Site icon TUNGATARANGA

ಸಚಿವರನ್ನು ಆಯ್ಕೆ ಮಾಡುವ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು:ಶಿಕ್ಷಣ ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ : ಸಚಿವರನ್ನು ಆಯ್ಕೆ ಮಾಡುವ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ದೆಹಲಿಗೆ ನಿಯೋಗ ಹೋಗುವ ವಿಚಾರ ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಚಿವರು. ಮಂತ್ರಿ ಮಾಡುವ ಬಗ್ಗೆ  ಏನು ಬೇಕಾದರೂ ಕೇಳಿಕೊಳ್ಳಲಿ. ಈ ಬಗ್ಗೆ ನಮ್ಮ ಅಭ್ಯಂತರವಿಲ್ಲ ಎಂದರು.

ಸಚಿವ ಡಿ. ಸುಧಾಕರ್ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ. ಸಚಿವರ ರಾಜೀನಾಮೆ ಪಡೆಯಬೇಕೆಂದು ಪ್ರತಿಪಕ್ಷಗಳು ಒತಾಯಿಸುತ್ತಿವೆ. ಆದರೆ ಕೇವಲ ಎಫ್ ಐಆರ್ ಅಷ್ಟೇ ಅಲ್ಲ. ಕೆಲವರ ಮೇಲೆ ಕ್ರಿಮಿನಲ್ ‌ಪ್ರಕರಣ ಇವೆ. ಎಷ್ಟೋ ಜನರ ಬಂಧನ ಸಹ ಆಗಿದೆ. ಈ ಬಗ್ಗೆ ಸಿಎಂ ಡಿಸಿಎಂ ಪ್ರತಿಕ್ರಿಯೆ ನೀಡಿದ್ದಾರೆ. ಹೀಗಾಗಿ ಈ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಪಿಯುಸಿ ಪೂರಕ ಪರೀಕ್ಷೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲ ಆಗಿದೆ. ಇನ್ನು ರಾಜ್ಯದಲ್ಲಿ ‌ಎನ್ ಇಪಿ‌ ರದ್ದುಪಡಿಸಲಾಗಿದೆ. ಎಸ್ ಇಪಿ‌ ಅನುಷ್ಠಾನಗೊಳ್ಳಬೇಕಿದೆ. ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಒಂದೊಂದೇ ಈಡೇರಿಸುತ್ತಿದೆ. ಈ ಬಗ್ಗೆಯೂ ಮುಖ್ಯಮಂತ್ರಿಗಳು ಗಮನ ಹರಿಸುತ್ತಾರೆ ಎಂದರು.

ಬರಗಾಲ ಘೋಷಣೆ ‌ವಿಚಾರ ಸಂಬಂದ ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಚಿವರು. ಶಿವಮೊಗ್ಗ ಜಿಲ್ಲೆಯಲ್ಲಿ 7 ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲಾಗಿದೆ. ಪರಿಹಾರ ನೀಡುವ ಬಗ್ಗೆ ‌ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಪ್ರಣವಾನಂದ ಸ್ವಾಮೀಜಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಮಧು ಬಂಗಾರಪ್ಪ. ಆ ವಿಷಯದ ಬಗ್ಗೆ ಮಾತನಾಡಲ್ಲ, ಈ ಬಗ್ಗೆ ನಿನ್ನೆಯೇ ಪ್ರತಿಕ್ರಿಯೆ ಕೊಟ್ಟಿದ್ದೇನೆ ಎಂದು ಹೇಳಿದರು.

Exit mobile version