ಶಿವಮೊಗ್ಗ ಸೆಪ್ಟೆಂಬರ್ 25
ಶಿವಮೊಗ್ಗ ಜಿಲ್ಲೆ ತೋಟಗಾರಿಕೆ ಇಲಾಖೆ ವತಿಯಿಂದ 2023-24ನೇ ಸಾಲಿನ ಜಿಲ್ಲಾ ವಲಯದ ಜೇನು ಸಾಕಾಣೆ ಕಾರ್ಯಕ್ರಮದಡಿ ಜೇನುಕೃಷಿ ತರಬೇತಿ/ಜೇನುಪಟ್ಟಿಗೆ, ಕುಟುಂಬ ಮತ್ತು ಸ್ಟ್ಯಾಂಡ್ಗಳಿಗೆ ಸಹಾಯಧನ ನೀಡಲು ಸರ್ಕಾರದ ಸುತ್ತೋಲೆಯನುಸಾರ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ರೈತರು/ಸಾರ್ವಜನಿಕರು ಈ ಕೆಳಕಂಡ ಶಿವಮೊಗ್ಗ ಜಿಲ್ಲೆಯ ಎನ್ಐಸಿ ವೆಬ್ಸೈಟ್ ಬಳಸಿ, ಅಗತ್ಯ ದಾಖಲಾತಿಗಳೊಂದಿಗೆ ಅ.10 ರೊಳಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ ಅಥವಾ ನೇರವಾಗಿ ತಮ್ಮ ತಾಲ್ಲೂಕು ತೋಟಗಾರಿಕೆ ಇಲಾಖೆ ಕಚೇರಿಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ 08182-279415/9900046087, ಭದ್ರಾವತಿ 08282-295029/9448238921, ಶಿಕಾರಿಪುರ 08187-223544/9663634388, ಸೊರಬ
08184-295112/9902170900, ಸಾಗರ 08183-295124/7892782514, ಹೊಸನಗರ 08185-295364/9591695327, ತೀರ್ಥಹಳ್ಳಿ 08181-228151/6360923705 ನ್ನು
ಮತ್ತು ತಾಲ್ಲೂಕು ತೋಟಗಾರಿಕೆ ಇಲಾಖಾ ಕಚೇರಿ ಅಥವಾ ಅಧಿಕಾರಿಗಳನ್ನು ಸಂಪರ್ಕಿಸಬಹುದೆಂದು ಶಿವಮೊಗ್ಗ ಜಿಲ್ಲಾ ಪಂಚಾಯತ್ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.