ಶಿವಮೊಗ್ಗ, ಸೆ.25:
ಶಿವಮೊಗ್ಗ ಆಟೋ ಕಾಂಪ್ಲೆಕ್ಸ್ ನಲ್ಲಿ ಮೆಸ್ಕಾಂ ಫವರ್ ಮ್ಯಾನ್ ಹಾಲ ಸ್ವಾಮಿ ಸಾವುಕಂಡ ಘಟನೆ ಮರೆಯುವ ಮುನ್ನವೇ ಮತ್ತೊಂದು ದುರಂತದ ಘಟನೆ ನಡೆದಿದ್ದು ಓರ್ವ ಪವರ್ ಮ್ಯಾನ್ ಸ್ಥಳದಲ್ಲೇ ಸಾವುಕಂಡು ಮತ್ತಿಬ್ಬರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ದುರಂತ ನಿನ್ನೆ ನಡೆದಿದೆ.
ಭದ್ರಾವತಿ ತಾಲೂಕಿನ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ವಿದ್ಯುತ್ ಕಂಬಗಳನ್ನ ರಿಪೇರಿ ಮಾಡುತ್ತಿದ್ದ ವೇಳೆ ಮೂವರು ಪವರ್ ಮ್ಯಾನ್ ಗಳಿಗೆ ಶಾಕ್ ಹೊಡೆದಿದ್ದು ಒಬ್ಬರು ಕಂಬದಲ್ಲೇ ಜೀವ ಬಿಟ್ಟಿದ್ದಾರೆ. ಮತ್ತಿಬ್ಬರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಅವರು ಜೀವಾಪಾಯದಿಂದ ಪಾರಾಗಿದ್ದಾರೆ.
11 ಕೆವಿ ಕಂಬಹತ್ತಿ ರಿಪೇರಿ ಮಾಡುತ್ತಿದ್ದ ಕಿರಣ್ ಮತ್ತು ಸುನೀಲ್, ಮತ್ತೊಬ್ಬರಿಗೆ ವಿದ್ಯುತ್ ಶಾಕ್ ಹೊಡೆದಿದೆ. ಕಿರಣ್ ಕಂಬದಲ್ಲೇ ಅಸು ನೀಗಿದ್ದಾರೆ. ಗಾಯಗೊಂಡವರನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಏಪ್ರಿಲ್ ತಿಂಗಳಲ್ಲಿ ಫವರ್ ಮ್ಯಾನ್ ಹಾಲಸ್ವಾಮಿ ಎಂಬುವರು ವಿನೋಬ ನಗರ ಹೆಚ್ ಇಟಿ ಲೈನ್ ರಿಪೇರಿ ಮಾಡುವಾಗ ಅಸು ನೀಗಿದ್ದರು.
ಆಗ ಪವರ್ ಮ್ಯಾನ್ ಗಳಿಗೆ ಸುರಕ್ಷತೆ ಇಲ್ಲವೆಂಬ ಕೂಗು ಕೇಳಿ ಬಂದಿತ್ತು. ಇವತ್ತೂ ಅದೇ ಕೂಗು ಕೇಳಿ ಬರುತ್ತಿದೆ.
ಅಂದರೆ ಯಾವ ಸುರಕ್ಷತೆಗಳು ಕಂಡು ಬರುತ್ತಿಲ್ಲ. ಅಂದು ಹಾಲಸ್ವಾಮಿ ಸಾವನ್ಬಪ್ಪಿದ್ದಕ್ಕೆ ಪವರ್ ಮ್ಯಾನ್ ಗಳು ಪ್ರತಿಭಟನೆ ಮಾಡಲು ಮುಂದಾಗಿದ್ದರು. ಆಗ ಮೆಸ್ಕಾಂ ಅಧಿಕಾರಿ ಬಂದಾಗ ಸುರಕ್ಷತೆ ಧ್ವನಿ ಎತ್ತಿದ್ದರು. ಇಂದೂ ಸಹ ಅದೇ ಧ್ವನಿ ಎತ್ತಲಾಗಿದೆ ಅಷ್ಟೆ. ತಪ್ಪು ಮಾಡಿದವರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಬೇಕು.