Site icon TUNGATARANGA

ರಾಷ್ಟ್ರಮಟ್ಟದ ವಿಚಾರಸಂಕಿರಣಕ್ಕೆ ರಾಮಕೃಷ್ಣ ವಿದ್ಯಾನಿಕೇತನದ ಗೋವರ್ಧನ ಗೌಡ- ಆತ್ಮೀಯ ಅಭಿನಂದನೆ

ಶಿವಮೊಗ್ಗ, ಸೆ.29:

ರಾಜ್ಯಮಟ್ಟದ ವಿಜ್ಞಾನ ವಿಚಾರಗೋಷ್ಠಿಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಷ್ಟ್ರಮಟ್ಟದ ವಿಚಾರ ಸಂಕೀರ್ಣಕ್ಕೆ ಶಿವಮೊಗ್ಗ ಗೋಪಾಲಗೌಡ ಬಡಾವಣೆಯ ಶ್ರೀ ರಾಮಕೃಷ್ಣ ವಿದ್ಯಾನಿಕೇತನದ ಹತ್ತನೇ ತರಗತಿ ವಿದ್ಯಾರ್ಥಿ ಗೋವರ್ಧನ ಗೌಡ ಆಯ್ಕೆಯಾಗಿದ್ದು ಅವರ ಸಾಧನೆಗೆ ಶಾಲಾ ಆಡಳಿತ ಮಂಡಳಿ ಶಿಕ್ಷಕರು ಅಭಿನಂದಿಸಿದ್ದಾರೆ.


ಗೋವರ್ಧನ್ ಗೌಡ ಅವರು ಜಿಲ್ಲಾಮಟ್ಟದ ವಿಜ್ಞಾನ ವಿಚಾರಗೋಷ್ಠಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ಕಳೆದ ಸಪ್ಟೆಂಬರ್ 26ರಂದು ಚಿತ್ರದುರ್ಗದ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ನಡೆದ ರಾಜ್ಯಮಟ್ಟದ ವಿಚಾರಗೋಷ್ಠಿಯಲ್ಲಿ ಪಾಲ್ಗೊಳ್ಳುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ

ಸಿರಿಧಾನ್ಯಗಳು ಅದ್ಭುತ ಆಹಾರವೇ ಅಥವಾ ರೂಡಿಗತ ಪಥ್ಯಾಹಾರವೇ ಎಂಬ ವಿಷಯವನ್ನು ಹಲವು ಉದಾಹರಣೆಗಳ ಸಹಿತ ಪ್ರಸ್ತುತಪಡಿಸಿದ ಗೋವರ್ಧನ್ ಗೌಡ ಅವರು ಶಿವಮೊಗ್ಗದ ಶ್ರೀಕಾಂತ್ ಹಾಗೂ ಸುಮನಾ ದಂಪತಿಗಳ ಪುತ್ರ.
ಗೋವರ್ಧನ್ ಗೌಡ ಅವರ ಸಾಧನೆಗೆ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಶಾಲೆಗೆ ಹಾಗೂ ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದ ಹಿನ್ನೆಲೆಯಲ್ಲಿ ಇಂದು ಅವರನ್ನು ಹಾಗೂ ಅವರ ಪೋಷಕರನ್ನು ಮತ್ತು ಶಾಲಾ ವಿಜ್ಞಾನ ಶಿಕ್ಷಕಿ ಕೆ.ಜಿ. ಮಂಜುಳಾ ಅವರನ್ನು ಶಾಲಾ ಆಡಳಿತ ಮಂಡಳಿ ಪರವಾಗಿ ಕಾರ್ಯದರ್ಶಿ ಶೋಭಾ ವೆಂಕಟರಮಣ ಅವರು ನೇತೃತ್ವದಲ್ಲಿ ಆತ್ಮೀಯವಾಗಿ ಸನ್ಮಾನಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ತೀರ್ಥೇಶ್, ಶಿಕ್ಷಕ ಬಳಗದವರು ಉಪಸ್ಥಿತರಿದ್ದರು.

Exit mobile version