Site icon TUNGATARANGA

ಸೆ. 26 ರಿಂದ ಆಕಾಶವಾಣಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಉಪನ್ಯಾಸ ಮಾಲಿಕೆ ಪ್ರಸಾರ

*
ಶಿವಮೊಗ್ಗ ಸೆಪ್ಟೆಂಬರ್ 22,
       ಆಕಾಶವಾಣಿ ಭದ್ರಾವತಿ ಹಾಗೂ ಕುವೆಂಪು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಸೆಪ್ಟೆಂಬರ್ 26 ರಿಂದ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆ ಕುರಿತ ವಿಶೇಷ 15 ಕಂತುಗಳ ಉಪನ್ಯಾಸ ಮಾಲಿಕೆ ಪ್ರಸಾರವಾಗಲಿದೆ.


      ಪ್ರತಿ ಮಂಗಳವಾರ ಬೆಳಿಗ್ಗೆ 7.15 ರಿಂದ 7.30 ರವರೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆಯನ್ನು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ವಿಷಯತಜ್ಞರು, ಉಪನ್ಯಾಸ ಮಾಲಿಕೆಯಲ್ಲಿ ತಿಳಿಸಲಿದ್ದಾರೆ. ಪ್ರತಿ ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೆಯನ್ನು ಕೇಳಲಾಗುವುದು. ಸರಿ ಉತ್ತರ ನೀಡಿದವರಿಗೆ ಬಹುಮಾನ ನೀಡಿ ಪುರಸ್ಕರಿಸಲಾಗುವುದು. ಸರಿ ಉತ್ತರವನ್ನು ಆಕಾಶವಾಣಿ ಭದ್ರಾವತಿ ಕೇಂದ್ರ ಅಥವಾ ನಿಲಯ ವಾಟ್ಸಾಪ್ ಸಂಖ್ಯೆ 9481572600 ಗೆ ಅದೇ ದಿನ ಕಳುಹಿಸಲಾಗುವುದು.


      ಈ ಕಾರ್ಯಕ್ರಮ ಭದ್ರಾವತಿ ಆಕಾಶವಾಣಿ ಎಫ್‍ಎಂ103.5 ಹಾಗೂ MW675khz ನಲ್ಲಿ ಹಾಗೂ ವಿಶ್ವದಾದ್ಯಂತ ಪ್ರಸಾರಭಾರತಿ ‘newsonair’ ಆ್ಯಪ್‍ನಲ್ಲಿ ಭದ್ರಾವತಿ ಕೇಂದ್ರದ ಮೂಲಕ ಪ್ರಸಾರ ಸಮಯದಲ್ಲಿ ಕೇಳಬಹುದು ಹಾಗೂ ಪ್ರಸಾರ ನಂತರ ಆಕಾಶವಾಣಿ ಭದ್ರಾವತಿ ಯೂಟ್ಯೂಬ್ ಚಾನಲ್‍ನಲ್ಲಿ ಕೇಳಬಹುದು.

ಕೇಳುಗರು ಈ ಕುರಿತು ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ವಾಟ್ಸಾಪ್ ಸಂಖ್ಯೆ 9481572600 ಮುಖಾಂತರ ಹಂಚಿಕೊಳ್ಳಬಹುದು ಎಂದು ಭದ್ರಾವತಿ ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಎಸ್.ಆರ್.ಭಟ್ ತಿಳಿಸಿದ್ದಾರೆ.

Exit mobile version