Site icon TUNGATARANGA

ಅರಸು ಪ್ರತಿರೂಪವೇ ಕಾಗೋಡು ತಿಮ್ಮಪ್ಪ, ಕಾಗೋಡು ತಿಮ್ಮಪ್ಪನವರಿಂದ ಸಾಮಾಜಿಕ ಕ್ರಾಂತಿ: ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ. ಬಿ.ಎಲ್. ಶಂಕರ್



ಶಿವಮೊಗ್ಗ:
ಕಾಗೋಡು ತಿಮ್ಮಪ್ಪ ಅವರು ಈ ನಾಡು ಕಂಡ ಅಪರೂಪದ ವ್ಯಕ್ತಿ. ಶೋಷಿತರ ಪರವಾಗಿ ಹೋರಾಡಿದ ವರು. ಗೇಣಿದಾರರ ಪರವಾಗಿ ಬಗರ್ ಹುಕುಂ ರೈತರ ಪರವಾಗಿ, ಮುಳುಗಡೆ ಸಂತ್ರಸ್ತರ ಪರವಾಗಿ ಹೋರಾಟ ಮಾಡಿದ ಅವರು ಒಂದು ಸಾಮಾಜಿಕ ಕ್ರಾಂತಿ ಯನ್ನೇ ಮಾಡಿದವರು. ದೇವರಾಜ ಅರಸುರವರ ಪ್ರತಿರೂಪವೇ ಆಗಿದ್ದ ಅವರಿಗೆ ದೇವರಾಜ ಅರಸು ಪ್ರಶಸ್ತಿ ಬಂದಿದ್ದು ಪ್ರಶಸ್ತಿಗೆ ಗೌರವ ತಂದುಕೊ ಟ್ಟಂತಾಗಿದೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ. ಬಿ.ಎಲ್. ಶಂಕರ್ ಹೇಳಿದರು.


ಅವರು ಇಂದು ಕಾಗೋಡು ತಿಮ್ಮಪ್ಪ ಅಭಿನಂದನಾ ಸಮಿತಿ ಕುವೆಂಪು ರಂಗ ಮಂದಿರದಲ್ಲಿ ಆಯೋಜಿಸಿದ್ದ ಅಭಿನಂ ದನಾ ಸಮರ್ಪಣಾ ಸಮಾರಂಭದಲ್ಲಿ ಮಾತನಾಡುತ್ತಾ, ಕಾಗೋಡು ತಿಮ್ಮಪ್ಪ ರಾಜಕೀಯ ಜಂಗಮ. ಪಕ್ಷಭೇದ ಮರೆತ ಎಲ್ಲಾ ರಾಜಕಾರಣಿಗಳ ಮಿತ್ರ ಎಂದರು.


ಭಾರತದ ರಾಜಕಾರಣದಲ್ಲಿ ಸೈದ್ಧಾಂ ತಿಕ ತಿರುವು ಕೊಟ್ಟವರು ಸಮಾಜವಾದಿಗಳು. ೭೦ರ ದಶಕದಲ್ಲಿ ಈ ಸೈದ್ಧಾಂತಿಕ ರಾಜಕಾರಣ ಕಾಲಿಟ್ಟಿತು. ಅನೇಕ ಸವಾಲುಗಳ ನಡುವೆಯೂ ಭೂ ಸುಧಾರಣೆಯಂತಹ ಕಾಯಿದೆ ಜಾರಿಗೆ ಬಂದಿದ್ದು, ದೇವರಾಜ ಅರಸು ಇದಕ್ಕೆ ಪ್ರಮುಖ ಕಾರಣ. ಅದೇ ದಾರಿಯಲ್ಲಿ ಕಾಗೋಡು ತಿಮ್ಮಪ್ಪನವರು ಕೂಡ ಮುಂ ದುವರಿದವರು. ಹಾಗಾಗಿ ಕಾಗೋಡು ಕರ್ನಾಟಕದ ರಾಜಕಾರಣದಲ್ಲಿ ಎಂದೂ ನೆನಪಿನಲ್ಲಿ ಉಳಿಯುವ ಶ್ರೇಷ್ಠ ವ್ಯಕ್ತಿ ಎಂದರು.


ಕಾಗೋಡು ತಿಮ್ಮಪ್ಪನವರದ್ದು ವಿಶೇಷ ವ್ಯಕ್ತಿತ್ವ. ಎಲ್ಲಾ ಪಂಥದವರು ಮೆಚ್ಚುವ ವ್ಯಕ್ತಿ. ಕಾಗೋಡು ಎಂಬ ಪುಟ್ಟ ಹಳ್ಳಿಯ ಮೂಲಕ ಕಾಗೋಡು ಹೆಸರಿನ ಜೊತೆಗೆಯೇ ತಮ್ಮ ಹೆಸರನ್ನು ರಾಷ್ಟ್ರಕ್ಕೆ ಪರಿಚಯ ಮಾಡಿಕೊಟ್ಟ ಅಪರೂಪದ ರಾಜಕಾರಣಿ. ಕಾಗೋಡು ಚಳುವಳಿಯ ರೂವಾರಿಯೂ ಹೌದು. ರಾಜಕಾರಣ ಎಂಬುದು ಸ್ಥಾವರವಲ್ಲ. ಅದು ಜಂಗಮ ಎಂದು ತೋರಿಸಿಕೊಟ್ಟವರು. ಅವರ ನಿರಂತರ ಕ್ರಿಯಾಶೀಲತೆ ಇದಕ್ಕೆ ತಕ್ಕ ಉದಾಹರಣೆ ಎಂದರು.
ಪತ್ರಕರ್ತ ದಿನೇಶ್ ಅಮೀನಮಟ್ಟು ಮಾತನಾಡಿ, ಮೀಸಲಾತಿ ಮತ್ತು ಭೂ ಸುಧಾರಣೆಯಂತಹ ಕಾಯಿದೆಗಳು ಅರ್ಥ ಕಳೆದುಕೊಳ್ಳುತ್ತಿರುವ ಇಂತಹ ಹೊತ್ತಿನಲ್ಲಿ ಕಾಗೋಡು ತಿಮ್ಮಪ್ಪನವರು ಈ ಕಾಯಿದೆಗಳ ಜಾರಿಗೆ ಪ್ರಯತ್ನಿಸಿದವರು. ಭೂಸುಧಾರಣೆ ಜೊತೆ ಗೆಯೇ ವಾಸಿಸುವವನೇ ಮನೆಯೊಡೆಯ ಎಂಬ ಕಾಯಿದೆ ಜಾರಿಗೆ ತರುವಲ್ಲಿ ಇವರ ಪಾತ್ರ ಸಾಕಷ್ಟಿದೆ. ಸಾಮಾಜಿಕ ಚಳುವ ಳಿಯ ಅಸ್ತ್ರಗಳು ಇಂದು ಬದಲಾಗುತ್ತಿದ್ದು, ರಾಜಕಾರಣವೇ ವಿಚಿತ್ರ ಹಾದಿಯಲ್ಲಿ ಸಾಗುತ್ತಿರುವಾಗ ಕಾಗೋಡು ತಿಮ್ಮಪ್ಪನಂ ತವರು ಸದಾ ನೆನಪಿನಲ್ಲಿ ಉಳಿಯುತ್ತಾರೆ ಎಂದರು

ಕಾಗೋಡು ತಿಮ್ಮಪ್ಪನಂತವರ ಆದರ್ಶ ನಮಗೆಲ್ಲಾ ಮಾದರಿ. ಅವರು ಪಕ್ಷಾತೀತ ವ್ಯಕ್ತಿ. ಅವರು ನನಗೆ ನೀಡಿದ ಪ್ರೀತಿಯನ್ನು ಎಂದಿಗೂ ಮರೆಯಲಾರೆ. ಅವರ ಸಿಟ್ಟು ಕೂಡ ಸಾತ್ವಿಕವಾದುದು. ಅವರ ಇಡೀ ಬದುಕು ಚಳುವಳಿಯಿಂದ ಪಕ್ವವಾಗಿದೆ. ಅವರ ಅಭಿಲಾಷೆಯಂತೆ ಶರಾವತಿ ಸಂತ್ರಸ್ತರ ಪರವಾಗಿ ಕೆಲಸ ಮಾಡುವೆ.ಅವರು ನನ್ನನ್ನು ಸೇರಿದಂತೆ ಎಲ್ಲಾ ಹೊಸ ರಾಜಕಾರಣೀಗಳಿಗೆ ಚೈತನ್ಯ ನೀಡಿದ್ದಾರೆ.
-ಬಿ.ವೈ. ರಾಘವೇಂದ್ರ , ಸಂಸದರು.


ತಿಮ್ಮಪ್ಪನವರಿಗೆ ನಾವು ಸನ್ಮಾನ ಮಾಡಿರಬಹುದು. ಆ ಸಂಭ್ರಮದ ಹಿಂದೆ ನೋವುಕೂಡ ಅವರಿಗಿದೆ. ಸಾಮಾಜಿಕ ಅಸ್ತ್ರದ ಅವನತಿಯೂ ಕೂಡ ಸಾಗುತ್ತಿದೆ. ಭೂ ಸುಧಾರಣೆಯಂತಹ ವಿಷಯ ಇಂದು ಬೇರೆ ಅರ್ಥ ಕಲ್ಪಿಸುತ್ತಿದೆ. ಹೋರಾಟ ಮತ್ತು ಸಾಮಾಜಿಕ ಕಳಕಳಿಯ ಇಟ್ಟಿಗೆಗಳು ಕಳಚುತ್ತಿವೆ ಎಂಬ ನೋವು ಅವರಿಗಿದೆ. ಅವರು ಒಂದಿಷ್ಟು ರಾಜಕಾರಣದಲ್ಲಿ ರಾಜಿ ಮಾಡಿಕೊಂಡಿದ್ದರೆ ಮುಖ್ಯಮಂತ್ರಿ ಆಗಬಹುದಿತ್ತು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಸಚಿವ ಮಧು ಬಂಗಾರಪ್ಪ, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಶಾಸಕ, ಅಭಿನಂದನಾ ಸಮಿತಿಯ ಗೌರವ ಅಧ್ಯಕ್ಷ ಡಾ. ಜಿ.ಡಿ ನಾರಾಯ ಣಪ್ಪ, ಮಾಜಿ ಸಂಸದ ಆಯನೂರು ಮಂಜುನಾಥ್, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಎಸ್.ರುದ್ರೇಗೌಡರು, ಮೇಯರ್ ಶಿವಕುಮಾರ್, ಎಂ. ಶ್ರೀಕಾಂತ್, ಪದ್ಮನಾಭ ಭಟ್, ಆರ್. ಪ್ರಸನ್ನಕುಮಾರ್, ಲಕ್ಷ್ಮಿ ಶಂಕರ ನಾಯಕ್ ಸೇರಿದಂತೆ ಹಲವರಿದ್ದರು. ವಿ. ರಾಜು ಸ್ವಾಗತಿಸಿದರು. ತೀ.ನ.ಶ್ರೀ ಸ್ವಾಗತಿಸಿದರು.

Exit mobile version