Site icon TUNGATARANGA

ಪದವಿ ಶಿಕ್ಷಣ ಸ್ಪರ್ಧಾ ಜಗತ್ತಿನ ‌ಅಡಿಪಾಯ ಎನ್ಇಎಸ್ ಓರಿಯಂಟೇಷನ್ ಕಾರ್ಯಕ್ರಮದಲ್ಲಿ : ಪ್ರಾಧ್ಯಾಪಕಡಾ.ಗಿರಿಧರ್  ಕೆ.ವಿ ಅಭಿಪ್ರಾಯ

ಶಿವಮೊಗ್ಗ : ಪದವಿ ಶಿಕ್ಷಣವು ವಿದ್ಯಾರ್ಥಿಯನ್ನು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೇಗೆ ಸಿದ್ಧಗೊಳ್ಳಬೇಕೆಂಬುದರ ಅಡಿಪಾಯವಾಗಿದೆ ಎಂದು ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಗಿರಿಧರ್  ಕೆ.ವಿ ಅಭಿಪ್ರಾಯಪಟ್ಟರು

ನಗರದ ಅಂಬೇಡ್ಕರ್ ಭವನದಲ್ಲಿ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ವತಿಯಿಂದ ಪ್ರಥಮ ವರ್ಷದ ಬಿಕಾಂ ಬಿಬಿಎ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಓರಿಯಂಟೇಷನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪದವಿಯ ಮೂರು ವರ್ಷಗಳ ಅಧ್ಯಯನ ಅವಧಿ ಜ್ಞಾನದ ಜೊತೆಗೆ ಕೌಶಲ್ಯತೆಯನ್ನು ಒಳಗೊಂಡಿದೆ. ಇಂತಹ ಅಮೂಲ್ಯ ಸಂದರ್ಭವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ. ಪದವಿ ನಂತರದ ಆಯ್ಕೆ ಪ್ರಕ್ರಿಯೆಗಳಿಗೆ ಇಂದಿನಿಂದಲೇ ಸಿದ್ದತೆ ಇರಲಿ ಎಂದು ಹೇಳಿದರು.

ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಪೋಷಕರ ಹಾಗೂ ಶಿಕ್ಷಕರ ಪಾತ್ರ ಮಹತ್ವವಾಗಿದ್ದು, ಅತ್ಯಂತ ಸಂಯಮದಿಂದ ಮಕ್ಕಳಿಗೆ ಯಾವುದು ಸರಿ ತಪ್ಪು ಎಂಬುದರ ಅರಿವನ್ನು ಮೂಡಿಸುವುದರೊಂದಿಗೆ ಹೇಗೆ ನಿರ್ವಹಿಸಬೇಕೆಂಬ ಜವಾಬ್ದಾರಿ ಮೂಡಿಸಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ‌ ಪ್ರೊ ಶಿವಪ್ರಸಾದ್.ಬಿ.ಎಸ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ , ನಿರ್ದೇಶಕರಾದ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಅಜೀವ ಸದಸ್ಯರಾದ ಡಾ.ರಕ್ಷಾರಾವ್ ಉಪಸ್ಥಿತರಿದ್ದರು.

Exit mobile version