Site icon TUNGATARANGA

ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ‘ಹುಚ್ಚುನಾಯಿ ರೋಗದ ಲಸಿಕೆ’ ಕುರಿತು ಕಾರ್ಯಾಗಾರ


ಶಿವಮೊಗ್ಗ ಸೆಪ್ಟೆಂಬರ್ 26,
        ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಜಿಲ್ಲಾ ಪಶು ಆಸ್ಪತ್ರೆ(ಪಾಲಿ ಕ್ಲಿನಿಕ್) ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ‘ಹುಚ್ಚುನಾಯಿ ರೋಗದ ಪ್ರಸ್ತುತ ವಿದ್ಯಮಾನಗಳ ಹಾಗೂ ಲಸಿಕೆ’ ಕುರಿತು ವಿಚಾರ ಸಂಕಿರಣವನ್ನು


ದಿ: 28-09-2023 ರಂದು ಜಿಲ್ಲಾ ಪಶು ಆಸ್ಪತ್ರೆ, ಕುವೆಂಪು ನಗರ ಶಿವಮೊಗ್ಗ ಇಲ್ಲಿ ಏರ್ಪಡಿಸಲಾಗಿದೆ.


         ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ಕಾರ್ಯಕ್ರಮವನ್ನು ಉದ್ಘಾಟಿಸುವರು. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ನಿರ್ದೇಶಕ ಡಾ.ಮಂಜುನಾಥ್ ಎಸ್

ಪಾಳೇಗಾರ್ ಇಲಾಖಾ ಮಾಹಿತಿ ಪತ್ರ ಬಿಡುಗಡೆಗೊಳಿಸುವರು. ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ಬಸವೇಶ ಹೂಗಾರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಪಶುಪಾಲನಾ ಇಲಾಖೆಯ

ಉಪನಿರ್ದೇಶಕ ಡಾ.ಶಿವಯೋಗಿ ಬಿ ಯಲಿ, ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಗಣೇಶ ಉಡುಪ, ಶಿಮುಲ್ ವ್ಯವಸ್ಥಾಪಕ ನಿರ್ದೇಶಕ ಶೇಖರ್ ಎಸ್.ಜಿ ಪಾಲ್ಗೊಳ್ಳುವರು. ಬೆಂಗಳೂರಿನ

ಹಿರಿಯ ವಿಜ್ಞಾನಿ ಡಾ.ನಿಡಗಟ್ಟಾ ಗಂಗಾಧರ ಹಾಗೂ ಶಿಕಾರಿಪುರ ಹೊಸೂರಿನ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಸುನಿಲ್ ಕುಮಾರ್ ಕೆ.ಎಂ ಉಪನ್ಯಾಸಕರಾಗಿ ಪಾಲ್ಗೊಳ್ಳುವರು.

Exit mobile version