Site icon TUNGATARANGA

ವಿದ್ಯುತ್ ಭೂಗತ ಕೇಬಲ್‍ಗಳನ್ನು ಅಳವಡಿಕೆ ಹಿನ್ನೆಲೆಯಲ್ಲಿ |ಭೂಮಿ ಅಗೆತ ಮುನ್ನ ಪೂರ್ವಾನುಮತಿ ಕಡ್ಡಾಯ

ಶಿವಮೊಗ್ಗ, ಸೆಪ್ಟೆಂಬರ್ 12,
ಮೆಸ್ಕಾಂ ಶಿವಮೊಗ್ಗ ನಗರ ಉಪವಿಭಾಗ-1 ರ ಘಟಕ-2 ಮತ್ತು 3 ರ ವ್ಯಾಪ್ತಿಯಲ್ಲಿ ಮಾದರಿ ಉಪವಿಭಾಗ ಯೋಜನೆಯಡಿ ವಿದ್ಯುತ್ ಭೂಗತ ಕೇಬಲ್‍ಗಳನ್ನು ಅಳವಡಿಸಿರುವ ಕೆಳಕಂಡ ಪ್ರದೇಶಗಳ ರಸ್ತೆಗಳಲ್ಲಿ ಗಣೇಶ ಹಬ್ಬದ ಪ್ರಯುಕ್ತ ಭೂಮಿಯನ್ನು ಅಗೆಯುವ ಮೊದಲು ಪೂರ್ವಾನುಮತಿ ಪಡೆಯುವುದು ಕಡ್ಡಾಯ.


ನೆಹರು ರಸ್ತೆ, ಬಿ.ಹೆಚ್ ರಸ್ತೆ, ದುರ್ಗಿಗುಡಿ ಮುಖ್ಯ ರಸ್ತೆ, ಪಾರ್ಕ್ ಬಡಾವಣೆ, ತಿಲಕ್ ನಗರ, ಸರ್.ಎಂ.ವಿ ರಸ್ತೆ, ಬಾಲ್‍ರಾಜ್ ಅರಸ್ ರಸ್ತೆ, ಗಾಂಧಿ ಪಾರ್ಕ್, ಲೂರ್ದು ನಗರ, ಕಾನ್ವಂಟ್ ರಸ್ತೆ, ಬಾಪುಜಿ ನಗರ, ಚರ್ಚ್ ಕಾಂಪೌಂಡ್, ಟಿ.ಜಿ.ಎನ್ ಬಡಾವಣೆ, ಟ್ಯಾಂಕ್ ಬಂಡ್ ರಸ್ತೆ ಹಾಗೂ ಮೀನಾಕ್ಷಿ ಭವನ, ಗುಂಡಪ್ಪಶೆಡ್, ಶೇμÁದ್ರಿಪುರಂ, ಜಯನಗರ, ಬಸವನಗುಡಿ, ವೆಂಕಟೇಶ್ವರ ನಗರ,

ಕೃಷಿ ನಗರ ಈ ಪ್ರದೇಶಗಳಲ್ಲಿ ಸಂಪೂರ್ಣವಾಗಿ ಭೂಗತ ಕೇಬಲ್ ಅಳವಡಿಸಿದ್ದು, ವಿದ್ಯುತ್ ಮಾರ್ಗ ಚಾಲನೆಯಲ್ಲಿರುತ್ತದೆ. ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ರಸ್ತೆಗಳಲ್ಲಿ ಭೂಮಿಯನ್ನು ಅಗೆಯುವಾಗ ವಿದ್ಯುತ್ ಅಪಘಾತವಾಗಿ ಪ್ರಾಣಾಪಾಯವಾಗುವ ಸಂಭವ ಹೆಚ್ಚಾಗಿರುತ್ತದೆ.

|
    ಆದ್ದರಿಂದ ಈ ಪ್ರದೇಶಗಳಲ್ಲಿ ಭೂಮಿಯನ್ನು ಅಗೆಯುವ ಮೊದಲು ಸಂಬಂಧಪಟ್ಟ ವ್ಯಾಪ್ತಿಯ ಮೆಸ್ಕಾಂ, ಶಾಖಾಧಿಕಾರಿಯವರ ಗಮನಕ್ಕೆ ತಂದು, ಮೆಸ್ಕಾಂ ಸಿಬ್ಬಂದಿಯವರ ಪೂರ್ವಾನುಮತಿ ಪಡೆಯಬೇಕಾಗಿ ಮಂ.ವಿ.ಸ.ಕಂ ಶಿವಮೊಗ್ಗ ನಗರ ಉಪ ವಿಭಾಗ-1 ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version