ಅನಿಯಂತ್ರಿತ ಮೂತ್ರ ಸೋರುವಿಕೆ ಸಾಮಾನ್ಯವಾಗಿ ೩೦% ಮಹಿಳೆಯರನ್ನು ಭಾದಿಸುತ್ತದೆ. ಇದು ಮಹಿಳೆಯರನ್ನು ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿ ಕುಗ್ಗಿಸುತ್ತದೆ. ಇದರಲ್ಲಿ ೦.೧% – ೦.೨% ನ? ಮೂತ್ರ ಸೋರುವಿಕೆಯು ಗರ್ಭಕೋಶದ ಶಸ್ತ್ರಚಿಕಿತ್ಸೆಯ ನಂತರ ಮೂತ್ರಚೀಲದಲ್ಲಿ ರಂಧ್ರವಾಗಿ ಆಗಬಹುದಾಗಿದೆ.
ಇದೇ ರೀತಿಯಾಗಿದ್ದ ಗರ್ಭಕೋಶದ ಶಸ್ತ್ರಚಿಕಿತ್ಸೆಯ ನಂತರ ಮೂತ್ರಚೀಲಕ್ಕೆ ರಂಧ್ರವಾಗಿ ಯೋನಿಮಾರ್ಗದ ಮೂಲಕ ಮೂತ್ರ ಸೋರುತ್ತಿದ್ದ ತೊಂದರೆಯನ್ನು ಎನ್‌ಯು ಆಸ್ಪತ್ರೆಯ ಪ್ರಖ್ಯಾತ ಯೂರೋಲಾಜಿಸ್ಟ್ ಹಾಗೂ ರೋಬೋಟಿಕ್ ಸರ್ಜನ್ ಡಾ||. ಪ್ರದೀಪ್ ಅವರ ತಂಡ ಯಶಸ್ವಿಯಾಗಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಿ ಮಹಿಳೆಯ ಜೀವನದಲ್ಲಿ ಮತ್ತೆ ಮಂದಹಾಸವನ್ನು ತಂದಿದ್ದಾರೆ.
ಸು? ಎಂಬ ೩೮ ವ?ದ ಮಹಿಳೆಯು ಮುಟ್ಟಿನ ತೊಂದರೆಯಿಂದಾಗಿ ಬಳಲುತ್ತಿದ್ದರು. ಅದಕ್ಕಾಗಿ ಶಸ್ತ್ರಚಿಕಿತ್ಸೆಯ ಮೂಲಕ ಗರ್ಭಕೋಶವನ್ನು ತೆಗೆಸಿಕೊಂಡಿದ್ದರು. ಆಪರೇಶನ್ ಆಗಿ ಮಾರನೇ ದಿನದ ನಂತರ ಅವರ ಯೋನಿ ಮಾರ್ಗದ ಮೂಲಕ ನಿರಂತರವಾಗಿ ಮೂತ್ರ ಸೋರಲು ಪ್ರಾರಂಭಿಸಿತು ಹಾಗೂ ಇದು ಎರಡು ತಿಂಗಳವರೆಗೆ ಮುಂದುವರೆದಿತ್ತು.
ಇದರಿಂದಾಗಿ ಅವರು ಮಾನಸಿಕವಾಗಿ ಕುಗ್ಗಿಹೋಗಿ ಮನೆಯಿಂದಾಚೆ ಬರಲು ಸಹ ಆಗದಿರುವ ಪರಿಸ್ಥಿತಿ ಹಾಗೂ ೨೪ ಗಂಟೆ ಡೈಪರ್ ಹಾಕಿಕೊಳ್ಳುವಂತಾಗಿತ್ತು.
ಯಾವುದೇ ಚಿಕಿತ್ಸೆ ಪರಿಣಾಮ ಬೀರದಿದ್ದಾಗ ಅವರ ಸ್ನೇಹಿತೆಯರ ಸಲಹೆಯಂತೆ ಶಿವಮೊಗ್ಗದ ಮಾಚೇನಹಳ್ಳಿಯಲ್ಲಿರುವ ಎನ್‌ಯು ಆಸ್ಪತ್ರೆಗೆ ಭೇಟಿ ನೀಡಿದರು. ಇವರನ್ನು ಕೂಲಂಕ?ವಾಗಿ ಪರೀಕ್ಷಿಸಿದ ತಜ್ಞ ವೈದ್ಯರು, ಅವರ ಮೂತ್ರ ಚೀಲಕ್ಕೆ ರಂಧ್ರವಾಗಿ ಯೋನಿ ಮಾರ್ಗಕ್ಕೆ ಜೋಡಣೆಯಾಗಿರುವುದನ್ನು ಪತ್ತೆಹಚ್ಚಿ ರೋಬೋಟಿಕ್
ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಸರಿಪಡಿಸಿರುತ್ತಾರೆ. ಈಗ ಮೂತ್ರ ಸೋರುವಿಕೆ ಸಂಪೂರ್ಣ ನಿಂತಿದ್ದು, ಸಹಜ ಜೀವನಕ್ಕೆ ಮರಳಿದ್ದಾರೆ ಹಾಗೂ ಎನ್‌ಯು ಆಸ್ಪತ್ರೆ ಮತ್ತು ವೈದ್ಯರ ತಂಡಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.