಗೆಯ ಜೊತೆಗಿನ ಪದಹೊತ್ತು ನಿಮ್ಮ ಅಭಿನಂದನೆಗಳ ಸುರಿಮಳೆಗೆ ನಿಮ್ಮ ಸ್ಪಂದನೆ ಹಾಗೂ ಸಹಕಾರ ಅತ್ಯಗತ್ಯ.


ಪತ್ರಿಕೆ ನಿರಂತರ ಸುದ್ದಿಯ ವೈವಿದ್ಯತೆ ಹೊತ್ತು ತರುವ ಜವಾಬ್ದಾರಿ ಜೊತೆ ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವುದನ್ನು ತಾವು ಗಮನಿಸಿದ್ದೀರಿ.
ನಮ್ಮಲ್ಲೊಂದೆರಡು ಬೇಡಿಕೆಗಳಿವೆ ಕೇಳಿ. (ಕಷ್ಟವಾದರೆ ಬೇಡ)
ಪ್ರತಿ ವರುಷದ ವಿಶೇಷಾಂಕವನ್ನು ನೀವು ಗಮನಿಸಿದ್ದೀರಿ. ಯಾವುದೇ ಬಗೆಯಲ್ಲಿ ಯಾರ ಹತ್ತಿರವೂ ಕೈ ಚಾಚದೇ ನಿಮ್ಮ ತುಂಗಾತರಂಗ ಕಳೆದ ಹದಿಮೂರು ವರುಷದಿಂದ ವ್ಯವಸ್ಥಿತವಾಗಿ ಪತ್ರಿಕೆ ನಡೆಸುತ್ತಿದ್ದು ನಿಮ್ಮ ಮನ ಗೆದ್ದಿದೆ ಎಂದುಕೊಳ್ಳುತ್ತಲೇ ಎಂದಿನಂತೆ ಈ ಬಾರಿಯೂ ನಿಮ್ಮ ಪತ್ರಿಕೆಗೆ ಜಾಹೀರಾತು ನೀಡುವ ಮೂಲಕ ನೆರವು ನೀಡುವಂತೆ ಮನವಿ ಸಲ್ಲಿಸುತ್ತೇವೆ.
ನಿಮ್ಮ ನಾಕು ಸಾಲು ನಮಗೂ ಒಂದ್ ಆಸ್ತಿ
ತುಂಗಾತರಂಗ ನಿರಂತರ ಪತ್ರಿಕೆಯಲ್ಲಿ ರಾಜ್ಯದ ಎಲ್ಲಾ ಬರಹಗಾರರನ್ನು ನಿರಂತರ ಬೆಳೆಸುತ್ತಿದೆ. ನೀವು ಕಳಿಸಿದ ವಾಟ್ಸಪ್ ಮಾಹಿತಿಯನ್ನೇ ಹಿಡಿದು ನಿಮ್ಮ ಲೇಖನ, ಕವನ, ಪ್ರಬಂಧ, ಅಡುಗೆ, ಹಾಸ್ಯ, ನಗೆ, ಮನದ ಮಾತು ಹಾಕಿ ನಡಿನ ಜನರಿಗೆ ಅದನ್ನು ಕಳಿಸುವಲ್ಲಿ ಯಶಸ್ವಿಯಾಗಿದೆ. ನೂರಾರು ಬರಹಗಾರರ ನಿಮ್ಮ ಪ್ರೀತಿಯಿಂದ ತುಂಗಾತರಂಗ ಇಷ್ಟು ದೊಡ್ಡಮಟ್ಟದಲ್ಲಿ ಗುರುತಿಸಿಕೊಂಡಿದೆ. ಇದಕ್ಕೆ ಕಾರಣರಾದ ಜಿಲ್ಲೆ, ರಾಜ್ಯ, ಅಂತರರಾಜ್ಯ, ಹೊರರಾಷ್ಟ್ರಗಳಲ್ಲಿನ ಕವಿ ಮನಸುಗಳಿಗೆ ಪ್ರಣಾಮಗಳು.


ಅಂತೆಯೇ ತಾವು ಈ ಬಾರಿಯ ವಿಶೇಷಾಂಕಕ್ಕೆ ವಿಶೇಷವೆನಿಸುವ ಬರಹ ನೀಡಿ. ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಈ ಬರಹ ಬಾರದಿರಲಿ. ವಿಶೇಷಾಂಕದಲ್ಲಿ ನಿಮ್ಮ ಬರಹ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಂಗೊಳಿಸಲಿ.
ಪತ್ರಿಕೆ, ಬರಹದ ನಡುವಿನ ನಿಮ್ಮ ಬಳಗಕ್ಕೆ ಆರ್ಥಿಕ ಸಹಾಯವೂ ಅತ್ಯಗತ್ಯವಾಗಿದ್ದು, ಚಂದದ ಎಂದಿನಂತಹ ಪುಸ್ತಕ ನೀಡಲು ಬರೆಯಿರಿ, ಬೆಳೆಸಿರಿ., ಜೊತೆ ಕೈ ಜೋಡಿಸಿ.

ಗಜೇಂದ್ರಸ್ವಾಮಿ, ಸಂಪಾದಕ
ತುಂಗಾತರಂಗ, ಶಿವಮೊಗ್ಗ

ವಿವರಗಳಿಗೆ…,
9448256183, 9019582495, 9080653545, 7483162573,9480796656

Exit mobile version