Site icon TUNGATARANGA

ಸುಂದರ ಮನೆ-ಕಟ್ಟಡ ನಿರ್ಮಿಸಬೇಕೆ ನೀವಿಲ್ಲಿ ಬನ್ನಿ/ ಶಿವಮೊಗ್ಗದಲ್ಲಿ ಅ.6ರಿಂದ ಎಸಿಇಎನ ಬೃಹತ್ ವಸ್ತು ಪ್ರದರ್ಶನ


ಶಿವಮೊಗ್ಗ, ಅ.೦೩:
ನೀವು ಹೊಸದಾಗಿ ಹೊಸ ಹೊಸ ವಿನ್ಯಾಸದ ನವನಾವಿನ್ಯ ಮನೆ ನಿರ್ಮಿಸಬೇಕೆ, ಕಟ್ಟಡ ಕಟ್ಟಬೇಕೆ.? ರಾಷ್ಟ್ರೀಯ, ಅಂತರಾಷ್ಟ್ರೀಯ ಉತ್ಪಾದಕರಿಂದ ತಯಾರಾದ ಕಟ್ಟಡ ಸಾಮಾಗ್ರಿಗಳು, ಇಂಟಿರೀಯಸ್, ಎಕ್ಸ್‌ಟೀರಿಯಸ್ ಸಿಮೆಂಟ್, ಇಟ್ಟಿಗೆ, ಬಣ್ಣ, ಎಲೆಕ್ಟ್ರೀಕಲ್ಸ್, ಪ್ಲೇವುಡ್, ಬಾತ್‌ರೂಂ ಫಿಟಿಂಗ್ಸ್, ಎಲೆಕ್ಟ್ರಾನಿಕ್ಸ್ ಡೋರ್ ಫಿಟಿಂಗ್ಸ್, ಸೋಲಾರ್, ರೂಪ್‌ಟಾಪ್& ಸೋಲಾರ್ ವಾಟರ್ ಹೀಟರ್ ಸೇರಿದಂತೆ ಹತ್ತು ಹಲವು ಬಗೆಯ ವಸ್ತುಗಳನ್ನು ನೋಡಬೇಕೆ.? ನಿಮ್ಮ ಮನೆಯನ್ನು ಅಂದವಾಗಿ ಕಟ್ಟಬೇಕೆ?
ಹಾಗಾದರೆ ಶಿವಮೊಗ್ಗದ ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರಿಂಗ್ ಅಂಡ್ ಅರ್ಕೇಟೆಕ್ಟ್ಸ್, ಅಕ್ಟೋಬರ್ ೬ರಿಂದ ಮೂರು ದಿನಗಳ ಕಾಲ ನಗರದ ಶುಭಮಂಗಳದಲ್ಲಿ ಬೃಹತ್ ವಸ್ತುಪ್ರದರ್ಶನ ನೋಡಲು ಬನ್ನಿ, ಎಂದು ಅಸೋಸಿಯೇಷನ್‌ನ ಅಧ್ಯಕ್ಷ ಜಿ.ರುದ್ರೇಶಪ್ಪ ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ನಿತ್ಯ ನಿರಂತರವಾಗಿ ಹೊಸ ಹೊಸ ವಿನ್ಯಾಸಗಳು ನಿರ್ಮಾಣಗಾರರಿಗೆ ವಾಸ್ತು ಶಿಲ್ಪಿಗಳಿಗೆ, ಇಂಜಿನಿಯರ‍್ಸ್‌ಗಳಿಗೆ ದೊರೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಯುಎಸ್ ಕಮ್ಯೂನಿಕೇಷನ್ಸ್ ಜೊತೆಗೂಡಿ ನಮ್ಮ ಸಂಸ್ಥೆಯು ಈ ಒಂದು ಪ್ರದರ್ಶನವನ್ನು ಏರ್ಪಡಿಸಿದೆ ಎಂದರು.
೮೫ಕ್ಕೂ ಹೆಚ್ಚು ಸ್ಟಾಲ್‌ಗಳಲ್ಲಿ ಪ್ರದರ್ಶನ ಹಾಗೂ ಸ್ಥಳೀಯ ಡೀಲರ‍್ಸ್‌ಗಳಿಂದ ಮಾರಾಟವಿದ್ದು, ಈ ಸಮಗ್ರ ತಿಳುವಳಿಕೆಯ ಜೊತೆಗೆ ಕಟ್ಟಿದ ಕಟ್ಟಡದಲ್ಲಿ ಏನಾದರೂ ತೊಂದರೆಗಳು ಕಂಡು ಬಂದಲ್ಲಿ ಅವುಗಳಿಗೆ ಸಲಹೆ, ಸೂಚನೆ ದೊರಕಲಿದೆ. ಕಾರ್ಯಕ್ರಮದ ಮುಖ್ಯ ಪ್ರಯೋಜಕರಾಗಿ ಹೆವೆಲ್ಸ್‌ಇಂಡಿಯಾ ಲಿಮಿಟೆಡ್, ಸಹ ಪ್ರಾಯೋಜಕರಾಗಿ ಜಿಂದಾಲ್ ಪ್ಯಾಂಥರ್ ಸ್ಟೀಲ್ಸ್, ಪಂಕಜ್ ಸ್ಟೀಲ್ಸ್, ಕಾಣಿಸಿಕೊಂಡಿದ್ದು, ಇದಕ್ಕೆ ಶಿವಮೊಗ್ಗದ ಫೋರ್‌ವಿಂಗ್ಸ್ ಸಹಕಾರ ನೀಡಿದೆ ಎಂದರು.


ಕಾರ್ಯಕ್ರಮವು ಅ.೦೬ರ ಮದ್ಯಾಹ್ನ ೧೨ ಗಂಟೆಗೆ ಶಿವಮೊಗ್ಗ ಬಸವಕೇಂದ್ರದ ಡಾ.ಬಸವಮರಳುಸಿದ್ದ ಸ್ವಾಮೀಜಿ ಸಾನಿಧ್ಯದಲ್ಲಿ ಸಚಿವ ಮಧುಬಂಗಾರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರರಿಂದ ಉದ್ಗಾಟನೆಯಾಗಲಿದ್ದು, ಶಾಸಕರುಗಳಾದ ಚನ್ನಬಸಪ್ಪ, ರುದ್ರೇಗೌಡ, ಡಿ.ಎಸ್.ಅರುಣ್, ಮಾಜಿ ಶಾಕರುಗಳು, ಜಿಲ್ಲೆಯ ಅಧಿಕಾರಿಗಳು ಆಗಮಿಸಲಿದ್ದಾರೆ ಎಂದರು.
ಸಾರ್ವಜನಿಕರಿಗೆ ಸಂಪೂರ್ಣ ಉಚಿತ ಪ್ರದರ್ಶನವಿದ್ದು, ಎಲ್ಲರೂ ಈ ವಸ್ತು ಪ್ರದರ್ಶನಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಭರತ್ ಶೇಖರ್ ಕೋರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್‌ನ ಕಾರ್ಯದರ್ಶಿ ಎಂ.ಕೆ.ಶಿವಾನಂದ, ಖಜಾಂಚಿ ಎಸ್.ಶರತ್, ಕಂಪನಿಯ ಉಮಾಪತಿ, ಕಲ್ಮೇಶ್ ಉಪಸ್ಥಿತರಿದ್ದರು.

Exit mobile version