Site icon TUNGATARANGA

ಈಶ್ವರಪ್ಪರಿಗೆ ನಾನು ಕ್ಷಮಾಪಣೆ ನೀಡಿದ್ದೇನೆ: ವಕೀಲ ಶ್ರೀಪಾಲ್ ಮನದ ಮಾತು ಕೇಳಿ…, ಯಾಕೆ ಹೀಗೆ ಹೇಳಿದರು?

ಕೆ.ಎಸ್. ಈಶ್ವರಪ್ಪನವರನ್ನು ನಾನು ಗಂಬಿರವಾಗಿ ಪರಿಗಣಿಸಿಲ್ಲ, ಪಾಪ ವಯೋಸಹಜ ನ್ಯೂನತೆ ಗಳಿಂದ ಕೆಲವೊಮ್ಮೆ ಏನೇನೊ ಮಾತನಾಡುತ್ತಾರೆ, ನನಗೆ ವಿನಾಕಾರಣ ರಾಷ್ಟ್ರ ದ್ರೋಹಿ, ಇವನನ್ನು ಬಂದಿಸಿ ಎಂತೆಲ್ಲಾ ಹೇಳಿದ್ದನ್ನು ಕೇಳಿ ಹಲವರು ಕೆ.ಎಸ್.ಈಶ್ವರಪ್ಪ ನವರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಿ ಎಂದರು, ನಾನು ಮಾನನಷ್ಟ ಮೊಕದ್ದಮೆ ದಾಖಲಿಸಿ ಅವರನ್ನು ಜೈಲಿಗೆ ಕಳಿಸಬಹುದು ಆದರೆ ನನಗೆ ಇಷ್ಟವಿಲ್ಲ.

ನಿನ್ನೆ ಕೆ.ಎಸ್. ಈಶ್ವರಪ್ಪ ಹೇಳಿದ್ದಿಷ್ಟು…

ವಕೀಲ ಕೆ.ಪಿ. ಶ್ರೀಪಾಲ್‌ನನ್ನು ಬಂಧಿಸಿ: ಈಶ್ವರಪ್ಪ https://tungataranga.com/?p=24016

ಮೇಲಿನ 👆👆ಸಂಪೂರ್ಣ ಸುದ್ದಿ ಓದಲು ಕೊಟ್ಟಿರುವ ಲಿಂಕ್ ಬಳಸಿ

.

ಪಾಪ 40-45 ವರ್ಷ ಅವರನ್ನು ಜೊತೆಗೆ ಇಟ್ಟು ಕೊಂಡ ಬಿಜೆಪಿಯವರೆ ಅವರನ್ನು ಗಂಬಿರವಾಗಿ ತೆಗೆದುಕೊಳ್ಳುತ್ತಿಲ್ಲಾ, ಅಧಿಕಾರ ಇಲ್ಲದಿದ್ದರು ಸಹ ಎಸ್ಕಾರ್ಟ್ ಇಟ್ಟುಕೊಂಡು ಓಡಾಡುತ್ತಿದ್ದಾರೆ ನಾನು ಕೇಸು ದಾಖಲಿಸಿದರೆ ಮತ್ತೆ ನ್ಯಾಯಾಲಯಕ್ಕೂ ಸಹ ಎಸ್ಕಾರ್ಟ್ ನಲ್ಲೆ ಬರುತ್ತಾರೆ ಇದು ಸರ್ಕಾರಕ್ಕೆ ಮತ್ತಷ್ಟು ಹೊರೆ.

ಕೆಲವು ವರ್ಷದಗಳಿಂದ ನಡೆಯುತ್ತಿರುವ ನಮ್ಮ ಸೌರ್ಹಾದ ಸಬೆಗಳು, ಶಾಂತಿ ನಡಿಗೆಗಳು ಅವರನ್ನು ಡಿಸ್ಟ್ ರ್ಬ್ ಮಾಡಿವೆ, ಅವರಿಗೆ ಶಿವಮೊಗ್ಗ ಶಾಂತವಾಗಿದ್ದರೆ ಸಹಿಸಲಾಗದು ಅದಕ್ಕಾಗಿ ಶಾಂತಿ ಭಯಸುವವರಿಗೆ ಅವರು ಬೈಯುವುದು ಸಹಜ, ಅದರಲ್ಲೂ ಚನ್ನಬಸಪ್ಪನವರು MLA ಆಗಿರುವುದು ಅವರಿಗೆ ಸಹಿಸಲಾಗದ ಸಿಟ್ಟನ್ನು ತಂದಿದೆ ತಮ್ಮ ಮಗನ ಬದಲು ಬೆರೆಯಾರೋ MLA ಆಗಿದ್ದಕ್ಕೆ ನೇರವಾಗಿ ತೊರಿಸಿಕೊಳ್ಳಲಾಗದೆ ಹತಾಶೆಯಿಂದ ಏನೇನೋ ಸಂಬಂದರಹಿತವಾಗಿ ಮಾತನಾಡುತ್ತಾರೆ, ಇಳಿ ವಯಸ್ಸಿನಲ್ಲಿ ಕೆಲವರಿಗೆ ಈ ತರದ ನ್ಯೂನ್ಯತೆಗಳು ಸಹಜ ಹಾಗಾಗಿ ಅವರ ನಿನ್ನೆಯ ಹೇಳಿಕೆಗಾಗಿ ಅವರಿಗೆ ಕ್ಷಮಾಪಣೆ ನೀಡಿದ್ದೇನೆ.
ಕೆ.ಪಿ.ಶ್ರೀಪಾಲ.
ವಕೀಲರು.

Exit mobile version