Site icon TUNGATARANGA

ಸೆ.15 : “ಸೌಹಾರ್ದವೇ ಹಬ್ಬ” ನಡಿಗೆ ಸಿಮ್ಸ್ ಮೆಡಿಕಲ್ ಕಾಲೇಜಿನಿಂದ ಸೈನ್ಸ್ ಮೈದಾನದವರೆಗೆ ಆಯೋಜನೆ | ಸಮಿತಿಯ ಸಂಚಾಲಕ ಕೆ.ಪಿ. ಶ್ರೀಪಾಲ್

ಮುಂಬರುವ ಗಣಪತಿ ಮತ್ತು ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ಶಿವಮೊಗ್ಗ ದಲ್ಲಿ ಶಾಂತಿ ಕಾಪಾಡುವ ಹಿನ್ನೆಲೆಯಲ್ಲಿ ನಮ್ಮ ನಡೆಗೆ ಶಾಂತಿಯ ಕಡೆಗೆ ಸಮಿತಿ ವತಿಯಿಂದ ಸೆ.೧೫ರಂದು ಸಂಜೆ ೪ರಿಂದ ೬ ಗಂಟೆಯವರೆಗೆ ಸಿಮ್ಸ್ ಮೆಡಿಕಲ್ ಕಾಲೇಜಿನಿಂದ ಸೈನ್ಸ್ ಮೈದಾನದವರೆಗೆ ಸೌಹಾರ್ದವೇ ಹಬ್ಬ ನಡಿಗೆ ಮತ್ತು ಶಾಂತಿ ಸಭೆ ಆಯೋಜಿಸಲಾಗಿದೆ ಎಂದು ಸಮಿತಿಯ ಸಂಚಾಲಕ ಕೆ.ಪಿ. ಶ್ರೀಪಾಲ್ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗಣಪತಿ ಮತ್ತು ಈದ್‌ಮಿಲಾದ್ ಹಬ್ಬಗಳು ಒಟ್ಟೊಟ್ಟಿಗೆ ಬಂದಿವೆ. ಊರಿನ ಎಲ್ಲಾ ಧರ್ಮದ ಬಂಧುಗಳು ಈ ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ

ಸೌಹಾರ್ದವೇ ಹಬ್ಬ ಎಂಬ ಹೆಸರಿನಲ್ಲಿ ಈ ನಡಿಗೆಯನ್ನು ಹಮ್ಮಿಕೊಳ್ಳಲಾ ಗಿದೆ. ಮೆಗ್ಗಾನ್ ಆಸ್ಪತ್ರೆಯ ಅಂಗಳದಿಂದ ಸೈನ್ಸ್ ಮೈದಾನದವರೆಗೆ ನಡೆಯುವ ಈ ಹಬ್ಬದಲ್ಲಿ ಸುಮಾರು ೧೦ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ, ವಿವಿಧ ರಾಜ ಕೀಯ ಪಕ್ಷಗಳ ಮುಖಂಡರು, ಧಾರ್ಮಿಕ ಮುಖಂಡರು ಇದರಲ್ಲಿ ಪಾಲ್ಗೊಳ್ಳುತ್ತಾರೆ ಎಂದರು.


ಎಲ್ಲಾ ಧರ್ಮದ ಮುಖಂಡರು ಇದರಲ್ಲಿ ಭಾಗವಹಿಸುತ್ತಾರೆ. ರಾಷ್ಟ್ರ ಧ್ವಜ ಹಿಡಿದು ನಾವೆಲ್ಲ ಭಾರತಾಂಬೆಯ ಮಕ್ಕಳು ಎಂಬ ಸಂದೇಶ ಸಾರುತ್ತಾ ನಾವೆಲ್ಲ ಒಂದೇ ಎಂದು ಸಾಗುತ್ತಾರೆ. ಈ ಕಾರ್ಯಕ್ರಮದಲ್ಲಿ ತ್ರಿವರ್ಣ ಧ್ವಜ ಬಿಟ್ಟು ಬೇರೆ ಯಾವುದೇ ರೀತಿಯ ಧ್ವಜಗಳಿಗಾಗಲಿ, ಬ್ಯಾನರ್‌ಗಳಿಗಾಗಲಿ ಅವಕಾಶ ಇಲ್ಲ ಎಂದರು.


ರೈತಮುಖಂಡ ಹೆಚ್.ಆರ್. ಬಸವರಾಜಪ್ಪ ಮಾತನಾಡಿ, ಸಂವಿಧಾನದಲ್ಲಿ ಎಲ್ಲಾ ಜಾತಿ, ಧರ್ಮಗಳು ಒಂದೇ. ಈ ನಾಡಿನಲ್ಲಿ ಎಲ್ಲಾ ಧರ್ಮದವರು ಒಟ್ಟಾಗಿ ಬಾಳಬೇಕಾಗಿದೆ. ಶಿವ ಮೊಗ್ಗದಲ್ಲಿ ಶಾಂತಿ ನೆಲೆಸಬೇಕಾಗಿದೆ ಎಂದರು.


ಧರ್ಮಗುರು ಅಬ್ದುಲ್‌ಲತೀಫ್‌ಸಅದಿ ಮಾತನಾಡಿ, ಈದ್‌ಮಿಲಾದ್ ಗಣಪತಿಹಬ್ಬದಲ್ಲಿ ಮೆರವಣಿಗೆಯೇ ಪ್ರದಾನವಾಗಿರುತ್ತದೆ. ಈ ಎರಡೂ ಮೆರವಣಿಗೆಗಳು ಮಾದರಿಯಾಗಿರಲಿ. ಸೈನ್ಸ್ ಮೈದಾನದಲ್ಲಿ ನಡೆಯುವ ಸಭೆಯಲ್ಲಿ ಬೆಕ್ಕಿನಕಲ್ಮಠ, ಸಿರಿಗೆರೆ, ಬಸವಕೇಂದ್ರ, ಜಾಮಿ ಯಾಮಸೀದಿ, ಕ್ರಿಶ್ಚಿಯನ್ ಧರ್ಮಗುರುಗಳು ಸೇರಿದಂತೆ ಹಲವರು ಭಾಗವಹಿಸುತ್ತಾರೆ ಎಂದರು.


ಪತ್ರಿಕಾ ಗೋಷ್ಠಿಯಲ್ಲಿ ಪ್ರಮುಖರಾದ ಗುರುಮೂರ್ತಿ, ಫಾ. ಕ್ಲಿಫರ್ಡ್‌ರೋಷನ್ ಪಿಂಟೋ, ಕಿರಣ್‌ಕುಮಾರ್, ಕೃಷ್ಣಮೂರ್ತಿ, ವಸೀಫ್, ಹರತಾಳು ಸುರೇಶ್ ಇತರರಿದ್ದರು.

Exit mobile version