ಶಿವಮೊಗ್ಗ, ಅ. 03 :
ಭಾರತೀಯ ಅಂಚೆ ಇಲಾಖೆಯು “ನವ ಭಾರತದ ನಿರ್ಮಾಣಕ್ಕಾಗಿ ಡಿಜಿಟಲ್ ಇಂಡಿಯಾ” (Digital India for New India) ಎಂಬ ವಿಷಯದ ಕುರಿತು 18 ವರ್ಷದೊಳಗಿನ ಹಾಗೂ 18 ವರ್ಷದ ಮೇಲ್ಪಟ್ಟವರಿಗೆ ಪತ್ರ ಲೇಖನ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.
ಸ್ಪರ್ಧಾಳುಗಳು ಹಿಂದಿ, ಇಂಗ್ಲೀಷ್ ಅಥವಾ ಕನ್ನಡ ಭಾಷೆಯಲ್ಲಿ ಅಂತರ್ದೇಶೀಯ ಪತ್ರ (Inland letter card) ದಲ್ಲಿ ಐದು ನೂರು ಶಬ್ಧಗಳಿಗೆ ಮೀರದಂತೆ ಹಾಗೂ ಎ-4 ಶೀಟ್‍ನ ಕಾಗದದಲ್ಲಿ 1000 ಶಬ್ಧಗಳಿಗೆ ಮೀರದಂತೆ ಲೇಖನವನ್ನು ಕೈಬರಹದಲ್ಲಿ ಬರೆದು ಅಂಚೆ ಲಕೋಟೆಯಲ್ಲಿ ಅಕ್ಟೋಬರ್ 31ರೊಳಗೆ ಅಂಚೆ ಅಧೀಕ್ಷಕರು, ಶಿವಮೊಗ್ಗ ಅಂಚೆ ವಿಭಾಗ, ಶಿವಮೊಗ್ಗ ಇವರಿಗೆ ಕಳುಹಿಸುವುದು.
ಲೇಖನವನ್ನು ಚೀಫ್ ಪೋಸ್ಟ್ ಮಾಸ್ಟರ್ ಜನರಲ್, ಕರ್ನಾಟಕ ವೃತ್ತ, ಬೆಂಗಳೂರು-560001 ಇವರನ್ನು ಉದ್ದೇಶಿಸಿ ಬರೆಯಬೇಕಾಗಿದ್ದು, ಲಕೋಟೆಯ ಮೇಲ್ಗಡೆ “ಢಾಯೀ ಅಖರ್” (Dhai Akhar) ಎಂದು ನಮೂದಿಡಿ ಅದರೊಂದಿಗೆ 18 ವರ್ಷ ಮೇಲಿನವರು/ 18 ವರ್ಷ ಕೆಳಗಿನವರು ಎಂಬ ಮಾಹಿತಿಯನ್ನು ಸ್ಪಷ್ಟವಾಗಿ ಬರೆದಿರಬೇಕು. ಈ ರೀತಿ ಕೈ ಬರಹದಲ್ಲಿ ಬರೆದ ಪತ್ರಗಳನ್ನು ಈ ಕಚೇರಿಗೆ ಸಮೀಪದ ಅಂಚೆ ಕಚೇರಿಯಲ್ಲಿ ಸಲ್ಲಿಸಬಹುದು. ಪ್ರತಿ ವಿಭಾಗದಲ್ಲಿ ಅತ್ಯುತ್ತಮ ಮೂರು ಬರಹಗಳಿಗೆ ಬಹುಮಾನಗಳನ್ನು ದೇಶೀಯ ಮಟ್ಟದಲ್ಲಿ ಕ್ರಮವಾಗಿ ರೂ. 50,000/- ರೂ. 25,000/-, ರೂ. 10,000/- ಮತ್ತು ಕರ್ನಾಟಕ ವೃತ್ತ ಮಟ್ಟದಲ್ಲಿ ಕ್ರಮವಾಗಿ ರೂ. 25,000/-, ರೂ.10,000/-, ರೂ. 5,000/- ಘೋಷಿಸಲಾಗುವುದು.
ಭಾರತೀಯ ಅಂಚೆ ಇಲಾಖೆ ವತಿಯಿಂದ ನಡೆಯುವ ಈ ಪತ್ರಲೇಖನ ಸ್ಪರ್ಧೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುವಂತೆ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.