Site icon TUNGATARANGA

ಮಾತನಾಡುವುದೇ ಸಾಧನೆಯಾಗಬಾರದು: ಬಿ.ವೈ. ರಾಘವೇಂದ್ರ

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿಶೇಷ ಅನು ದಾನದಲ್ಲಿ ಅನುಷ್ಠಾನಗೊಳ್ಳುತ್ತಿರುವ ೧೨೫ ಕೋಟಿ ಮೊತ್ತದ ಹಲವು ಅಬಿ ವೃದ್ಧಿ ಕಾಮಗಾರಿಗಳಿಗೆ ಸಂಸದ ಬಿ.ವೈ. ರಾಘವೇಂದ್ರ ಗುದ್ದಲಿ ಪೂಜೆ ನೆರ ವೇರಿಸಿ ಚಾಲನೆ

125 ಕೋಟಿ ಮೊತ್ತದ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ತೀರ್ಥಹಳ್ಳಿ: ಮಾತನಾಡುವುದೇ ಸಾಧನೆ ಆಗಬಾರದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿಶೇಷ ಅನು ದಾನದಲ್ಲಿ ಅನುಷ್ಠಾನಗೊಳ್ಳುತ್ತಿರುವ 125 ಕೋಟಿ ಮೊತ್ತದ ಹಲವು ಅಬಿ ವೃದ್ಧಿ ಕಾಮಗಾರಿಗಳಿಗೆ ಸಂಸದ ಬಿ.ವೈ. ರಾಘವೇಂದ್ರ ಗುದ್ದಲಿ ಪೂಜೆ ನೆರ ವೇರಿಸಿ ಚಾಲನೆ ಮಾತನಾಡಿದರು.
ದೇಶದಲ್ಲಿ ಶಿವಮೊಗ್ಗ ಕ್ಷೇತ್ರ ಮಾದರಿ ರೀತಿ ಆಗುವಲ್ಲಿ  ಮತ್ತು ತೀರ್ಥಹಳ್ಳಿ ತಾಲೂಕಿನ  ಅಭಿವೃದ್ಧಿ ಕಾಮಗಾರಿಗಳು ಮಾಡುವ ನಿಟ್ಟಿನಲ್ಲಿ ಜ್ಞಾನೇಂದ್ರರವರ ಶ್ರಮ ಮತ್ತು ಯಡಿಯೂರಪ್ಪ ರವರ ಸರ್ಕಾರ ಸಹ ಕಾರಿಯಾಗಿದೆ. ಕೇಂದ್ರದ  ಮೋದಿಜೀ ಸರ್ಕಾರ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿ ಸನ್ಮಾನ್ ಯೋಜನೆ ಅಡಿಯಲ್ಲಿ  ವರ್ಷಕ್ಕೆ ರೂ.೧೦,೦೦೦ ಗಳನ್ನು ನೇರವಾಗಿ ರೈತರ  ಖಾತೆ ಗಳಿಗೆ ಜಮಾ ಮಾಡುವ ನಿಟ್ಟಿನಲ್ಲಿ  ಸಹಕರಿಯಾಗಲಿದೆ ಎಂದರು.
ಜಿಲ್ಲೆಗೆ ರೈಲ್ವೆ ಕೋಚಿಂಗ್ ಸೆಂಟರ್ ಮಂಜೂರು ಆಗಿದ್ದು, ಇದರ ಕಾರ್ಯ ಸದ್ಯದಲ್ಲೇ ಆರಂಭ ಗೊಳ್ಳಲಿದ್ದು, ಇದರಿಂದ ಸಾವಿರರಾರು ಯುವಕರಿಗೆ ಉದ್ಯೋಗ ಸೃಷ್ಟಿಯಾಗ ಲಿದೆ. ಜೊತೆಗೆ ವಿಮಾನ ನಿಲ್ದಾಣ ಆರಂಭಗೊಳ್ಳಲಿದ್ದು ಅನೇಕ ಇಂಡಸ್ಟ್ರಿ ಗಳು ಮುಂದಿನ ದಿನಗಳಲ್ಲಿ ಬಂಡ ವಾಳ ಹೂಡಲು ಆಗಮಿಸಲಿದ್ದಾರೆ, ಇದರಿಂದ ಕ್ಷೇತ್ರದ ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಬೇರೆ ರಾಜಕಾರಣಿಗಳ ಮಕ್ಕಳಂತೆ  ಮೋಜು-ಮಸ್ತಿ ಮಾಡದೆ ತಂದೆಗೆ ತಕ್ಕ ಮಗನಂತೆ  ಸದಾ ರೈತರ -ಜನರ  ಸಮಸ್ಯೆಗಳಿಗೆ ಸ್ಪಂದಿಸುತ್ತಾ ಉತ್ಸಾಹದಿಂದ ಕಾರ್ಯ ಪ್ರವೃತ್ತರಾಗಿದ್ದಾರೆ. ಇನ್ನು ಉಳಿದ ಎರಡೂವರೆ ವರ್ಷದ ಅವಧಿಯಲ್ಲಿ ಇನ್ನು ಹಲವು ಅಭಿವೃದ್ಧಿ ಕಾರ್ಯಗಳನ್ನು ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರಿಗೆ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಆಯಾ ಭಾಗದ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸದಸ್ಯರು ಗಳು, ಬಿಜೆಪಿ ಪ್ರಮುಖರು, ಕಾರ್ಯ ಕರ್ತರು ಸೇರಿದಂತೆ ಮತ್ತಿತರರು ಹಾಜರಿದ್ದರು.

Exit mobile version