Site icon TUNGATARANGA

ಬಂಜೆತನ ಮುಕ್ತ ಕರ್ನಾಟಕಕ್ಕಾಗಿ ಘರ್ ಘರ್ ಗರ್ಭಗುಡಿ ಜಾಗೃತಿ ಜಾಥ

ಬಂಜೆತನ ಮುಕ್ತ ಕರ್ನಾಟಕಕ್ಕಾಗಿ ಘರ್ ಘರ್ ಗರ್ಭಗುಡಿ ಜಾಗೃತಿ ಜಾಥವನ್ನು ರಾಜ್ಯದ ೩೧ ಜಿಲ್ಲೆಗಳಲ್ಲಿ ೫ಸಾವಿರ ಕಿ.ಮೀ. ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳ ಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ದೀಪಕ್ ಆರ್. ಹುಲಿದೇವರಬನ ತಿಳಿಸಿದರು.


ಅವರು ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗರ್ಭಗುಡಿ ಐವಿಎಫ್ ಸೆಂಟರ್, ಗರ್ಭಜ್ಞಾನ್ ಫೌಂಡೇಶನ್ ಹಾಗೂ ಸುವರ್ಣ ದೀಪ ವಿಷ್ಯುಯಲಿ ಇಂಪೇರ‍್ಡ್ ಎಂಡ್ ಫಿಸಿಕಲಿ ಚಾಲೆಂಜ್ಡ್ ಡೆವಲಪ್ ಮೆಂಟ್ ಟ್ರಸ್ಟ್ ವತಿಯಿಂದ ರಾಜ್ಯಾದ್ಯಂತ ಬೀದಿನಾ ಟಕ, ಮನೆಮನೆಗೆ ಕರಪತ್ರ ಹಂಚುವ ಮೂಲಕ ಬಂಜೆತನ ಮುಕ್ತ ಕರ್ನಾಟಕ ಅಭಿಯಾನ ಆರಂಭಿಸಲಾಗಿದೆ ಎಂದು ಹೇಳಿದರು.


ಬಂಜೆತನ ಒಂದು ಶಾಪವಲ್ಲ. ಆಧುನಿಕ ಚಿಕಿತ್ಸೆ ಮೂಲಕ ಪ್ರತಿಹೆಣ್ಣು ತಾಯ್ತನವನ್ನು ಹೊಂದಲು ಅವಕಾಶವಿದೆ. ಇದಕ್ಕಾಗಿ ಗರ್ಭಗುಡಿ ಐವಿಎಫ್ ಸೆಂಟರ್ ಸೇರಿದಂತೆ ನಮ್ಮ ಟ್ರಸ್ಟ್ ಸ್ವಯಂಸೇವೆ ಮಾಡಿಕೊಂಡು ಬರುತ್ತಿದೆ. ಡಾ. ಆಶಾ ಎಂಬ ವೈದ್ಯರು ನಮ್ಮ ಸಂಸ್ಥೆಯಲ್ಲಿ ಹೆಸರು

ನೊಂದಾಯಿಸಿಕೊಂಡವರಿಗೆ ಉಚಿತವಾದ ಮಾಹಿತಿಯನ್ನು ನೀಡಲಿದ್ದಾರೆ. ಬಹುತೇಕ ಸಂದರ್ಭದಲ್ಲಿ ಬಂಜೆತನಕ್ಕೆ ಹೆಣ್ಣೇ ಕಾರಣ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಗಂಡಿನ ತಪ್ಪಿದ್ದರೂ ಅದು ಪರಿಗಣನೆಗೆ ಬರುತ್ತಿಲ್ಲ. ಮಕ್ಕಳಿಲ್ಲ ಎನ್ನುವ ಕಾರಣಕ್ಕೆ ವಿವಾಹ ವಿಚ್ಚೇದನದಂತಹ ಪ್ರಕರಣ ಗಳು ಜಾಸ್ತಿಯಾಗುತ್ತಿರುವುದು ಕಳವಳಕಾರಿ ಸಂಗತಿ. ಮನೆಯಲ್ಲಿ ಒಂದು ಮಗುವಿದ್ದರೆ ವಿವಾಹ ವಿಚ್ಚೇದನ ದಂತಹ ಘಟನೆಗಳು ನಡೆಯುವುದಿಲ್ಲ ಎಂದರು.


ಶನಿವಾರ ಶಿವಮೊಗ್ಗ ಜಿಲ್ಲೆಯಲ್ಲಿ ಅಭಿಯಾನ ನಡೆಸಲಿದ್ದು, ಭಾನುವಾರ ಗದಗ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.


ಗೋಷ್ಟಿಯಲ್ಲಿ ಭಾಗ್ಯಶ್ರೀ, ಮಹಿನಾ ನೆಲಮಂಗಲ, ಪ್ರಶಾಂತ್, ಮಂಜುನಾಥ್, ರೋಜಾ, ಅನು, ರೇಖಾಬಾಯಿ, ಮಂಜುನಾಥ್ ಮತ್ತತರರಿದ್ದರು.

Exit mobile version