Site icon TUNGATARANGA

ಕಬ್ಬಿಣ ಕಳ್ಳತನ: ಆರೋಪಿಯನ್ನು ವಾಹನ ಸಮೇತ ವಶಕ್ಕೆ ಪಡೆದ ಪೊಲೀಸರು

ಇಲ್ಲಿನ ಕೈಗಾರಿಕಾ ವಸಾಹತ್ತು ಪ್ರದೇಶದಲ್ಲಿ ಕಬ್ಬಿಣ ವಸ್ತುಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ವಾಹನ ಸಮೇತ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.


ನಗರವ್ಯಾಪ್ತಿಯ ಕೈಗಾರಿಕಾ ವಲಯದಲ್ಲಿ ಕಬ್ಬಿಣ ಕಳ್ಳತನವಾಗುತ್ತಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಮನಗರದ ಸೈಯದ್ ಅಸ್ಲಮ್ ಯಾನೆ ಅಸ್ಲಮ್ ದಸ್ತಗಿರಿ ಮಾಡಿ

ವಿಚಾರಣೆ ಒಳಪಡಿಸಲಾಗಿತ್ತು. ಬಂಧಿತ ಸೈಯದ್ ಅಸ್ಲಮ್‌ನಿಂದ ೨೫ಸಾವಿರ ರೂ. ಮೌಲ್ಯದ ಕಬ್ಬಿಣದ ಸಾಮಗ್ರಿಗಳು ಹಾಗೂ ಕಳವು ಮಾಡಲು ಬಳಕೆ ಮಾಡಿದ್ದ ೧ ಲಕ್ಷ ರೂ. ಮೌಲ್ಯದ ಆಟೋವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಂ iನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


ಈ ಹಿನ್ನೆಲೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್‌ಕುಮಾರ್ ಭೂಮ್‌ರೆಡ್ಡಿ ಸೂಚನೆಯಂತೆ, ಡಿವೈಎಸ್‌ಪಿ ಗೋಪಾಲಕೃಷ್ಣ ಟಿ. ನಾಯ್ಕ್, ಸರ್ಕಲ್ ಇನ್ಸ್‌ಪೆಕ್ಟರ್‌ಗಳಾದ ಸೀತಾರಾಂ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಟಿ.ಡಿ.ಸಾಗರಕರ್, ಸಿಬ್ಬಂದಿಗಳಾದ ರತ್ನಾಕರ್, ಪ್ರಭಾಕರ್, ವಿಶ್ವನಾಥ್ ಇತರರು ಪಾಲ್ಗೊಂಡಿದ್ದರು.

Exit mobile version