Site icon TUNGATARANGA

ಶಿವಮೊಗ್ಗದಲ್ಲಿ ಶ್ರದ್ಧಾ, ಭಕ್ತಿಯಿಂದ ತುಳಸಿ ಆರಾಧನೆ

ಶಿವಮೊಗ್ಗ ನಗರದಲ್ಲಿ ಇಂದು ಮಹಿಳೆಯರು ಶ್ರದ್ಧಾ ಭಕ್ತಿಯಿಂದ ತುಳಸಿ ಪೂಜೆಯನ್ನು ಸಢಗರ, ಸಂಬ್ರಮದಿಂದ ಆಚರಿಸಿದರು.


ಕಾರ್ತಿಕ ಮಾಸದಲ್ಲಿ ಆಚರಿಸುಂತಹ ವಿಶೇಷ ಆಚರಣೆಗಳಲ್ಲಿ ತುಳಸಿ ಪೂಜೆಯೂ ಒಂದು. ಇದನ್ನು ಆಚರಿಸುವ ಉದ್ದೇಶ ವಿಷ್ಣು ಹಾಗೂ ತುಳಸಿಯ ಮದುವೆಯ ಆಚರಣೆಯಂತೆ, ಚಾಂದ್ರಮಾನ ಕಾರ್ತಿಕಮಾಸ ಶುಕ್ಲ ಪಕ್ಷದ 12 ನೇ ದಿನ ಅಂದರೆ ದ್ವಾದಶಿಯಂದು ಆಚರಿಸಲಾಗುತ್ತದೆ.


ತುಳಸಿ ಹಬ್ಬದ ಪ್ರಯುಕ್ತ ಇಂದು ಮುಂಜಾನೆಯಿಂದ ಉಪವಾಸ ವ್ರತವನ್ನು ಕೈಗೊಂಡು ರಾತ್ರಿ ಪೂಜೆ ಸಂಪೂರ್ಣ ಮಾಡಿದ್ದು, ತುಳಸಿ ಗಿಡಕ್ಕೆ ಹಾಗೂ ವಿಷ್ಣು ದೇವರ ವಿಗ್ರಹಕ್ಕೆ ನೀರನ್ನು ಅರ್ಪಿಸಿ ಸ್ನಾನ ಮಾಡಿಸಿ ಹೂವಿನ ಅಲಂಕಾರ, ಹಾಗೂ ವಿದ್ಯುತ್ ದೀಪಗಳ

ಅಲಂಕಾರ ಮಾಡಿ, ಬೆಟ್ಟದ ನೆಲ್ಲಿಕಾಯಿ, ಹುಣಸೆಕಾಯಿಯನ್ನಿಟ್ಟು, ಗಿಡಕ್ಕೆ ವಧುವಿನ ರೂಪದಂತೆ ಕೆಂಪು ಸೀರೆ, ಆಭರಣ, ಕೆಂಪು ಕುಂಕುಮದೊಂದಿಗೆ ಅಲಂಕರಿಸಲಾಗಿತ್ತು ಹಾಗೂ ವಿಷ್ಣು ವಿಗ್ರಹಕ್ಕೆ ಬಿಳಿಯ ಧೋತಿ ಅಥವಾ ಮಡಿ ಬಟ್ಟೆಯಿಂದ ಅಲಂಕರಿಸಿ ನಂತರ ದಾರಗಳಿಂದ ನಂತರ ವಿಗ್ರಹ ಹಾಗೂ ತುಳಸಿಯ ಸುತ್ತಲು ಸುತ್ತುತ್ತಿದ್ದ ದೃಶ್ಯ ಕಂಡು ಬಂದಿತು.


ನಂತರ ವಿಶೇಷ ಪ್ರಾರ್ಥನೆ ಮತ್ತು ಹಾಡು ಹೇಳುವುದರ ಮೂಲಕ ಮನೆಯ ಸದಸ್ಯರೆಲ್ಲರೂ ಸೇರಿ ಪೂಜೆ ಸಲ್ಲಿಸಿದರು.
ಹಾಗೇಯೆ ಮುತೈದೆಯರನ್ನು ಕರೆದು ಅವರಿಗೆ ಬಾಳೆಹಣ್ಣು ಹಾಗೂ ಎಲೆ ಅಡಿಕೆ, ಅಕ್ಕಿಯನ್ನು ನೀಡಿ ಒಡಲು ತುಂಬಿಸಿದ್ದು ಕಂಡು ಬಂದಿತ್ತು..

Exit mobile version