ಚಕ್ರವರ್ತಿ ಸೂಲಿಬೆಲೆ ಒಬ್ಬ ಬಾಡಿಗೆ ಭಾಷಣಕಾರ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್ ಸುಂದರೇಶ್ ಹೇಳಿದರು..
ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಕ್ರವರ್ತಿ ಸೂಲಿಬೆಲೆಯವರ ಕೆಲಸ ಎಂದರೆ ಸುಳ್ಳು ಭಾಷಣ ಮಾಡುವುದು ಅಷ್ಟೆ.
ಅದು ಅವರ ವೃತ್ತಿ ಇರಬಹುದು. ಆದರೆ ಒಂದು ಹೆಣ್ಣಿನ ಬಗ್ಗೆ ಹೀಯಾಳಿಸುವುದು ಅಶ್ಲೀಲ ವಾಗಿ ಮಾತನಾಡುವುದು ಸರಿಯಲ್ಲ. ಅವರು ಮಾತನಾಡದೆ ಇರಬಹುದು. ಆದರೆ ಸಾಮಾಜಿಕ ಜಾಲತಾಣದಲ್ಲಿ ಅವರ ಫೇಸ್ಬುಕ್ ಖಾತೆಯಿಂದ ಒಂದುಹೆಣ್ಣನ್ನು ಅಗೌರವಿಸುವಂತಹ ಹೇಳಿಕೆ ಬಂದಾಗಲೂ ಕೂಡ ಅದಕ್ಕೆ ವಿಷಾದ ವ್ಯಕ್ತಪಡಿಸದೆ ಸಮರ್ಥಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದರು.
ಸೂಲಿಬೆಲೆ ವಿರುದ್ಧ ದೂರು ಕೊಟ್ಟ ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಉಪಾಧ್ಯಕ್ಷೆ ಸೌಗಂಧಿಕ ರಘುನಾಥ್ ಮಾತನಾಡಿ, ಒಂದು ಹೆಣ್ಣಿನ ಬಗ್ಗೆ ಅಗೌರವ ಕೊಡುವವರು ಯಾರೇ ಆಗಲಿ ಅವರು ಉನ್ನತ ಮನುಷ್ಯ ಎಂದು ಹೇಳುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಉತ್ತರ ನೀಡಿದ್ದಕ್ಕೆ ಅವರ ಹೆಸರಿನ
ಖಾತೆಯಿಂದ ನನ್ನನ್ನು ತೀರಾ ಕೆಳಮಟ್ಟದಲ್ಲಿ ಮತ್ತು ಅಶ್ಲೀಲವಾಗಿ ಕಾಮೆಂಟ್ಸ್ ಹಾಕಲಾಗಿದೆ. ಹೀಗಿದ್ದರೂ ಕೂಡ ಇದು ತಪ್ಪು ಎಂದು ಅವರು ಹೇಳಿಲ್ಲ ಸಾಮಾಜಿಕ ಜಾಲತಾಣ ದಲ್ಲಿ ಬೇಕಾದಷ್ಟು ಅನಗತ್ಯ ಪೋಸ್ಟ್ ಬರುತ್ತವೆ ನಿಜ. ಆದರೆ ಒಂದು ಹೆಣ್ಣಿನ ಇಡೀ ಕುಟುಂಬವನ್ನು ಹೀಯಾಳಿಸಲಾಗಿದೆ. ಆದ್ದರಿಂದಲೇ ದೂರು ಕೊಟ್ಟಿದ್ದೇನೆ. ಸೂಲಿಬೆಲೆ ಅವರು ಒಂದು ವಿಷಾದ ವ್ಯಕ್ತಪಡಿಸಿದ್ದರೆ ಅದು ಮುಗಿದುಹೋಗುತ್ತಿತ್ತು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸ್ಟೆಲ್ಲಾ ಮಾರ್ಟಿನ್, ಚಂದ್ರಭೂಪಾಲ್, ಅಕ್ರಂ ಪಾಶಾ, ಶಿವಾನಂದ್, ಶಿ.ಜು. ಪಾಷಾ, ಅರ್ಚನಾ, ಶಮೀಮ್ ಬಾನು ಮುಂತಾದವರಿದ್ದರು.