Site icon TUNGATARANGA

28. ರಂದು ಹಿಂದೂ ಮಹಾ ಗಣಪನ ವಿಸರ್ಜನೆ | ಮೆರವಣಿಗೆಗೆ ಸಜ್ಜಾಯ್ತು ಶಿವಮೊಗ್ಗ | ಭರ್ಜರಿ ವೈಭವ ಕೇಸರಿಮಯವಾಯ್ತು ಸಿಹಿಮೊಗೆ

ಶಿವಮೊಗ್ಗ, ಸೆ.೨೬:
ಬರುವ ಸೆ.೨೮ರಂದು ಶಿವಮೊಗ್ಗ ಹಿಂದೂಮಹಾಸಭಾ ಗಣಪತಿ ಮೆರವಣಿಗೆ ಹಾಗೂ ವಿಸರ್ಜನೆ ನಡೆಯಲಿದ್ದು, ಈಗಾಗಲೇ ಶಿವಮೊಗ್ಗ ಕೇಸರಿಯಿಂದ ಕಂಗೊಳಿಸುವಂತಹ ವಾತಾವರಣವನ್ನು ನಿರ್ಮಿಸಲಾಗುತ್ತಿದೆ.


ಶಿವಮೊಗ್ಗ ಕೋಟೆ ರಸ್ತೆಯ ಶ್ರೀ ಭೀಮೇಶ್ವರ ದೇವಾಲಯದಿಂದ ೨೮ರ ಗುರುವಾರ ಬೆಳಿಗ್ಗೆ ೧೦ಕ್ಕೆ ಹೊರಡಲಿರುವ ಮೆರವಣಿಗೆಯು ಸಂಜೆಯ ಹೊತ್ತಿಗೆ ಶಿವಪ್ಪನಾಯಕ ವೃತ್ತವನ್ನು ತಲುಪಲಿದ್ದು, ಮದ್ಯರಾತ್ರಿ ತುಂಗೆಯಲ್ಲಿ ಗಣಪ ವಿಸರ್ಜನೆ ಯಾಗಲಿದ್ದಾನೆ

. ಅದಕ್ಕೆ ಪೂರಕ ವ್ಯವಸ್ಥೆ ಯನ್ನು ಹಿಂದೂ ಮಹಾಸಭಾ ಗಣಪತಿ ಸಮಿತಿ ಕೈಗೊಳ್ಳುತ್ತಿದ್ದು, ನಗರದಲ್ಲಿ ಬಹಳಷ್ಟು ಜನ ಸ್ವಯಂ ಮುಂದೆ ನಿಂತು ಅಲಂಕಾರ ಭೂಷಿತ ರಸ್ತೆಗಳನ್ನು ನಿರ್ಮಿ ಸಲು ಹೊರಟಿರುವುದು ವಿಶೇಷ.


ರಾಮಣ್ಣಶ್ರೇಷ್ಠಿ ಪಾರ್ಕ್‌ನಿಂದ ಶಿವಪ್ಪ ನಾಯಕ ವೃತ್ತದವರೆಗೆ ವೈಭವದ ಅಲಂಕಾರ ಮತ್ತು ಕೇಸರಿ ಬಾವುಟಗಳ ಅಲಂಕಾರ ನಡೆಯುತ್ತಿದೆ. ಶಿವಮೊಗ್ಗ ನಗರದ ಕೋಟೆ ರಸ್ತೆ, ರಾಮಣ್ಣಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್‌ನ ಆರಂಭಿಕ ಸ್ಥಳ, ಅಮೀರ್ ಅಹಮ್ಮದ್ ವೃತ್ತ, ನೆಹರೂ ರಸ್ತೆ, ಗೋಪಿ ಸರ್ಕಲ್, ಜೈಲ್ ಸರ್ಕಲ್ ಹಾಗೂ ಕುವೆಂಪು ರಸ್ತೆ ಮಾರ್ಗವಾಗಿ ಸಾಗಲಿರುವ ಗಣಪನನ್ನು ಸ್ವಾಗತಿಸಲು ಪ್ರಮುಖ ಸ್ಥಳಗಳಲ್ಲಿ ದ್ವಾರ ಬಾಗಿಲುಗಳನ್ನು ನಿರ್ಮಿಸಲಾಗಿದೆ.


ರಾಮಣ್ಣಶ್ರೇಷ್ಠಿ ಪಾರ್ಕ್ ರಸ್ತೆ ಹಾಗೂ ಗಾಂದಿಬಜಾರ್‌ನಲ್ಲಿ ಗಣಪನೊಂದಿಗೆ ಆಗಮಿಸಲಿರುವ ಭಕ್ತರಿಗೆ ಪಾನಕ, ನೀರು, ಮಜ್ಜಿಗೆ, ಕೋಸಂಬರಿ, ತಿಂಡಿ ವ್ಯವಸ್ಥೆ ಯನ್ನು ಭಕ್ತಾಧಿಗಳು ಕಲ್ಪಿಸಲಿದ್ದಾರೆ. ಜೈಲ್ ಸರ್ಕಲ್‌ನಲ್ಲಿ ಸೇರಲಿರುವ ಸಹಸ್ರಾರು ಭಕ್ತವೃಂದಕ್ಕೆ ತಿಂಡಿ ವ್ಯವಸ್ಥೆಯನ್ನು ಮಾಡಲಿದ್ದಾರೆ.
ಗಣಪ ವಿಸರ್ಜನ ಪೂರ್ವ ಮೆರವ ಣಿಗೆ ಅತ್ಯಂತ ಶಾಂತಿ ಹಾಗೂ ಸೌಹಾರ್ದ ತೆಯಿಂದ ನಡೆಯಬೇಕೆಂದು ಜಿಲ್ಲಾಡಳಿತ, ಜಿಲ್ಲಾ ರಕ್ಷಣಾ ಇಲಾಖೆ ಈಗಾಗಲೇ ಸೂಕ್ತ ವ್ಯವಸ್ಥೆಗಳನ್ನು ಮಾಡಿದ್ದು, ಜಿಲ್ಲಾ ರಕ್ಷಣಾಧಿ ಕಾರಿಗಳ ತಂಡ ನಗರದ ಪ್ರಮುಖರ ಹಾಗೂ ಎಲ್ಲಾ ಧರ್ಮಗಳ ನಾಯಕರ ಶಾಂತಿ ಸಬೆಯನ್ನು ನಡೆಸಿದ್ದಾರೆ.


ಹಿಂದೂ ಮಹಾಸಭಾ ಹಾಗೂ ಸೆ.೩೦ರಂದು ಓಂ ಗಣಪತಿ ಮತ್ತು ಅಕ್ಟೋ ಬರ್ ೦೧ರಂದು ನಡೆಯಲಿರುವ ಈದ್ ಮಿಲಾದ್ ಮೆರವಣಿಗೆ ನಿಮಿತ್ತ ಈಗಾಗಲೇ ಸಾಕಷ್ಟು ಹಂತದ ಶಾಂತಿ ಸಭೆಗಳು, ಪೊಲೀಸರ ಪಥ ಸಂಚಲನ ಹಾಗೂ ಆಯಾ ಭಾಗದ ರೌಡಿಗಳ ಮನೆಗೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಡಿವೈಎಸ್‌ಪಿ ಬಾಲರಾಜ್ ನೇತೃತ್ವದ ತಂಡ ಭೇಟಿ ನೀಡಿ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ. ಜಿಲ್ಲಾ ರಕ್ಷಣಾಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಹಲವರನ್ನು ಈಗಾಗಲೇ ಬಂಧನಕ್ಕೊಳಪಡಿಸಿದೆ.


ಖಾಕಿ ಕಣ್ಣುಗಳ ನಡುವೆ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂಬ ಉದ್ದೇಶದಿಂದ ಅಪಾರ ಸಂಖ್ಯೆಯ ಸಿಸಿ ಕ್ಯಾಮರಾ, ಡ್ರೋನ್ ಬಳಸಲಾಗುತ್ತಿದ್ದು, ಇದರ ಜೊತೆಗೆ ಪೊಲೀಸ್ ಇಲಾಖೆಯ ಹಲವರು ಮಾಮೂಲಿ ವೇಷದಲ್ಲಿ ಜನರ ಜೊತೆಗೆ ಪಾಲ್ಗೊಳ್ಳಲಿದ್ದಾರೆ.


ಎಲ್ಲರೂ ಸಢಗರ ಸಂಭ್ರಮದಿಂದ ಗಣೇಶನ ಮೆರವಣಿಗೆಯಲ್ಲಿ ಪಾಲ್ಗೊಂಡು ವಿಸರ್ಜನೆಯನ್ನು ಭಕ್ತಿ ಪೂರ್ವಕವಾಗಿ ಮಾಡೋಣ ಎಂದು ಹಿಂದೂ ಮಹಾ ಸಭಾ ಸಮಿತಿ, ಶಾಸಕ ಚೆನ್ನಬಸಪ್ಪ, ಜಿಲ್ಲಾಧಿ ಕಾರಿ ಡಾ.ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರುಗಳು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಸೂಚನೆಯಂತೆ ವಿನಂತಿಸಿದ್ದಾರೆ.

Exit mobile version