Site icon TUNGATARANGA

ಶಿವಮೊಗ್ಗ ವಿಮಾನನಿಲ್ದಾಣಕ್ಕೆ ನಿರಂತರ ಸರ್ಕಾರಿ ಬಸ್ ಚಾಲನೆ/ ಎಸಿ ಬಸ್ ಪ್ರಯಾಣದರ ಇಲ್ಲಿದೆ ನೋಡಿ


ಶಿವಮೊಗ್ಗ, ಸೆ.1;

ಇಲ್ಲಿನ ವಿಮಾನ ನಿಲ್ದಾಣದಿಂದ ಆ.31 ರಿಂದ ವಿಮಾನ ಹಾರಾಟ ಪ್ರಾರಂಭವಾಗಿದ್ದು, ವಿಮಾನ ನಿಲ್ದಾಣಕ್ಕೆ ಸಾರ್ವಜನಿಕ ಪ್ರಯಾಣಿಕರು ಪ್ರಯಾಣಿಸಲು ಅನುಕೂಲವಾಗುವಂತೆ ಕ.ರಾ.ರ.ಸಾ.ನಿಗಮವು ಶಿವಮೊಗ್ಗ-ವಿಮಾನ ನಿಲ್ದಾಣ- ಕಾಚಿನಕಟ್ಟೆಗೆ ನೂತನ ಸಾರಿಗೆ ಕಾರ್ಯಾಚರಣೆಯ ಸಮಯದ ವಿವರವನ್ನು ನೀಡಲಾಗಿದೆ.

ಶಿವಮೊಗ್ಗದಿಂದ ಬೆ.8.30 ರಿಂದ ಪ್ರತಿ ಅರ್ಧ ಗಂಟೆಗೊಮ್ಮೆ ಹಾಗೂ ಕಾಚಿನಕಟ್ಟೆಯಿಂದ ಬೆ.9.00 ರಿಂದ ಪ್ರತಿ ಅರ್ಧ ಗಂಟೆಗೊಮ್ಮೆ ಸಂಜೆ 6.30 ವರೆಗೆ ಬಸ್‍ಗಳ ಓಡಾಟವಿರುತ್ತದೆ. ಸಾರ್ವಜನಿಕರು ಈ ಸೌಲಭ್ಯದ ಉಪಯೋಗ ಪಡೆದುಕೊಳ್ಳುವಂತೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸಾರಿಗೆ ನಿಗಮದ ಹವಾ ನಿಯಂತ್ರಿತ ವಾಹನಗಳ ಪ್ರಯಾಣದರ ಇಂತಿದೆ ನೋಡಿ

ಶಿವಮೊಗ್ಗ ವಿಭಾಗದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ಪ್ರಸ್ತುತ 04 ಹವಾ ನಿಯಂತ್ರಿತ ವಾಹನಗಳು ಕಾರ್ಯಾಚರಣೆಯಾಗುತ್ತಿದ್ದು, ಪ್ರಯಾಣಿಕರು ಹವಾ ನಿಯಂತ್ರಿತ ವಾಹನಗಳಲ್ಲಿ ಪ್ರಯಾಣಿಸಲು ಅನುಕೂಲವಾಗುವಂತೆ ಪ್ರಯಾಣ ದರವನ್ನು ನಿರ್ಧರಿಸಿ ಬಸ್‍ಗಳನ್ನು ಚಾಲನೆಗೊಳಿಸಿದೆ.

ಈ ವಾಹನಗಳ ಪ್ರಯಾಣದರ ವಾರದ ದಿನಗಳಾದ ಸೋಮವಾರದಿಂದ ಗುರುವಾರದವರೆಗೆ ರೂ.550/- ಮತ್ತು ವಾರಾಂತ್ಯ ದಿನಗಳಾದ ಶುಕ್ರವಾರ ದಿಂದ ಭಾನುವಾರದವರೆಗೆ ಪ್ರಯಾಣ ದರ ರೂ.600/- ಆಗಿರುತ್ತದೆ. ಶಿವಮೊಗ್ಗದಿಂದ ನಿರ್ಗಮನವಾಗುವ ಸಮಯ ಬೆ:11-00, ಮ:01-00, ರಾ:10-00, ರಾ:11-00 ಮತ್ತು ಬೆಂಗಳೂರಿನಿಂದ ನಿರ್ಗಮನವಾಗುವ ಸಮಯ ಬೆ:10-00, ಬೆ:11-00, ರಾ:11-00, ರಾ:11-30 ಆಗಿದೆ ಎಂದು ಶಿವಮೊಗ್ಗ ವಿಭಾಗದ ಕ.ರಾ.ರ.ಸಾ.ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version